ರಸ್ತೆಯಲ್ಲಿ ದಿಢೀರನೆ ಅಡ್ಡ ಬಂದ ಮಗುವಿನ ಜೀವ ಉಳಿಸಲು ಹೊಗಿ ಸ್ಕಾರ್ಪಿಯೋ ಪಲ್ಟಿಯಾಗಿ ಓರ್ವ ಸಾವನ್ನಪ್ಪಿರುವ ದುರ್ಘಟನೆ ಬೀದರ್ ಜಿಲ್ಲೆ ಹುಲಸೂರು ತಾಲ್ಲೂಕಿನ ಸೊಲದಾಬಕಾ ಗ್ರಾಮದ ಬಳಿ ನಡೆದಿದೆ.
ಬೀದರ್ (ಮಾ.19): ರಸ್ತೆಯಲ್ಲಿ ದಿಢೀರನೆ ಅಡ್ಡ ಬಂದ ಮಗುವಿನ ಜೀವ ಉಳಿಸಲು ಹೊಗಿ ಸ್ಕಾರ್ಪಿಯೋ ಪಲ್ಟಿಯಾಗಿ ಓರ್ವ ಸಾವನ್ನಪ್ಪಿರುವ ದುರ್ಘಟನೆ ಬೀದರ್ ಜಿಲ್ಲೆ ಹುಲಸೂರು ತಾಲ್ಲೂಕಿನ ಸೊಲದಾಬಕಾ ಗ್ರಾಮದ ಬಳಿ ನಡೆದಿದೆ.
ಸಾಮಾನ್ಯವಾಗಿ ವಾಹನಗಳನ್ನು ಚಾಲನೆ ಮಾಡುವಾಗ ನಾಯಿ, ಬೆಕ್ಕು, ಹಂದಿ ಸೇರಿ ಕೆಲವು ಪ್ರಾಣಿಗಳು ದಿಢೀರನೆ ಅಡ್ಡಬರುವುದು ಸಾಮಾನ್ಯವಾಗಿದೆ. ಇನ್ನು ಮಕ್ಕಳು ಕೂಡ ವಾಹನಗಳು ಬರುತ್ತಿರುವುದರ ಬಗ್ಗೆ ಅರಿವಿಲ್ಲದೇ ಏಕಾಏಕಿ ರಸ್ತೆಯನ್ನು ದಾಟಲು ಓಡುತ್ತಾರೆ. ಹೀಗೆ ರಸ್ತೆಯನ್ನು ದಾಟಲು ಓಡಿಬಂದ ಮಗುವಿನ ಪ್ರಾಣವನ್ನು ಉಳಿಸಲು ಮುಂದಾದ ಸ್ಕಾರ್ಪಯೋ ವಾಹನ ಚಾಲಕ, ಕಾರನ್ನು ಜೋರಾಗಿ ತಿರುಗಿಸಿದ್ದಾನೆ. ಆದರೆ, ವೇಗವಾಗಿ ಹೋಗುತ್ತಿದ್ದ ವಾಹನವನ್ನು ದಿಢೀರನೆ ತಿರುಗಿಸಿದ ಪರಿಣಾಮ ಸ್ಥಳದಲ್ಲಿಯೇ ಕಾರು ಪಲ್ಟಿಯಾಗಿದೆ. ಇದರಿಂದ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಉಳಿದವರು ಗಾಯಗೊಂಡಿದ್ದಾರೆ.
Breaking: ಪರೀಕ್ಷೆ ವೇಳೆಯಲ್ಲಿಯೇ ಕೊಡಗಿನ 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ
ಮದುವೆಗೆ ಹೊರಟವ ಮಸಣ ಸೇರಿದ: ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಖಜುರಿ ಗ್ರಾಮದದಿಂದ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಸಿದ್ದಾಪುರ ಗ್ರಾಮಕ್ಕೆ ಮದುವೆಯಲ್ಲಿ ಇದ್ದ ಮದುವೆಗೆ 6 ಜನರು ಸ್ಕಾರ್ಪಿಯೋ ವಾಹನದಲ್ಲಿ ಹೋಗುತ್ತಿದ್ದರು. ಇನ್ನು ಮದುವೆಯ ಮುಹೂರ್ತ ಮುಗಿದು ಹೋಗುವ ಮೊದಲೇ ಮದುವೆ ಮನೆಯನ್ನು ಸೇರಿಕೊಳ್ಳಬೇಕು ಎಂದು ತುಸು ವೇಗವಾಗಿಯೇ ಹೋಗುತ್ತಿದ್ದರು. ಆದರೆ, ರಸ್ತೆಯಲ್ಲಿ ಮಗುವೊಂದು ದಿಡೀರನೆ ಅಡ್ಡಬಂದಿದೆ. ಕಾರು ಮಗುವಿಗೆ ಗುದ್ದುವುದನ್ನು ತಪ್ಪಿಸಲು ಮುಂದಾದಾಗ ಪಲ್ಟಿಯಾಗಿ ದುರ್ಘಟನೆ ಸಂಭವಿದೆ.
ಸ್ಥಳೀಯರಿಂದ ಗಾಯಾಳುಗಳ ರಕ್ಷಣೆ: ಈ ದುರ್ಘಟನೆಯಲ್ಲಿ ಒಬ್ಬ ಸಾವನ್ನಪ್ಪಿದ್ದು, ಉಳಿದ 5 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ವಾಹನ ಅಪಘಾತದಿಂದ ಸಾವು ನೋವಿನ ನಡುವೆ ಒದ್ದಾಡುತ್ತಿದ್ದವರನ್ನು ಕಾರಿನಿಂದ ರಕ್ಷಣೆ ಮಾಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಹತ್ತಿರದ ಹುಲಸೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತದೆ. ನಂತರ, ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಎಕ್ಸ್‌ಪ್ರೆಸ್ ವೇ ಟೋಲ್ ತಪ್ಪಿಸಲು ಒನ್‌ವೇನಲ್ಲಿ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್: ಬೈಕ್‌ಗೆ ಗುದ್ದಿ ಸವಾರ ಸಾವು
ಕೊಡಗು ವಿದ್ಯಾರ್ಥಿನಿ ಆತ್ಮಹತ್ಯೆ : ರಾಜ್ಯದಲ್ಲಿ ಪರೀಕ್ಷೆಗಳು ಆರಂಭವಾದ ಕಳೆದೊಂದು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಿವರಳ್ಳಿ ಗ್ರಾಮದಲ್ಲಿ ನಡೆದಿದೆ. ರಾಜ್ಯಾದ್ಯಂತ ಮಾ.13 ರಿಂದ ವಾರ್ಷಿಕ ಪರೀಕ್ಷೆಗಳು ಆರಂಭವಾಗಿವೆ. 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ (5 ಮತ್ತು 8ನೇ ತರಗತಿ ಬಿಟ್ಟು) ಪರೀಕ್ಷೆಗಳು ನಡೆಯುತ್ತಿದ್ದು, ಎಲ್ಲರೂ ಪರೀಕ್ಷೆಯ ಮೂಡ್‌ನಲ್ಲಿದ್ದಾರೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿನಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಆದರೆ, ಮನೆಯವರು ಯಾವ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂಬುದು ಮಾತ್ರ ಈವರೆಗೆ ಯಾರಿಗೂ ಗೊತ್ತಾಗಿಲ್ಲ.