ಮದುವೆಯಾಗಲು ನಿರಾಕರಿಸಿದಳೆಂದು ದುರುಳರು ಶಾಲಾ ಶಿಕ್ಷಕಿಯನ್ನೇ ಅಪಹರಿಸಿರುವ ಘಟನೆ ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯ ಬಳಿ ಇಂದು ಬೆಳಗ್ಗೆ ನಡೆದಿದೆ. ಅರ್ಪಿತಾ, ಅಪಹರಣಕ್ಕೊಳಗಾದ ಶಿಕ್ಷಕಿ.
ಹಾಸನ (ನ.30): ಮದುವೆಯಾಗಲು ನಿರಾಕರಿಸಿದಳೆಂದು ದುರುಳರು ಶಾಲಾ ಶಿಕ್ಷಕಿಯನ್ನೇ ಅಪಹರಿಸಿರುವ ಘಟನೆ ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯ ಬಳಿ ಇಂದು ಬೆಳಗ್ಗೆ ನಡೆದಿದೆ.
ಅರ್ಪಿತಾ, ಅಪಹರಣಕ್ಕೊಳಗಾದ ಶಿಕ್ಷಕಿ. ಶಿಕ್ಷಕಿ ಕೆಲಸ ಮಾಡುತ್ತಿದ್ದ ಶಾಲೆ ಮುಂಭಾಗ ಅಪಹರಿಸಿರೋ ದುರುಳರು. ಇನ್ನೋವಾ ಕಾರಿನಲ್ಲಿ ಬಂದು ಅಪಹರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿಕ್ಷಕಿ ಪ್ರತಿರೋಧ ತೋರಿದರೂ ಬಿಡದ ಕಿರಾತಕರು.
ಮಗಳನ್ನೇ ಅಪಹರಿಸಿದ ಒತ್ತೆಯಾಳು ತಂದೆ: 12 ಗಂಟೆಯಾದ್ರೂ ಏರ್‌ಪೋರ್ಟ್ ಬಂದ್; 60ಕ್ಕೂ ಹೆಚ್ಚು ವಿಮಾನ ಹಾರಾಟ ಸ್ಥಗಿತ!
ಘಟನೆ ಹಿನ್ನೆಲೆ
ಕಳೆದ 15 ದಿನಗಳ ಹಿಂದೆ ಅರ್ಪಿತಾಳ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಮಾಡಲು ಮನೆಗೆ ಬಂದಿದ್ದ ರಾಮು ಎಂಬ ವ್ಯಕ್ತಿ ಮತ್ತವನ ಪೋಷಕರು. ಇವರು ಅರ್ಪಿತಾ ಸಂಬಂಧಿ ಎಂದು ಹೇಳಲಾಗಿದೆ. ಮದುವೆ ಪ್ರಸ್ತಾಪ ಮಾಡಿದಾಗ, ಅರ್ಪಿತಾ ಹಾಗೂ ಮನೆಯವರು ಒಪ್ಪಿಗೆ ನೀಡಿಲ್ಲ. ಮದುವೆಗೆ ಒಪ್ಪಲಿಲ್ಲವೆಂದು ಅಪಹರಣಕ್ಕೆ ಸಂಚು ರೂಪಿಸಿದ್ದ ಕಿರಾತಕರು. ಇಂದು ಬೆಳಗ್ಗೆ ಎಂದಿನಂತೆ ಶಿಕ್ಷಕಿ ಅರ್ಪಿತಾ ಶಾಲೆಗೆ ಹೊರಟ ಸಂದರ್ಭದಲ್ಲಿ ಇನ್ನೋವಾ ಕಾರಿನಲ್ಲಿ ಬಂದ ದುರುಳರು. ಕಾರಿನಲ್ಲಿ ಅಪಹರಿಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಅಪಹರಿಸಿದ್ದ 5 ದಿನ ಮಗು ತಾಯಿ ಮಡಿಲಿಗೆ: ಸಿಎಂ ಸಿದ್ದು ಶ್ಲಾಘನೆ