ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಕೋಟ್ಯಂತರ ರುಪಾಯಿ ಸುಲಿಗೆ ಮಾಡಿ ವಂಚಿಸಿದ್ದ ಕಿಡಿಗೇಡಿಯೊಬ್ಬನನ್ನು ಸಂತ್ರಸ್ತ ನಿರುದ್ಯೋಗಿಗಳೇ ಹಿಡಿದು ವೈಟ್‌ಫೀಲ್ಡ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು (ನ.30): ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಕೋಟ್ಯಂತರ ರುಪಾಯಿ ಸುಲಿಗೆ ಮಾಡಿ ವಂಚಿಸಿದ್ದ ಕಿಡಿಗೇಡಿಯೊಬ್ಬನನ್ನು ಸಂತ್ರಸ್ತ ನಿರುದ್ಯೋಗಿಗಳೇ ಹಿಡಿದು ವೈಟ್‌ಫೀಲ್ಡ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡ ನಿವಾಸಿ ಕೆ.ವಿ.ಪವನ್ ಕುಮಾರ್ ಬಂಧಿತನಾಗಿದ್ದು, ಆತನ ಮೇಲೆ ವೈಟ್‌ಫೀಲ್ಡ್ ಠಾಣೆಗೆ ಸುಮಾರು 24 ಮಂದಿ ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದಾರೆ. ಉದ್ಯೋಗ ನೆಪದಲ್ಲಿ ಟೋಪಿ ಹಾಕಿ ದೆಹಲಿಗೆ ಓಡಿ ಹೋಗಿದ್ದ ಪವನ್‌ನನ್ನು ಹಣ ಕಳೆದುಕೊಂಡಿದ್ದ ಸಂತ್ರಸ್ತರು, ಆತನಿಗೆ ಬೇರೊಂದು ಮೊಬೈಲ್ ಸಂಖ್ಯೆಯಲ್ಲಿ ಕರೆ ಮಾಡಿ ಉದ್ಯೋಗಕ್ಕೆ ಹಣ ಕೊಡುವುದಾಗಿ ನಂಬಿಸಿ ಬೆಂಗಳೂರಿಗೆ ಕರೆಸಿಕೊಂಡು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
undefined
ಪೊಲೀಸ್ ಮಾಹಿತಿದಾರನ ಕೊಲೆ ಮಾಡಿ 16 ತುಂಡುಗಳಾಗಿ ಕತ್ತರಿಸಿದ ತಂದೆ, ಮಗ: 2 ತಿಂಗಳ ಹಳೆಯ ಕೇಸ್‌ಗೆ ಟ್ವಿಸ್ಟ್!
ಉದ್ಯೋಗ ಅರಸಿ ನಗರಕ್ಕೆ ಬಂದಿದ ಎಂಬಿಎ ಪದವೀಧರ ಪವನ್, ಬಳಿಕ ಸುಲಭವಾಗಿ ಹಣ ಸಂಪಾದನೆಗೆ ಅಡ್ಡ ದಾರಿ ತುಳಿದಿದ್ದಾನೆ. ಆಗ ವೈಟ್‌ಫೀಲ್ಡ್ ಟೆಕ್‌ಪಾರ್ಕ್‌ನಲ್ಲಿ ಸಾಫ್ಟ್‌ವೇರ್ ಹೆಸರಿನಲ್ಲಿ ಎರಡು ಬ್ಲೇಡ್ ಕಂಪನಿಗಳನ್ನು ತೆರೆದ ಆತ, ಈ ಕಂಪನಿಗಳಿಗೆ ನೇಮಕಾತಿ ಸಂಬಂಧ ಉದ್ಯೋಗಾಂಕ್ಷಿಗಳಿಗೆ ಗಾಳ ಹಾಕಿದ್ದ. ಆಗ ಶುಲ್ಕ ಪಾವತಿಸಿ ನೇಮಕಾತಿಗೆ ನಿರುದ್ಯೋಗಿಗಳು ನೋಂದಣಿ ಮಾಡಿಸಿದ್ದರು. ಅದರಲ್ಲೂ ಆಂಧ್ರಪ್ರದೇಶ ವಿದ್ಯಾವಂತರನ್ನೇ ಆತನ ಟಾರ್ಗೆಟ್ ಆಗಿತ್ತು. ಉದ್ಯೋಗ ನೆಪದಲ್ಲಿ ಸುಮಾರು 500ಕ್ಕೂ ಹೆಚ್ಚಿನ ಜನರಿಂದ ಅಂದಾಜು ₹5 ಕೋಟಿ ವಸೂಲಿ ಮಾಡಿ ಪವನ್ ವಂಚಿಸಿರುವ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅನುಮತಿ ಇಲ್ಲದೇ ತಾಯಿಯ ಮೊಬೈಲ್ ಬಳಸಿದ್ದಕ್ಕೆ ಮಗನಿಗೆ ಚೂರಿ ಇರಿದು ಕೊಂದ ತಂದೆ!
ಆಂಧ್ರಪ್ರದೇಶ ಮೂಲದ ವಿದ್ಯಾವಂತರೇ ಟಾರ್ಗೆಟ್:
ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುವ ಆಂಧ್ರ ಮೂಲದ ವಿದ್ಯಾವಂತರೇ ಇವರ ಟಾರ್ಗೆಟ್. ಒಬ್ಬೊಬ್ಬರಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸುತ್ತಿದ್ದ ಖದೀಮ. 20 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದೆ ಈ ಟೀಂ.
ಹೇಗೆ ನಡೀತಿತ್ತು ವಂಚನೆ?
ಹೈಫೈ ಟೆಕ್ ಪಾರ್ಕ್ ನಲ್ಲಿ ಕಚೇರಿ ಮಾಡ್ತಿದ್ದ. ಐಟಿ ಕಂಪನಿ ಹೆಸರಲ್ಲೇ ಮಾಡ್ತಿದ್ದ ಮೋಸ. ಪರಿಚಯಸ್ಥರ ಮೂಲಕ ನಿರುದ್ಯೋಗಿ ಯುವಕ,ಯುವತಿಯರಿಗೆ ಗಾಳ ಹಾಕುತ್ತಿದ್ದ ಬಳಿಕ ನಮ್ಮ ಕಂಪನಿಯಲ್ಲಿ ಕೆಲಸ ಕೊಡ್ತೀನಿ ಎಂದು ನಂಬಿಸುತ್ತಿದ್ದ ಅದಕ್ಕಾಗಿ SIMAKH TECHNOLOGY ಮತ್ತು MONTY CORPS ಎಂಬ ಕಂಪನಿ ತೆರೆದಿದ್ದ ಆರೋಪಿ ವರ್ಷಕ್ಕೆ ಐದು ಲಕ್ಷ ಪ್ಯಾಕೆಜ್ ಕೊಡ್ತೀನಿ ಎಂದು ಆಮಿಷ ತೋರಿಸಿ ವಂಚನೆ. ಅಷ್ಟೇ ಅಲ್ಲ, ಬೇರೆ ಕಂಪನಿಯಲ್ಲಿಯೂ ಕೆಲಸ ಕೊಡಿಸೋದಾಗಿ ಡ್ರಾಮ. ಅದಕ್ಕಾಗಿ ಒಬ್ಬೊಬ್ಬರಿಂದ ಒಂದರಿಂದ ಎರಡು ಲಕ್ಷದವರೆಗೆ ಸುಲಿಗೆ ಮಾಡುತ್ತಿದ್ದ. ಒಂದು ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಕೊಟ್ಟು ಕೆಲಸಕ್ಕೆ ಸೇರಿಸ್ಕೊಳ್ತಿದ್ದ. ಒಂದು ತಿಂಗಳ ಸಂಬಳ ಕೂಡ ನೀಡ್ತಿದ್ದ ಆಸಾಮಿ ಆ ಬಳಿಕ ಕಂಪನಿ ಕ್ಲೋಸ್ ಮಾಡಿ ಎಸ್ಕೇಪ್. ಹೀಗೆ ನಗರದ ಬೇರೆ ಬೇರೆ ಭಾಗಗಳಲ್ಲಿ ವಂಚನೆ ಮಾಡಿರೋ ಆರೋಪಿ ಪವನ್
ಖದೀಮನ ಸೆರೆಹಿಡಿದಿದ್ದೇ ರೋಚಕ:
ಹುದ್ದೆಯ ಆಸೆಗೆ ಹಣ ಕೊಟ್ಟಿದ್ದ ಯುವಕ ಯುವತಿಯರು ಕಂಗಾಲಾಗಿದ್ದಾರೆ. ದೆಹಲಿಯಲ್ಲಿ ತಲೆ ಮರೆಸಿಕೊಂಡಿದ್ದವನನ್ನ ಹಿಡಿದಿದ್ದೇ ರೋಚಕ. ಸಾವಿರಕ್ಕೂ ಅಧಿಕ ಜನರ ವಂಚಿಸಿ ದೆಹಲಿಯಲ್ಲಿ ಕುಳಿತಿದ್ದ ಪವನ್. ಆತನನ್ನ ಬೆಂಗಳೂರಿಗೆ ಕರೆಸಿಕೊಳ್ಳಲು ಸಂತ್ರಸ್ಥರೇ ಸ್ಕೆಚ್ ಹಾಕಿದ್ದರು. ಮೂವತ್ತು ಜನರು ಕಂಪನಿ ಸೇರಿಕೊಳ್ಳಲು ಬಂದಿದ್ದಾರೆ. ಹಣದ ಜೊತೆಗೆ ರೆಡಿ ಇದ್ದಾರೆ ಎಂದು ಬೆಂಗಳೂರಿಗೆ ಕರೆಸಿಕೊಂಡಿದ್ದ ನೊಂದವರು. ಇದನ್ನು ಕೇಳಿ ಎದ್ನೋ ಬಿದ್ನೋ ಅಂತಾ ಓಡೋಡಿ ಬೆಂಗಳೂರಿಗೆ ಬಂದಿದ್ದ ಖದೀಮ. ಖಾಸಗಿ ಹೋಟೆಲ್ ನಲ್ಲಿ ಕರೆಸಿಕೊಂಡು ಲಾಕ್ ಮಾಡಿದ್ದ ನೊಂದವರು ನಂತರ ಆತನೆ 112 ಗೆ ಕರೆ ಮಾಡಿದ್ದ ಪವನ್ ಆದರೆ ಸ್ಥಳಕ್ಕೆ ಹೋದ ಪೊಲೀಸರಿಗೆ ಗೊತ್ತಾಗಿದೆ ಅಸಲಿಯತ್ತು. ವಂಚನೆ ಘಟನೆ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ ಸಂತ್ರಸ್ಥರು. ಎಫ್ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ ಪೊಲೀಸರು.