ಬಿಜೆಪಿ ಮುಖಂಡ ಆತ್ಮಹತ್ಯೆ ಕೇಸ್, ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

By Suvarna News  |  First Published May 26, 2022, 5:46 PM IST

* ಬೆಂಗಳೂರಿನ ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣ
* ಬಿಜೆಪಿ ‌ಮುಖಂಡ ಅನಂತರಾಜು ಕೇಸ್‌ಗೆ ಬಿಗ್ ಟ್ವಿಸ್ಟ್
* ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್


ಬೆಂಗಳೂರು, (ಮೇ.26): ಬಿಜೆಪಿ ‌ಮುಖಂಡ ಅನಂತರಾಜು ಕೇಸ್ ಬಗೆದಷ್ಟು ಆಳಕ್ಕೆ ಹೋಗ್ತಿದೆ. ಸುಮಾ ಮತ್ತು ರೇಖಾ  ಪರ ವಿರೋಧದ ಸಾಕ್ಷ್ಯಗಳು ದಿನಕ್ಕೊಂದರಂತೆ ಹೊರ ಬೀಳ್ತಿವೆ. 

ಹೌದು...ಇದೀಗ ಅನಂತರಾಜು ಆತ್ಮಹತ್ಯೆ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ. ಅನಂತರಾಜು ಗೆಳತಿ ಅಪರಿಚಿತ ವ್ಯಕ್ತಿಯೊಂದಿಗೆ ಚಾಟಿಂಗ್ ಮಾಡಿರುವುದು ವೈರಲ್ ಆಗಿದೆ.

Tap to resize

Latest Videos

ಇನ್ನೂ ಇಂದು(ಗುರುವಾರ) ರೇಖಾ ಜೈಲಿನಿಂದ ಹೋರಬರ್ತಿರೋ ಹೊತ್ತಲ್ಲಿ  ಮತ್ತೊಂದು ವಾಟ್ಸ್ ಆಪ್ ಚಾಟ್ ರಿವಿಲ್ ಆಗಿದೆ. ರೇಖಾ ಮತ್ತು ಸುಮಾ ಅನಂತರಾಜು ಸಂಪರ್ಕಿತ ವ್ಯಕ್ತಿಗೆ ಜತೆಗೆ ನಡೆಸಿದ್ದಾರೆನ್ನಲಾದ ವಾಟ್ಸಪ್ ಚಾಟಿಂಗ್ ರಿವಿಲ್ ಆಗಿದ್ದು, ಈ  ವಾಟ್ಸಾಪ್ ಚಾಟಿಂಗ್ ನಲ್ಲಿ ಸೆಟಲ್ಮೆಂಟ್ ಬಗ್ಗೆ ಪ್ರಸ್ತಾಪ ಆಗಿರೋದು ಸಾಕಷ್ಟು ಕುತುಹಲ ಮೂಡಿಸಿದೆ.

Bengaluru: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ: ಪೊಲೀಸರ ಮುಂದೆ ಪತ್ನಿ ಸುಮಾ ಹೇಳಿದ್ದೇನು?

ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ ಮರ್ಯಾದೆಗೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ಯಾರ ಮಾರ್ಯಾದೆ ಕಳೆಯೋದಕ್ಕು ನಾನು ಸಿದ್ಧ ಅನ್ನೋ ರೀತಿ ರೇಖಾ ಮಾಡಲಾದ ಮೇಸೆಜ್ ಎಂದು ಸ್ಕ್ರೀನ್ ಶಾಟ್ ಓಡಾಡ್ತಿವೆ. ಈ ಚಾಟ್ ನಲ್ಲಿ ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇದೆ. ಅದನ್ನ ಅವನ ಹೆಂಡ್ತಿಗೆ ಕಳಿಸಿದ್ರೆ ಅವಳೇ ಅನಂತರಾಜುನ ಸಾಯಿಸ್ತಾಳೆ.
ಅಷ್ಟೊಂದು ಆಶ್ಲೀಲವಾಗಿದೆ. ಆ ವಿಡಿಯೋಗಳು ಇವೆ ಆ ರೀತಿ ಆಗ್ಬಾರ್ದು ಅನ್ನೋದಾದ್ರೆ ಅನಂತರಾಜುನ ಮೇ 15 ರ ಒಳಗೆ ನನ್ನ ಭೇಟಿ ಮಾಡ್ಬೇಕು ಸೆಟ್ಲಾಮೆಂಟ್ ಮಾಡಿಕೊಂಡು ನೆಮ್ಮದಿಯಾಗಿರಲಿ ಎಂದು ಚಾಟ್ ಸಾರಂಶ ಹೇಳುತ್ತೆ.

ಇನ್ನೂ ಇನ್ನೊಂದು ಮೂಲಗಳ ಪ್ರಕರ ಅನಂತರಾಜಯ ಬಚಾವ್ ಮಾಡೋಕೆ ರೇಖಾ ಅನಂತರಾಜು ಸೇರಿ ಈ ರೀತಿನೇ  ಮಾತನಾಡಿ ಸುಮಾಳನ್ನ ನಂಬಿಸುವ ಕೆಲಸ ಮಾಡಿದ್ರು ಎಂದು ಹೇಳಲಾಗ್ತಿದೆ. ಆದ್ರೆ ಆದೇ ಇಂದು ರೇಖಾಳಿಗೆ ಮುಳುವಾಗಿದ್ಯಾ ಅನ್ನೋ ಪ್ರಶ್ನೆ ಮೂಡಿದ್ದು, ಮೇಲ್ನೋಟಕ್ಕೆ ಎಲ್ಲವೂ ಸತ್ಯದಂತೆ ಕಂಡ್ರು ಹೋರಬರ್ತಿರೋ ಮಾಹಿತಿಯ ಅಸಲಿಯತ್ತು ಏನೂ ಅನ್ನೋದನ್ನ ಪೊಲೀಸ್ರೇ ಪತ್ತೆಮಾಡಬೇಕು. 

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಯ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಗೆಳತಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ದೊರಕ್ಕಿದ್ದು, ಅನಂತರಾಜು ಗೆಳತಿ ಹಾಗೂ ಇನ್ನುಳಿದ ಇಬ್ಬರು ಆರೋಪಿಗಳಾದ ಸ್ಪಂದನಾ ಹಾಗೂ ವಿನೋದ್‍ಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಅನಂತರಾಜು ಇದೇ ತಿಂಗಳು 12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. 

ಆಡಿಯೋ ವೈರಲ್ ಬಗ್ಗೆಯೂ ಪಿನ್ ಟೂ ಪಿನ್ ಮಾಹಿತಿ ನೀಡಿರೋ ಸುಮಾ
 ಆಡಿಯೋದಲ್ಲಿ ಮಾತನಾಡಿದ್ದು ನಿಜ. ಆದ್ರೆ ನನ್ನ ಗಂಡನ ಮೇಲೆ ಹಲ್ಲೆ ಮಾಡಿಲ್ಲ. ಆಕೆಯ ಮೇಲಿನ ಕೋಪದಲ್ಲಿ ಈ ರೀತಿ ಮಾತನಾಡಿದ್ದೀನಿ‌. ಆಡಿಯೋದಲ್ಲಿ ಹೇಳಿರೋ ತರ ಕೈ ಮುರಿದಿಲ್ಲ. ನನ್ನ ಗಂಡನ ಮೇಲೆ‌ ನಾನು ಹಲ್ಲೆ ಮಾಡಿಲ್ಲ. ನನ್ನ ಗಂಡನ ಸಾವು ಬಯಸಿ ತಾಳಿ ಕಳೆದುಕೊಳ್ಳೋಕಾಗುತ್ತಾ ಸರ್. ಇದರ ಜೊತೆಗೆ ನಾವು ಒಂದು ತಿಂಗಳ ಹಿಂದೆ ಮಾರಿಷಿಯಸ್ ಹೋಗಲು ಪ್ಲಾನ್ ಮಾಡಿದ್ವಿ. ಒಂದುವರೆ ಲಕ್ಷ ಖರ್ಚು ಮಾಡಿ ಬುಕ್ ಕೂಡಾ ಮಾಡಿದ್ವಿ. ಆದ್ರೆ ಈ ರೀತಿ ಮಾಡಿಕೊಂಡಿರೋದು ನೋವು ತಂದಿದೆ ಅಂತಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಪೋಷ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ಕೈ ಮುರಿದಿದ್ದು ಪತ್ತೆಯಾಗಿಲ್ಲ: 
ಆಡಿಯೋದಲ್ಲಿ ರೇಖಾ ಬಳಿ ಸೌಮ್ಯ ಅನಂತರಾಜು ಕೈ ಮುರಿದಿದ್ದೇನೆ ಎಂಬ ಹೇಳಿಕೆಗೆ ಈಗಾಗಲೇ ಅನಂತರಾಜು ಪಿಎಂ ರಿಪೋರ್ಟ್ ಪೊಲೀಸರ ಕೈ ಸೇರಿದ್ದು, ಅದ್ರಲ್ಲಿ ಯಾವುದೇ ರೀತಿಯಾದ ಕೈ ಮುರಿದಿರೋದ್ರ ಬಗ್ಗೆ ಉಲ್ಲೇಖವಾಗಿಲ್ಲ ಅನ್ನೋ ಮಾಹಿತಿ ಇದೆ. ಇದರ ಜೊತೆಗೆ ಡೆತ್ ನೋಟ್ ಮೇಲೆ ಅನುಮಾನ ಮೂಡಿದ್ದ ಅನಂತರಾಜು ಡೆತ್ ನೋಟ್ ಬರೆದಿದ್ದಾರಾ? ಇಲ್ಲ ಬೇರೆ ಯಾರಾದರೂ ಬರೆದಿದ್ದಾರಾ? ಅನ್ನೊ ಬಗ್ಗೆ ಮಾಹಿತಿ ಕಲೆ ಹಾಕಲು  ಅನಂತರಾಜು ಹ್ಯಾಂಡ್ ರೈಟಿಂಗ್ ಮ್ಯಾಚ್ ಮಾಡಿದ್ದು ಡೆತ್ ನೋಟ್‌ನಲ್ಲಿ ಮಾಡಿರೋ ಹಸ್ತಾಕ್ಷರ ಬಗ್ಗೆ ಅನುಮಾನ ವ್ಯಕ್ತವಾಗಿದೆ. 

click me!