
ಶಿವಮೊಗ್ಗ(ನ. 16) ಪೋಲಿಸ್ ವಸತಿಗೃಹಗಳು ಇರುವ ಸ್ಥಳದಲ್ಲೇ ಕಳ್ಳರು ಕೈಚಳಕ ತೋರಿದ್ದಾರೆ. ಪೋಲಿಸ್ ಶಸ್ತ್ರಾಸ್ತ್ರ ಮೀಸಲು ಪಡೆಯ ಆವರಣದಲ್ಲಿಯೇ ಕರಾಮತ್ತು ತೋರಿಸಿದ್ದು ಗಂಧದ ಮರ ಕಳ್ಳತನ ಮಾಡಿದ್ದಾರೆ.
ಶಿವಮೊಗ್ಗದ ಡಿಎಆರ್ ಹಾಗೂ ವಸತಿಗೃಹಗಳ ಬಳಿ ಕಳ್ಳತನ ನಡೆದಿದೆ. ಪೋಲಿಸ್ ಬಂದೋಬಸ್ತಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳೆ ಕಳ್ಳತನವಾಗಿವೆ. ಸದಾ ಡಿಎಅರ್ ಮೈದಾನದಲ್ಲಿ ಪೋಲಿಸ್ ವಾಹನಗಳ ಒಡಾಟ ಇದ್ದರೂ ಕಳ್ಳರು ಆಟ ಮೆರೆದಿದ್ದಾರೆ. ಪೋಲಿಸರ ವಸತಿಗೃಹಗಳು ಇದ್ದರೂ ಬೆಲೆಬಾಳುವ ಮರಗಳ ಕತ್ತರಿಸಿದ ಕಳ್ಳರ ಕೂಟ ಯಾರಿಗೂ ಗೊತ್ತಾಗದಂತೆ ಪರಾರಿಯಾಗಿದೆ.
ಶ್ರೀಗಂಧ ಬೀಜ ಮಾರಿದರೆ ಎಕರೆಗೆ ಎರಡು ಲಕ್ಷ ಆದಾಯ
ಶ್ರೀಗಂಧ ಕೃಷಿ ಮಾಡಲು ಸರ್ಕಾರ ಅವಕಾಶ ನೀಡಿದ್ದು ಈಗ ಎಲ್ಲವೂ ಕಟಾವಿಗೆ ಬಂದಿದ್ದು ರೈತರು ಬೆಳೆದ ಮರಗಳಿಗೂ ಕಳ್ಳರ ಕಾಟ ಜೋರಾಗಿದ್ದು ಸರ್ಕಾರ ಮತ್ತು ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರೊಬ್ಬರು ಅಳಲು ತೋಡಿಕೊಂಡಿದ್ದ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ