ಪೋಷಕರು ಕೊಟ್ಟ ಸಿಹಿಯೂ ರಾಗಿಣಿಗಿಲ್ಲ, ಜೈಲಿನಲ್ಲೇ ದೀಪಾವಳಿ!

By Suvarna News  |  First Published Nov 16, 2020, 7:58 PM IST

 ಪರಪ್ಪನ ಅಗ್ರಹಾರ ಜೈಲಿನಲ್ಲಿ ದೀಪಾವಳಿ ಆಚರಣೆ/ ದೀಪಾವಳಿ ಆಚರಣೆಯಲ್ಲಿ ಕೈದಿಗಳ ಜೊತೆ ಸಂಜನಾ ಹಾಗೂ ರಾಗಿಣಿ/ ದೀಪಾವಳಿ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳಿಗೆ ಹಾಗೂ ರಾಗಿಣಿಗೆ ಸ್ವೀಟ್ ತಂದಿದ್ದ ಪೋಷಕರು ಜೈಲಾಧಿಕಾರಿಗಳಿಂದ ನಿನ್ನೆ ಸ್ವೀಟ್ ಸ್ವೀಕರಿಸಲು ನಿರಾಕರಣೆ/ ಜೈಲಧಿಕಾರಿಗಳ ಬಳಿ ಹಲವು ಬಾರಿ ಮನವಿ ಮಾಡಿಕೊಂಡ ರಾಗಿಣಿ ಪೋಷಕರು.


ಬೆಂಗಳೂರು(ನ. 16)  ಪರಪ್ಪನ ಅಗ್ರಹಾರ ಜೈಲಿನಲ್ಲಿ ದೀಪಾವಳಿ ಆಚರಣೆ ಮಾಡಲಾಗಿದೆ. ದೀಪಾವಳಿ ಆಚರಣೆಯಲ್ಲಿ ಕೈದಿಗಳ ಜೊತೆ ನಟಿ ಸಂಜನಾ ಹಾಗೂ ರಾಗಿಣಿ ಪಾಲ್ಗೊಂಡಿದ್ದಾರೆ. 

ದೀಪಾವಳಿ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳಿಗೆ ಹಾಗೂ ರಾಗಿಣಿಗೆ ರಾಗಿಣಿ ಪೋಷಕರು ಸ್ವೀಟ್ ನೀಡಿದ್ದಾರೆ. ಆದರೆ ಜೈಲಾಧಿಕಾರಿಗಳು ಸ್ವೀಟ್ ಸ್ವೀಕರಿಸಲು ನಿರಾಕರಣೆ ಮಾಡಿದ್ದಾರೆ. ಜೈಲಧಿಕಾರಿಗಳ ಬಳಿ ಹಲವು ಬಾರಿ ರಾಗಿಣಿ ಪೋಷಕರು ಮನವಿ ಮಾಡಿಕೊಂಡಿದ್ದಾರೆ.  ಸೆಲೆಬ್ರಿಟಿ ಹಿನ್ನೆಲೆಯಲ್ಲಿ ಸ್ವೀಟ್ ಪಡೆದುಕೊಳ್ಳದಂತೆ ಜೈಲಧಿಕಾರಿಗಳ ಸೂಚನೆ ಇರುವುದರಿಂದ ಕಿರಿಯ ಅಧಿಕಾರಿಗಳು ಅದರಂತೆ ನಡೆದುಕೊಂಡಿದ್ದಾರೆ.

Tap to resize

Latest Videos

ಹೊಸ ಬಟ್ಟೆಗಾಗಿ ನಟಿಮಣಿಯರ ಪರದಾಟ

ದೀಪಾವಳಿ ಹಿನ್ನೆಲೆಯಲ್ಲಿ ರಾಗಿಣಿ ಗ್ರೀಟಿಂಗ್ ತಯಾರು ಮಾಡಿದ್ದಾರೆ ಅಧಿಕಾರಿಗಳಿಗೆ ನೀಡಲು ಪೇಪರ್ ಸೇರಿದಂತೆ ಇತರೆ ವಸ್ತುಗಳಿಂದ ಗ್ರೀಟಿಂಗ್ ತಯಾರಿ ಮಾಡಿದ್ದಾರೆ ಮೂರುದಿನಗಳಿಂದ ಅಧಿಕಾರಿಗಳಿಗೆ ನೀಡಲು ಮುಂದಾದ ರಾಗಿಣಿ. ಆದರೆ  ಗ್ರೀಟಿಂಗ್ ಸ್ವೀಕರಿಸಲು ಸಹ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ.

ಜೈಲಿನ ಉಳಿದ ಕೈದಿಗಳೊಂದಿಗೆ ರಾಗಿಣಿ ಮತ್ತು ಸಂಜನಾ ದೀಪಾವಳಿ ಆಚರಣೆ ಮಾಡಲಿದ್ದಾರೆ. ವರ್ಷವರ್ಷವೂ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಮುಖೇನ ವಿಶ್ ಮಾಡುತ್ತಿದ್ದರು. 

click me!