ಸ್ಯಾಂಡಲ್​ವುಡ್​ ನಿರ್ಮಾಪಕನಿಗೆ 5 ಕೋಟಿ ದಂಡ, 1 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

By Suvarna NewsFirst Published Aug 1, 2021, 4:47 PM IST
Highlights

* ಸ್ಯಾಂಡಲ್‌ವುಡ್ ನಿರ್ಮಾಪಕ‌ಗೆ ಒಂದು ವರ್ಷ ಸಜೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ
* ಹಾಸನದ ಉದ್ಯಮಿಯಿಂದ 2.90 ಕೋಟಿ ಹಣ ಪಡೆದು ವಂಚನೆ ಮಾಡಿದ ಆರೋಪ
* ಹಣ ಪಡೆದು ವಾಪಸ್ ನೀಡದೆ ವಂಚನೆ ಆರೋಪದಲ್ಲಿ ಹಾಸನದ ಜಿಲ್ಲಾ ನ್ಯಾಯಾಲಯದ ಆದೇಶ

ಹಾಸನ, (ಆ.01): ಸ್ಯಾಂಡಲ್‌ವುಡ್ ನಿರ್ಮಾಪಕ ಕೆ. ಸುಧಾಕರ್‌ಗೆ  1 ವರ್ಷ ಸಜೆ ಶಿಕ್ಷೆ ವಿಧಿಸಿ ಹಾಸನ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

‘ಕಥಾ ವಿಚಿತ್ರ’, ‘ಹುಲಿ ದುರ್ಗ’ ಮೊದಲಾದ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಕೆ. ಸುಧಾಕರ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. ಇದು ಕೋರ್ಟ್​ನಲ್ಲಿ ಸಾಬೀತಾಗಿತ್ತು. ಇದನ್ನು ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಸುಧಾಕರ್​ ಪ್ರಶ್ನಿಸಿದ್ದರು. ಆದರೆ, ಈಗ ಈ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಸುಧಾಕರ್​ 5 ಕೋಟಿ ಪರಿಹಾರ ನೀಡುವುದರ ಜತೆಗೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ.

ಕುಂದ್ರಾಗೆ ಕೋಲ್ಕತಾ ಲಿಂಕ್, ಪೋರ್ನ್ ತಯಾರಿಕೆಯಲ್ಲಿದ್ದ ಮಾಡೆಲ್ ಅರೆಸ್ಟ್!

2.90 ಕೋಟಿ ರೂಪಾಯಿ ಹಣವನ್ನು ಸುಧಾಕರ್​ ಹಾಸನದ ಉದ್ಯಮಿಯಿಂದ ಸಾಲವಾಗಿ ತೆಗೆದುಕೊಂಡಿದ್ದರು.  ಬಡಾವಣೆ ನಿರ್ಮಾಣ ಮಾಡುವುದಾಗಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಸುಧಾಕರ್ ಪಡೆದುಕೊಂಡಿದ್ದರು. ಆದರೆ, ಅವರು ಈ ಹಣವನ್ನು ಹೂಡಿಕೆ ಮಾಡಿದ್ದು ಸಿನಿಮಾ ಮೇಲೆ. ಆದರೆ, ಯಾವ ಸಿನಿಮಾವೂ ಕೈ ಹಿಡಿಯಲಿಲ್ಲ.

ಹಣ ವಾಪಸ್ ಕೇಳಿದರೂ ನೀಡದೆ ಸತಾಯಿಸಿದ್ದ. ಕೊನೆಗೆ ರಾಜಿ ಸಂಧಾನದ ಬಳಿಕ ಸುಧಾಕರ್ ಚೆಕ್ ನೀಡಿದ್ದ. ಆದ್ರೆ, ಹಣಕ್ಕಾಗಿ ಬ್ಯಾಂಕ್ ಗೆ ಹಾಕಿದ ಚೆಕ್‌ಗಳು ಬೌನ್ಸ್ ಆಗಿದ್ದವು. ಹಾಗಾಗಿ ಉದ್ಯಮಿ ಪರಿಹಾರಕ್ಕಾಗಿ ಹಾಸನ 4ನೇ ಜೆ‌ಎಂ ಎಫ್ ಸಿ ನ್ಯಾಯಾಯದಲ್ಲಿ ದೂರು ದಾಖಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ 2020 ರ ಜನವರಿ 27 ರಂದು ಶಿಕ್ಷೆ ವಿಧಿಸಿ ಜೆಎಂಎಪ್ ಸಿ ಕೋರ್ಟ್ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಸುಧಾಕರ್ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ, ಜಿಲ್ಲಾ ನ್ಯಾಯಾಲಯ ಸುಧಾಕರ್ ಅವರ ಮೇಲ್ಮನವಿ ವಜಾಗೊಳಿಸಿ ಶಿಕ್ಷೆ ಖಾಯಂ ಮಾಡಿ ಆದೇಶ ಹೊರಡಿಸಿದೆ. ಜುಲೈ 16 ರ 2021 ರಂದು ಶಿಕ್ಷೆ ಪ್ರಕಟಿಸಿರೋ ಕೋರ್ಟ್ ನಿಂದ ಸುಧಾಕರ್ ಬಂಧನಕ್ಕೆ ವಾರಂಟ್ ಜಾರಿಯಾಗಿದೆ.

click me!