* ರಾಜ್ ಕುಂದ್ರಾ ಪ್ರಕರಣಕ್ಕೂ ಇಲ್ಲಿಗೂ ಲಿಂಕ್ ಇದೆಯೇ?
* ಪೋರ್ನ್ ಚಿತ್ರ ತಯಾರಿಕೆಯಲ್ಲಿ ತೊಡಗಿದ್ದ ಮಾಡೆಲ್ ಮತ್ತು ಪೋಟೋಗ್ರಾಫರ್ ಅರೆಸ್ಟ್
* ಹೆಚ್ಚಿನ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು
* ಆನ್ ಲೈನ್ ಮೂಲಕವೇ ಎಲ್ಲ ವ್ಯವಹಾರ ನಿರ್ವಹಿಸುತ್ತಿದ್ದರು
ಕೋಲ್ಕತಾ(ಆ. 01) ಅಶ್ಲೀಲ ಚಿತ್ರ ತಯಾರಿಕೆಯಲ್ಲಿ ತೊಡಗಿದ್ದರು ಎಂಬ ಆರೋಪದ ಮೇಲೆ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಜೈಲು ಸೇರಿದ್ದಾರೆ. ಇದೀಗ ಕೋಲ್ಕತಾದಿಂದ ಇಂಥದ್ದೇ ಒಂದು ಪ್ರಕರಣ ವರದಿಯಾಗಿದೆ.
ಅಶ್ಲೀಲ ವೀಡಿಯೊ ಚಿತ್ರೀಕರಣ ಮತ್ತು ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ಮಾಡೆಲ್ ಮತ್ತು ಛಾಯಾಗ್ರಾಹಕನನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ. ಬಲವಂತವಾಗಿ ಪೋರ್ನ್ ಶೂಟ್ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಬೀಧನಗರ ಪೊಲೀಸ್ ಕಮಿಷನರೇಟ್ ಸೈಬರ್ ಸೆಲ್ ಸಹಾಯದಿಂದ ಇಬ್ಬರನ್ನು ಪತ್ತೆ ಹಚ್ಚಿ ಬಂಧಿಸಿದೆ. ಆರೋಪಿಗಳು ಆನ್ ಲೈನ್ ನಲ್ಲಿಯೇ ಎಲ್ಲ ವ್ಯವಹಾರ ನಡೆಸುತ್ತಿದ್ದರು. ಅಂತರ್ ರಾಜ್ಯಗಳಲ್ಲಿಯೂ ಇವರ ಜಾಲ ವಿಸ್ತಾರವಾಗಿತ್ತು. ಇಂಟರ್ ನೆಟ್ ಮೂಲಕವೇ ಹಂಚಿಕೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಿಲ್ಪಾ ಶೆಟ್ಟಿಯಿಂದ ಬಾಲಿವುಡ್ ನಟಿಯರು ದೂರ ದೂರ
ತಮಗೆ ಸಂಬಂಧಿಸಿದ ಪೋರ್ನ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ವಿವಿಧ ಆಪ್ ಗಳ ಮೂಲಕ ಡೌನ್ ಲೋಡ್ ಮಾಡಿಕೊಳ್ಳಲಾಗುತ್ತಿದೆ ಎಂದು ಇಬ್ಬರು ಮಹಿಳೆಯರು ದೂರು ನೀಡಿದ ನಂತರ ಈ ಜಾಲ ಬಯಲಿಗೆ ಬಂದಿದೆ.
ನಮ್ಮನ್ನು ಪೋಟೋ ಶೂಟ್ ಗೆಂದು ಕರೆಸಿಕೊಂಡು ಬಲವಂತವಾಗಿ ಪೋರ್ನ್ ಗೆ ಬಳಕೆ ಮಾಡಿಕೊಳ್ಳಲಾಗಿದೆ. ರಾಜ್ ಕುಂದ್ರಾ ಲಿಂಕ್ ಇರುವ ಆಪ್ ಗಳಲ್ಲಿಯೂ ನಮಗೆ ಸಂಬಂಧಿಸಿದ ವಿಡಿಯೋಗಳು ಹರಿದಾಡಿವೆ ಎಂದು ಮಹಿಳೆಯರು ಆರೋಪಿಸಿದ್ದರು.