ಅಫಜಲ್ಪುರದಲ್ಲಿ ಗಾಂಜಾ ದಂಧೆ: ನಾಡ ಪಿಸ್ತೂಲ್‌ ಜಪ್ತಿ

By Kannadaprabha News  |  First Published Sep 16, 2020, 3:39 PM IST

ಕಲಬುರಗಿ ಜಿಲ್ಲೆಯ ಅಫಜಲ್ಪುರದಲ್ಲಿ 63 ಕೆಜಿ ಗಾಂಜಾ, 1 ಪಿಸ್ತೂಲ್‌, 2 ಜೀವಂತ ಗುಂಡುಗಳು ಜಪ್ತಿ| ದಾಳಿ ವೇಳೆ 63 ಕೆಜಿ ಗಾಂಜಾ, 1 ಪಿಸ್ತೂಲ್‌, 2 ಜೀವಂತ ಗುಂಡುಗಳು ಜಪ್ತಿ| ಗಾಂಜಾ ಬೆಳೆದು ಲಾಭಕ್ಕಾಗಿ ಮಹಾರಾಷ್ಟ್ರ ಮತ್ತಿತರ ಭಾಗಗಳಲ್ಲಿ ಮಾರಿಕೊಳ್ಳುತ್ತಿರುವುದಾಗಿ ತಿಳಿಸಿದ ಆರೋಪಿ| 


ಅಫಜಲ್ಪುರ(ಸೆ.16): ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನಲ್ಲಿ ಗಾಂಜಾ ವಿರುದ್ಧ ಪೊಲೀಸರು ಸಮರ ಸಾರಿದ್ದು, ಮಂಗಳವಾರ ಪೊಲೀಸರು ನಡೆಸಿರುವ ದಾಳಿಯಲ್ಲಿ ಗಾಂಜಾ ಗಿಡಗಳು, ಜೊತೆಗೆ ನಾಡ ಪಿಸ್ತೂಲ್‌, ಜೀವಂತ ಗುಂಡುಗಳು ಪತ್ತೆಯಾಗಿವೆ.

ಬಡದಾಳ ಗ್ರಾಮದ ಅರ್ಜುಣಗಿ ರಸ್ತೆಯಲ್ಲಿರುವ ಜಯಾನಂದ ಶಿವನಿಂಗಪ್ಪ ನಿಲಂಗಿ(35) ಇವರ ಹೊಲದಲ್ಲಿ ಅಂದಾಜು 1 ಲಕ್ಷ ಮೌಲ್ಯದ ಗಾಂಜಾವನ್ನು ಅಫಜಲ್ಪುರ ಠಾಣೆ ಪಿಎಸ್‌ಐ ಸಂತೋಷ ತಟ್ಟೆಪಳ್ಳಿ, ತಹಸೀಲ್ದಾರ ಯಲ್ಲಪ್ಪ ಸುಬೇದಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪಿಎಸ್‌ಐ ಸಂತೋಷ ತಟ್ಟೆಪಳ್ಳಿ ಮಾಹಿತಿ ನೀಡಿದ್ದು, ಬಡದಾಳ ಗ್ರಾಮದಲ್ಲಿ ಜಯನಂದ ನಿಲಂಗಿ ತಮ್ಮ ಹೊಲದಲ್ಲಿ ಗಾಂಜಾ ಬೆಳೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಕಬ್ಬಿನ ಹೊಲದಲ್ಲಿ 63 ಗಾಂಜಾ ಗಿಡಗಳು ಪತ್ತೆಯಾಗಿವೆ. 63 ಕೆ.ಜಿ ಗಾಂಜಾ ಇದ್ದು ಇದರ ಮೌಲ್ಯ 1 ಲಕ್ಷದಷ್ಟುಆಗಲಿದೆ ಎಂದು ಹೇಳಿದ್ದಾರೆ.

Tap to resize

Latest Videos

ಬೃಹತ್‌ ಗಾಂಜಾ ಕೇಸ್‌: ಸಿಪಿಐ, ಪಿಎಸ್‌ಐ ಸೇರಿ ಐವರು ಅಮಾನತು

ಇಷ್ಟೊಂದು ಪ್ರಮಾಣದ ಗಾಂಜಾ ಬೆಳೆದು ತನ್ನ ಲಾಭಕ್ಕಾಗಿ ಮಹಾರಾಷ್ಟ್ರ ಮತ್ತಿತರ ಭಾಗಗಳಲ್ಲಿ ತಾನೆ ಖುದ್ದಾಗಿ ಮಾರಿಕೊಳ್ಳುತ್ತಿರುವುದಾಗಿ ಜಯನಂದ ಒಪ್ಪಿಕೊಂಡಿದ್ದಾಗಿ ತಿಳಿಸಿದ ಅವರು, ಜಯನಂದನ ಹೊಲದಲ್ಲಿರುವ ಮನೆಯಲ್ಲಿ ಪರವಾನಗಿ ಇಲ್ಲದ ಒಂದು ನಾಡ ಪಿಸ್ತೂಲ್‌, ಎರಡು ಜೀವಂತ ಗುಂಡುಗಳು ಸಹ ಪತ್ತೆಯಾಗಿವೆ.

ಗಾಂಜಾ ಬೆಳೆದಾತ ತಾನು ಒಬ್ಬನೆ ಹೊಲದಲ್ಲಿ ವಾಸವಿರುತ್ತೇನೆ. ಹೀಗಾಗಿ ಆತ್ಮ ರಕ್ಷಣೆಗಾಗಿ ನಾಡ ಪಿಸ್ತೂಲ್‌ 7 ವರ್ಷಗಳ ಹಿಂದೆ ಖರೀದಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಕಾನೂನು ಕ್ರಮಕ್ಕೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್‌ ಸಿಬ್ಬಂದಿಗಳು ಇದ್ದರು.
 

click me!