
ಬೆಂಗಳೂರು(ಅ. 09) ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಅವರ ನ್ಯಾಯಾಂಗ ಬಂಧನ ಅ.23 ರವರೆಗೆ ವಿಸ್ತರಣೆಯಾಗಿದೆ.
ಅನಿಕಾ ಡಿ ಎಂಬಾಕೆಯ ಬಂಧನದ ನಂತರ ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು ನಿಧಾನಕ್ಕೆ ತೆರೆದುಕೊಂಡಿತು. ಒಬ್ಬರಾದ ಮೇಲೆ ಒಬ್ಬರ ಹೆಸರು ಬರತೊಡಗಿತು. ನಟಿ ರಾಗಿಣಿ ಮತ್ತು ಸಂಜನಾ ಮನೆಯ ಮೇಲೆಯೂ ದಾಳಿ ಮಾಡಿದ್ದ ಸಿಸಿಬಿ ಅನೇಕ ಸಾಕ್ಷ್ಯಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಇನ್ನೊಂದು ಕಡೆ ಐಂದ್ರಿತಾ-ದಿಗಂತ್ ದಂಪತಿ, ಕಿರುತೆರೆ ನಿರೂಪಕ ಅಕುಲ್ ಬಾಲಾಜಿ, ಅನುಶ್ರೀಯವರ ವಿಚಾರಣೆಯನ್ನು ಸಿಸಿಬಿ ನಡೆಸಿದೆ.
ಪ್ರಭಾವಿಗಳ ಒತ್ತಡಕ್ಕೆ ಮಣಿದು ಅನುಶ್ರೀ ವಿಚಾರಣೆ ಕ್ಲೋಸ್
ಇನ್ನು ಬಾಣಸವಾಡಿ ಕೇಸ್ ಸಂಬಂಧ ಬಂದಿಲ್ಪಟ್ಟಿದ್ದ ರವಿಶಂಕರ್ ನನ್ನು ಮತ್ತೆ ಬಾಡಿ ವಾರೆಂಟ್ ಮುಖಾಂತರ ಸಿಸಿಬಿ ವಿಚಾರಣೆಗೆಂದು ವಶಕ್ಕೆ ಪಡೆದಿದೆ. ಕಾಟನ್ ಪೇಟೆ ಕೇಸ್ ನಲ್ಲೂ ಸಹ ರವಿಶಂಕರ್ ಹೆಸರು ಕೇಳಿ ಬಂದಿತ್ತು. ಹಲವು ಪಾರ್ಟಿಗಳಲ್ಲಿ ರವಿಶಂಕರ್ ಭಾಗಿಯಾಗಿದ್ದಾಗಿ ಉಲ್ಲೇಖಿಸಲಾಗಿತ್ತು. ಸದ್ಯ ರವಿಶಂಕರ್ ವಿಚಾರಣೆ ಬಳಿಕ ಮತ್ತಷ್ಟು ವಿಚಾರ ಬಯಲಾಗೋ ಸಾಧ್ಯತೆ ಇದೆ.
ಇದೆಲ್ಲದರ ನಡುವೆ ಜಾಮೀನು ಕೋರಿ ಸಂಜನಾ ಗರ್ಲಾನಿ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಹಿಂದೆ ಸಲ್ಲಿಕೆಯಾಗಿದ್ದ ನಟಿಮಣಿಯರ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು. ಅತ್ತ ಮುಂಬೈನಲ್ಲಿ ಡ್ರಗ್ಸ್ ಕೇಸಿನಲ್ಲೇ ಬಂಧನಕ್ಕೆ ಒಳಗಾಗಿದ್ದ ನಟಿ ರಿಯಾ ಚಕ್ರವರ್ತಿಗೆ ಜಾಮೀನು ಸಿಕ್ಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ