
ಬೆಂಗಳೂರು( ಸೆ. 14) ಡ್ರಗ್ಸ್ ಕೇಸಿನಲ್ಲಿ ವಿಚಾರಣೆ ಎದುರಿಸುತ್ತಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಂಜನಾ ಅವರನ್ನು ಎರಡು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ.
ಬೆಂಗಳೂರಿನ ಒಂದನೇ ಎಸಿಎಂಎಂ ಕೋರ್ಡ್ ಆದೇಶ ಹೊರಡಿಸಿದ್ದು ಸೆ. 27 ರವೆರೆಗೆ ನಟಿಮಣಿಯರಿಗೆ ಜೈಲೂಟ ಫಿಕ್ಸ್ ಆಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿನ ಒಂದು ಸುತ್ತಿನ ವಿಚಾರಣೆಯನ್ನು ಸಿಸಿಬಿ ಮುಗಿಸಿದ್ದು ಸಾಕಷ್ಟು ಸಾಕ್ಷ್ಯ ಕಲೆಹಾಕಿದೆ.
ಮುಂದುವರಿದ ರಾಗಿಣಿ ಮತ್ತು ಸಂಜನಾ ರಂಪಾಟ
ಸಿಸಿಬಿ ಪೊಲೀಸರು ಎಲ್ಲ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಇನ್ನೊಂದು ಕಡೆ ರವಿಶಂಕರ್ ಮತ್ತು ವೀರೇನ್ ಖನ್ನಾ ಗೆ ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಕೇಸಿನಲ್ಲಿ ಜೈಲಿಗೆ ಎಂಬ ಆದೇಶ ಇದ್ದರೆ ಬಾಣಸವಾಡಿ ಡ್ರಗ್ಸ್ ಕೇಸಿನಲ್ಲಿ ಎರಡು ದಿನ ಸಿಸಿಬಿ ವಿಚಾರಣೆ ಎದುರಿಸಬೇಕಾಗಿದೆ.
ಸಂಜನಾ ಪೊಲೀಸ್ ಕಸ್ಟಡಿ ಯಾಕೆ? ನಟಿ ಸಂಜನಾ ತನಿಖೆಗೆ ಸ್ಪಂದಿಸುತ್ತಿಲ್ಲ. ಸಿಮ್ ನೀಡದೆ ಸತಾಯಿಸುತ್ತಿದ್ದಾರೆ. ಸಂಜನಾ ವಿಚಾರಣೆ ಸಂಪೂರ್ಣ ಮುಗಿದಿಲ್ಲ ಎಂದ ಸಿಸಬಿ ಸಂಜನಾ ಅವರನ್ನು ಐದು ದಿನ ಕಸ್ಟಡಿಗೆ ಕೇಳಿತ್ತು. ಆದರೆ ನ್ಯಾಯಾಲಯ ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ರಾಗಿಣಿಯನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗುತ್ತಿದ್ದು ಕೊರೋನಾ ಟೆಸ್ಟ್ ಮಾಡಿಸಲಾಗುತ್ತದೆ. ಐದು ದಿನಗಳ ಕ್ವಾರಂಟೈನ್ ಮಾಡಲು ಪ್ರತ್ಯೇಕ ಕೋಣೆಯನ್ನು ಸಿದ್ಧಮಾಡಲಾಗಿದೆ. ಇನ್ನೊಂದು ಕಡೆ ಸಂಜನಾಗೆ ಪ್ರಶ್ನೆಗಳು ಮುಂದುವರಿಯಲಿವೆ.
ಒಟ್ಟಿನಲ್ಲಿ ಸ್ಯಾಂಡಲ್ ವುಡ್ ವಿಚಾರಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದ್ದು ನಟಿಯೊಬ್ಬರು ಡ್ರಗ್ಸ್ ಆರೋಪದಲ್ಲಿ ಜೈಲು ಸೇರಿದ್ದಾರೆ. ಎರಡು ದಿನದ ವಿಚಾರಣೆ ನಂತರ ಸಂಜನಾ ಕೂಡ ಪರಪ್ಪನ ಅಗ್ರಹಾರ ಸೇರುವ ಸಾಧ್ಯತೆ ಹೆಚ್ಚಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ