
ಮಂಗಳೂರು/ ಬೆಂಗಳೂರು(ಸೆ. 30) ಇಡೀ ಮಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ನೈಜೀರಿಯನ್ ಪ್ರಜೆಯನ್ನು ಬಂಧಿಸಿರುವ ವರದಿ ಒಂದು ಕಡೆ ಬರುತ್ತಿದ್ದರೆ ಇನ್ನೊಂದು ಕಡೆ ಮತ್ತೊಬ್ಬ ಕೊರಿಯೋಗ್ರಾಫರ್ ಬಂಧಿಸಲಾಗಿದೆ.
ಬೆಂಗಳೂರು ಮೂಲದ ಕೊರಿಯೋಗ್ರಾಫರ್ ನನ್ನು ಬಂಧಿಸಲಾಗಿದೆ. ಮಂಗಳೂರು ಸಿಸಿಬಿ ಪೊಲೀಸರಿಂದ ಕೋರಿಯೋಗ್ರಫರ್ ಕಂ ಡ್ಯಾನ್ಸರ್ ನನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಡ್ಯಾನ್ಸರ್ ಹಲವು ನಟಿಯರ ಹೆಸರನ್ನು ಈತ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
ಅನುಶ್ರೀಗೆ ಡ್ರಗ್ಸ್ ಶೆಟ್ಟಿ ತಂದ ಸಂಕಟ
ಇನ್ನೊಂದು ಕಡೆ ಸೆರೆ ಸಿಕ್ಕಿರುವ ನೈಜಿರಿಯನ್ ಡ್ರಗ್ಸ್ ಪೆಡ್ಲರ್ ಗೂ ಮಾತಿನ ಮಲ್ಲಿ ನಿರೂಪಕಿ ಅನುಶ್ರೀ ಗೊತ್ತು. ಪಾರ್ಟಿಗಳಲ್ಲಿ ಅನುಶ್ರೀಯನ್ನು ನೋಡಿದ್ದಾಗಿ ನೈಜೀರಿಯಾ ಪ್ರಜೆ ಹೇಳಿದ್ದ.
ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಡ್ರಗ್ಸ್ ನಶಾ ಒಂದಾದ ಮೇಲೆ ಒಂದು ತಿರುವು ಪಡೆದುಕೊಳ್ಳುತ್ತಿದ್ದು ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಲೆ ಇವೆ. ಈ ಪ್ರಕರಣವನ್ನು ಸಿಸಿಬಿ ಗಂಭೀರವಾಗಿ ತೆಗೆದುಕೊಂಡಿದ್ದು ಮೂಲಗಳನ್ನು ಒಂದೊಂದಾಗಿ ಹೆಕ್ಕಿ ತೆಗೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ