
ಕೊಲ್ಲಾಪುರ(ಸೆ. 30) ವೈದ್ಯನೊಬ್ಬನ್ನು ಬಲೆಗೆ ಬೀಳಿಸಿಕೊಂಡು ಆತನಿಂದ 60 ಲಕ್ಷ ರೂ. ವಂಚನೆಗೆ ಯತ್ನಿಸಿ ಮಾಡಿದ ಇಬ್ಬರು ಮಹಿಳೆಯರು ಬಲೆಗೆ ಬಿದ್ದಿದ್ದಾರೆ. ನಿಮ್ಮ ಮೇಲೆ ನಮಗೆ ಪ್ರೀತಿ ಹುಟ್ಟಿದೆ ಎಂದು ವೈದ್ಯರ ಜತೆ ಮಾತನಾಡಿ ನಿಧಾನವಾಗಿ ಚಾಟಿಂಗ್ ಮಾಡುತ್ತ ಬುಟ್ಟಿಗೆ ಹಾಕಿಕೊಂಡಿದ್ದರು.
ಬಂಧಿತ ಮಹಿಳೆಯರನ್ಜು ಪೂನಂ ಪಾಟೀಲ್, ಪ್ರಾಚಿ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಮಹಿಳೆಯರ ಜತೆ ಅಪ್ರಾಪ್ತ ಬಾಲಕಿಯೊಬ್ಬಳ ವಿಚಾರಣೆಯನ್ನು ಮಾಡಲಾಗಿದ್ದು ವೈದ್ಯನಿಂದ ಹಣ ಪಡೆದುಕೊಂಡಿದ್ದರ ಬಗ್ಗೆ ಬಾಲಕಿ ತಪ್ಪೊಪ್ಪಿಕೊಂಡಿದ್ದಾಳೆ.
ವೆಬ್ ಸರಣಿ ನೋಡಿ ಡ್ರಗ್ಸ್ ದಂಧೆಗೆ ಇಳಿದವರ ಕತೆ
ಆರು ತಿಂಗಳ ಹಿಂದೆ ಮಹಿಳೆಯರಿಬ್ಬರು ಚೆಕ್ ಅಪ್ ಗೆಂದು ವೈದ್ಯರ ಬಳಿ ಹೋಗಿದ್ದರು. ಈ ವೇಳೆ ವೈದ್ಯನಿಗೆ ಹತ್ತಿರವಾಗಿದ್ದ ಮಹಿಳೆಯರು ಆತನ ನಂಬರ್ ಪಡೆದುಕೊಂಡು ಮೆಸೇಜ್ ಮಾಡಲು ಆರಂಭಿಸಿದ್ದರು. ನಿಮ್ಮ ಮೇಲೆ ನಮಗೆ ಲವ್ ಆಗಿದ ಎಂದು ನಾಟಕ ಶುರು ಹಚ್ಚಿಕೊಂಡಿದ್ದರು.
ಇದನ್ನು ನಂಬಿದ ವೈದ್ಯ ಮಹಿಳೆಯರೊಂದಿಗೆಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾನೆ. ವಾಟ್ಸಪ್ ಚಾಟ್ ನ ಸ್ಕ್ರೀನ್ ಶಾಟ್ ಇಟ್ಟುಕೊಂಡ ಮಹಿಳೆಯರು ನಂತರ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ.
ಮೊದಲು ಹನ್ನೆರಡು ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. ಬೆದರಿದ ವೈದ್ಯ ಹಣ ನೀಡಿದ್ದಾನೆ. ಇದಾದ ಮೇಲೆ 48 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೀನ್ ಶಾಟ್ ಶೆರ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ನಂತರ ವೈದ್ಯ ಪೊಲೀಸರ ಮೊರೆ ಹೋಗಿದ್ದು ವಂಚಕಿಯರನ್ನು ಬಲೆಗೆ ಕೆಡವಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ