ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು/ ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ನೋಟಿಸ್/ ರಾಗಿಣಿ ಸದ್ಯ ಕರ್ನಾಟಕದಲ್ಲಿ ಇಲ್ಲ ಎಂಬ ಮಾಹಿತಿ/ ಮೂವತ್ತಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿರುವ ರಾಗಿಣಿ
ಬೆಂಗಳೂರು (ಸೆ. 02) ಅನಿಕಾಳಿಂದ ಶುರುವಾದ ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರ ನಟಿ ರಾಗಿಣಿ ದ್ವಿವೇದಿವರೆಗೆ ಬಂದು ನಿಂತಿದೆ. ಮೂವತ್ತಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಗೆ ಸಿಸಿಬಿ ನೋಟಿಸ್ ನೀಡಿದೆ.
ರಾಗಿಣಿ ದ್ವಿವೇದಿ ಮಾಜಿ ಗೆಳೆಯ ರವಿಶಂಕರ್ ರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ರಾಗಿಣಿಗೂ ಸಿಸಿಬಿ ನೋಟಿಸ್ ನೀಡಲಾಗಿದ್ದು ಆದರೆ ನಟಿ ಕರ್ನಾಟಕದಲ್ಲಿ ಇಲ್ಲ ಎಂಬ ಮಾಹಿತಿ ಸಿಕ್ಕಿದೆ.
ಸ್ಫೋಟಕ ಮಾಹಿತಿ ಕೊಟ್ಟ ಡ್ರಗ್ ಪೆಡ್ಲರ್
ರಾಗಿಣಿ ಗೆಳೆಯರಾದ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹಾಗೂ ರವಿಶಂಕರ್ ಕಳೆದ ವರ್ಷ ಖಾಸಗಿ ಹೋಟೆಲ್ ಒಂದರಲ್ಲಿ ಬಡಿದಾಡಿಕೊಂಡಿದ್ದು ವರದಿಯಾಗಿತ್ತು.
ಇನ್ನೊಂದು ಕಡೆ ಗುರುವಾರ ಬಾಂಬ್ ಸಿಡಿಸಿ ಹದಿನೈದು ಜನರ ಹೆಸರು ನೀಡಿದ್ದ ಇಂದ್ರಜಿತ್ ಲಂಕೇಶ್ ಮತ್ತೆ ಸಿಸಿಬಿ ಎದುರು ಹಾಜರಾಗಲಿದ್ದು ಇನ್ನೊಂದಿಷ್ಟು ಜನರ ಹೆಸರುಗಳನ್ನು ಹೇಳುವ ಸಾಧ್ಯತೆ ಇದೆ.