
ಬೆಂಗಳೂರು(ಸೆ. 09) ನನ್ನ ಬಗ್ಗೆ ಮಾಧ್ಯಮದಲ್ಲಿ ಏನೇನೋ ಓಡ್ತಿದೆ. ಸೋಮವಾರ ಬಾಂಬೆಗೆ ತೆರಳಲು ಸೋಮವಾರ ಟಿಕೆಟ್ ಬುಕ್ ಮಾಡಿದ್ದೇನೆ. ರಿಟರ್ನ್ ಟಿಕೆಟ್ ಕೂಡ ಬುಕ್ ಮಾಡಿಸಿದ್ದೆ ಎಂದು ನಿರೂಪಕಿ ಅನುಶ್ರೀ ತಿಳಿಸಿದ್ದಾರೆ.
ನಾನೇಲ್ಲೂ ಭಯಪಟ್ಟು ಹಾರು ಹೋಗಿಲ್ಲ ಎಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರೋ ನಿವಾಸದ ಮನೆಗೆ ಆಗಮಿಸಿದ ಅನುಶ್ರೀ ತಿಳಿಸಿದ್ದಾರೆ.
ಎರಡು ದಿನದ ಹಿಂದೆ ಮುಂಬೈ ಗೆ ಹೋಗಿದ್ದ ನಟಿ ಅನುಶ್ರೀ ಇದೀಗ ವಾಪಸ್ ಬಂದಿದ್ದಾರೆ. ಡ್ರಗ್ಸ್ ಕೇಸಿನಿಂದ ಅನುಶ್ರೀ ಕೈಬಿಟ್ಟಿರುವ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗಿತ್ತು.
ಇದು ನನ್ನ ನೆಲ ಎಲ್ಲೂ ಓಡಿಹೋಗಲ್ಲ. ಸಾವಿರ ಆರೋಪಗಳನ್ನು ಹೇಳ್ತಾರೆ. ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸಿದ್ದಾರೆ. ಪೋಲಿಸರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನನ್ನ ಮೇಲೆ ನೂರಾರು ಆರೋಪ ಇದೆ. ಯಾವ ಪ್ರಭಾವಶಾಲಿಗಳ ಹೆಲ್ಪ್ ಅವಶ್ಯಕತೆ ಇಲ್ಲ. ನಾನು ಮೂರುವರೆ ವರ್ಷದಿಂದ ಬಾಡಿಗೆ ಮನೆಯಲ್ಲಿದ್ದೆ. 12 ವರ್ಷದಿಂದ ಪಿಜಿಯಲ್ಲಿ ಶೇರಿಂಗ್ ನಲ್ಲಿದ್ದೆ. ಕಾನೂನಿನ ಮೇಲೆ ನಂಬಿಕೆಯಿದೆ ಎಂದರು.
ಅನುಶ್ರೀ ಕಾಪಾಡಿದ ಕಾಣದ ಕೈ! ಕಮಿಷನರ್ ಹೇಳಿದ್ದೇನು?
ನನಗೆ ನಿಜವಾಗಲೂ ಬೇಜಾರಿದೆ. ಗೌರಿ ಹಬ್ಬದ ದಿನ ಡ್ರಗ್ಸ್, ಪೆಡ್ಲಿಂಗ್, ಕನ್ಸಪ್ಶನ್ ಬಗ್ಗೆ ಮಾತಾಡ್ತಿದ್ದಾರೆ. ಪ್ರಶಾಂತ ಸಂಬರ್ಗಿ ಅವ್ರು ಕಾನೂನು ಮೂಲಕ ಹೋಗಲಿ. ನಮ್ಮ ಸಮಾಜದಲ್ಲಿ ಕಾನೂನು ಇದೆ. ಆಗಲು ಉತ್ತರ ಕೊಟ್ಟಿದ್ದೇನೆ, ಈಗಲೂ ಉತ್ತರ ಕೊಟ್ಟಿದ್ದೇನೆ. ಕಿಶೋರ್ ನೋಡಿರುವುದು 12 ವರ್ಷಗಳ ಹಿಂದೆ. ಅವತ್ತು ಅಥವಾ 5 ವರ್ಷಗಳ ಹಿಂದಿನಿಂದ ಮಾತಾಡಿಲ್ಲ. ತರುಣ್ ಜತೆಗೆ ಫ್ರೆಂಡ್ ಶೀಪ್ ಇಲ್ಲ, ಕೊರಿಯೋಗ್ರಾಫರ್ ಆಗಿದ್ದರು.
ಬೆಳಗಿನಿಂದ ಸಂಜೆವರೆಗೂ ರಿಹರ್ಸಲ್ ಮಾಡುತ್ತಿದ್ದೇವು. ಮಂಗಳೂರಿನಲ್ಲಿ ಗುರು ಸ್ಥಾನದಲ್ಲಿದ್ದು ಡ್ಯಾನ್ಸ್ ಕ್ಲಾಸ್ ಓಪನಿಂಗ್ ಮಾಡಿ ಬಂದಿದ್ದೆ. ಕನ್ಸೂಮರ್ ಅಥವಾ ಪೆಡ್ಲರ್ ಆಗಿ ನನ್ನ ವಿಚಾರಣೆಗೆ ಕರೆದಿದ್ದರು. ಪೇಪರ್ಸ್ ಸಬಿಟ್ ಮಾಡಿದ್ದೇನೆ. ಭಯ ಇಲ್ಲ ಮತ್ತೆ ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ನನ್ನ ಹೆಸರನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿವುದರ ಬಗ್ಗೆ ನನಗೆ ಗೊತ್ತಿಲ್ಲ. ಲಾ ಪ್ರಕಾರ ಉತ್ತರಿಸಿದ್ದೇನೆ, ಮತ್ತೆ ವಿಚಾರಣೆಗೆ ಕರೆದ್ರೂ ಉತ್ತರಿಸ್ತೇನೆ. 15 ವರ್ಷದಿಂದ ಕೆಲಸ ಮಾಡ್ತಿದ್ದೇನೆ. ಸಾವಿರಾರು ಜನರೊಂದಿಗೆ ಕೆಲಸ ಮಾಡಿದ್ದೇನೆ. ಸಿಸಿಬಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತೆ ಕೊಟ್ಟಿದ್ದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ