
ಮುಂಬೈ(ಸೆ. 09) ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಯುವಕ ಖತರ್ ನಾಕ್ ಕೆಲಸ ಮಾಡಿದ್ದಾನೆ. ಕಾಲೇಜು ಸಹಪಾಠಿ ವಿದ್ಯಾರ್ಥಿನಿಯ ಪೋನ್ ನಂಬರ್ ಅನ್ನು ಪೋರ್ನ್ ಸೈಟ್ ಗೆ ಅಪ್ ಲೋಡ್ ಮಾಡಿದ್ದಾನೆ.
ಮಹಾರಾಷ್ಟ್ರದ ಮುಂಬೈನ ಮಲಾಡ್ ಪೊಲೀಸರು ಆರೋಪಿ ಕುನಾಲ್ ಅಂಗೋಲ್ಕರ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಕೋರಿಯರ್ ಮೂಲಕ ಸಹಪಾಠೀಗೆ ಸೆಕ್ಸ್ ಟಾಯ್ ಗಳನ್ನು ಕಳಿಸಿಕೊಟ್ಟಿದ್ದ.
ಕಳೆದ ಫೆಬ್ರವರಿಯಿಂದ ಯುವತಿಗೆ ದೂರವಾಣಿ ಕರೆಗಳು ಬರಲು ಆರಂಭಿಸಿದ್ದವು. ಸೆಕ್ಸ್ ನಡೆಸಿದರೆ ಎಷ್ಟು ಹಣ ಕೊಡಬೇಕು ಎಂದು ಕೇಳುತ್ತಿದ್ದರು. ಕೋರಿಯರ್ ನಲ್ಲಿ ಆಕೆಹೆ ಸೆಕ್ಸ್ ಆಟಿಗೆಗಳು ಬಂದವು. ಪಾರ್ಸಲ್ ತನಗೆ ಕಣ್ಣು ತಪ್ಪಿನಿಂದ ಬಂದಿರಬಹುದು ಎಂದು ಭಾವಿಸಿ ವಾಪಸ್ ಮಾಡಿದ್ದಳು. ಆದರೆ ಆಕೆಗೆ ನಿರಂತರವಾಗಿ ಒಂದಾದ ಮೇಲೆ ಒಂದು ಪಾರ್ಸಲ್ ಬರತೊಡಗಿತು. ಕುತೂಹಲದಿಂದ ತೆರೆದು ನೋಡಿದಾಗ ಸೆಕ್ಸ್ ಟಾಯ್ಸ್ ಇದ್ದವು. ತಕ್ಷಣ ಆಕೆ ಪೊಲೀಸರ ಮೊರೆ ಹೋಗಿದ್ದಾರೆ.
ರಾಜ್ ಕುಂದ್ರಾ ಪೋರ್ನ್ ರಾಕೆಟ್ ನಲ್ಲಿ ಯಾರೆಲ್ಲ ಇದ್ದಾರೆ?
ಪೊಲೀಸರು ಕೋರೊಯರ್ ಕಚೇರಿಯ ಸಂಪರ್ಕ ಮಾಡಿದ್ದು ಯಾರು ಎಲ್ಲಿಂದ ಕಳಿಸಿದರು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಇನ್ನೊಂದು ಕಡೆ ಯಾವ ಐಪಿ ಅಡ್ರೆಸ್ ನಿಂದ ಮೊಬೈಲ್ ನಂಬರ್ ಅಪ್ ಲೋಡ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ವಿಪಿಎನ್ ಕನೆಕ್ಟ್ ಮಾಡಿಕೊಂಡು ಆರೋಪಿ ಇಂಥ ಕೆಲಸ ಮಾಡಿದ್ದ. ಯಾವ ಐಪಿ ಅಡ್ರೆಸ್ ನಲ್ಲಿ ಸೆಕ್ಸ್ ಟಾಯ್ ಆರ್ಡರ್ ಮಾಡಿದ್ದ ಎಂಬುದನ್ನು ಪತ್ತೆಮಾಡಿದಾಗ 500 ಕ್ಕೂ ಹೆಚ್ಚು ಅಡ್ರೆಸ್ ಪತ್ತೆಯಾಗಿದೆ. ಕೊನೆಗೂ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದಾರೆ.
ಸಹಪಾಠಿ ಬಳಿ ಲೈಂಗಿಕ ಸಂಬಂಧ ಬೆಳೆಸೋಣ ಎಂದು ಬೇಡಿಕೆ ಇಟ್ಟಿದ್ದ. ಇದನ್ನು ನಿರಾಕರಣೆ ಮಾಡಿದ ಕಾರಣ ದ್ವೇಷ ಸಾಧನೆಗಾಗಿ ಇಂಥ ಕೆಲಸ ಮಾಡಿದ್ದ ಎನ್ನುವುದು ಬಹಿರಂಗವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ