'ನಾಚಿಕೆಯಾಗ್ಬೇಕು' ಸಂಜನಾಗೆ ಸಹನೆಯ ಪಾಠ ಹೇಳಿದ ನೆಟ್ಟಿಗರು !

Published : Oct 06, 2021, 05:11 PM ISTUpdated : Oct 06, 2021, 05:14 PM IST
'ನಾಚಿಕೆಯಾಗ್ಬೇಕು' ಸಂಜನಾಗೆ ಸಹನೆಯ ಪಾಠ ಹೇಳಿದ ನೆಟ್ಟಿಗರು !

ಸಾರಾಂಶ

* ಕ್ಯಾಬ್ ಚಾಲಕನ ಜತೆ ಚಿತ್ರನಟಿ ಸಂಜನಾ ಕಿರಿಕ್ * ಲೋಕೇಶನ್ ಬದಲಾಯಿಸಲು ಸಾಧ್ಯವಿಲ್ಲ ಎಂದು ಕ್ಯಾತೆ * ನಟಿ ವಿರುದ್ಧ ದೂರು  ಕೊಟ್ಟಿದ್ದ ಚಾಲಕ * ಚಿತ್ರನಟಿಯಗೆ ಸೋಶಿಯಲ್ ಮೀಡಿಯಾದಲ್ಲಿ ತರಾಟೆ

ಬೆಂಗಳೂರು(ಅ. 06)  ಚಿತ್ರನಟಿ ಸಂಜನಾ ಗರ್ಲಾನಿ (Sandalwood) ಕ್ಯಾಬ್ ಚಾಲಕನೊಂದಿಗೆ ಕಿರಿಕ್ ಮಾಡಿಕೊಂಡಿದ್ದು ಸುದ್ದಿಯಾಗಿತ್ತು. ಓಲಾ ಕ್ಯಾಬ್ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಬಂದಿತ್ತು.. ಶೂಟಿಂಗ್‌ ಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದರು.  ಲೋಕೇಶನ್ ಬದಲಾವಣೆ ಮಾಡಿಕೊಳ್ಳುವ  ವಿಚಾರದಲ್ಲಿ ಜಗಳವಾಗಿತ್ತು.

ಇಂದಿರಾನಗರದಿಂದ ಕೆಂಗೇರಿಗೆ (Bengaluru) ಕ್ಯಾಬ್ ಬುಕ್ ಮಾಡಬೇಕಾಗಿತ್ತು. ಆದರೆ ನಟಿ ಆರ್ ಆರ್ ನಗರಕ್ಕೆ ಬುಕ್ ಮಾಡಿದ್ದರು. ಲೋಕೇಶನ್ ಬದಲಾಯಿಸಿ ಎಂದು ಕೇಳಿಕೊಂಡರೂ ನಟಿ ಒಪ್ಪಿಲ್ಲ.  ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಬ್ ಚಾಲಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಟಿ ಕಾರಿನಲ್ಲಿ ಹೇಗೆ ನಡೆದುಕೊಂಡರು ಎಂಬುದನ್ನು ಚಾಲಕ ವಿಡಿಯೋ ಮಾಡಿಕೊಂಡಿದ್ದರು.

ನಟಿ ಸಂಜನಾ ಸೋಶಿಯಲ್ ಮೀಡಿಯಾದಲ್ಲಿಯೂ(Social Media) ಈ ವಿಚಾರ ಬರೆದುಕೊಂಡಿದ್ದರು. ಆದರೆ ನೆಟ್ಟಿಗರು ನಟಿಯನ್ನೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನಟಿಯರ ನಶೆ ಪುರಾಣ

ನೀವು ಯಾವ ಕಾರಣಕ್ಕೆ ಪಬ್ಲಿಕ್ ಸಾರಿಗೆ ಬಳಸಿದ್ರಿ ಎನ್ನುವುದೇ ಅರ್ಥವಾಗಲ್ಲ. ಈ ಬಗೆಯ ಸೇವೆ ಪಡೆದುಕೊಳ್ಳಬೇಕಿದ್ದರೆ ಒಂದು ಹಂತದ ಸಂಯಮ ಇಟ್ಟುಕೊಳ್ಳಬೇಕಾಗುತ್ತದೆ ಎಂದು ಒಬ್ಬರು ಸಲಹೆ ನೀಡಿದ್ದಾರೆ. 

ನಿಮ್ಮ ಸಮಸ್ಯೆ ಏನು? ನಿಮೆಗೆ ಎಸಿ ಬೇಕು.. ಕಾರು ವೇಗವಾಗಿ ಹೋಗಬೇಕು! ಕೊರೋನಾ ಸಂದರ್ಭದಲ್ಲಿ ನಿಮಗೆ ಸಾಮಾನ್ಯ ಜ್ಞಾನವಾದರೂ ಇದೆಯಾ?  ಚಾಲಕ ಸೇರಿ  ಕ್ಯಾಬ್ ನಲ್ಲಿ ಐದು ಜನರಿರಬಹುದು..  ಬಡ ಚಾಲಕನ ಮೇಲೆ ಈ ರೀತಿ ಆರೋಪ ಮಾಡಿದ್ದೀರಾ? ಎಂದು ಮತ್ತೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಅಮಾಯಕ ಕ್ಯಾಬ್ ಚಾಲಕನ ಮೇಲೆ ಆರೋಪ ಮಾಡುವುದು ಸರಿ ಅಲ್ಲ. ನೀವು ಏನೆಲ್ಲಾ ಮಾತನಾಡಿದ್ದೀರಾ ಎನ್ನುವುದನ್ನು ಚಾಲಕ ವಿಡಿಯೋ ಮಾಡಿಕೊಂಡಿದ್ದಾನೆ. ದುಡ್ಡು ಇರುವ ನೀವು ಶೂಟಿಂಗ್ ಗೆ ಬೇಕಾದರೆ ವಿಮಾನದಲ್ಲಿ ಹೋಗಿ..ಸುಮ್ಮನೆ ಅಮಾಯಕರ ಮೇಲೆ ದಬ್ಬಾಳಿಕೆ ದರ್ಪ ಒಳ್ಳೆಯದಲ್ಲ ಎಂದು ಕಿವಿ ಹಿಂಡಿದ್ದಾರೆ. 

ಸೆಲೆಬ್ರಿಟಿ ಸ್ಟೇಟಸ್ ಗೆ ಇವರು ಅರ್ಹರಲ್ಲ.. ಥೂ ನಾಚಿಕೆಯಾಗಬೇಕು.. ಒನ್ನ ಅಮಾಯಕ ಕ್ಯಾಬ್ ಚಾಲಕನ ಜತೆ ಜಗಳ ಮಾಡೋದಕ್ಕೆ ಎಂದು ಸಂಜನಾ ವಿರುದ್ಧ ಹರಿಹಾಯ್ದಿದ್ದಾರೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!