Crime News: ಲಕ್ಷಾಂತರ ರೂ ಮೌಲ್ಯದ ಆನೆ ದಂತ ಕಲಾಕೃತಿ ಮಾರಾಟ- ಐವರು ಪೊಲೀಸರ ವಶಕ್ಕೆ

By Ravi Janekal  |  First Published Feb 16, 2023, 1:19 PM IST

ಆನೆ ದಂತದಿಂದ ಮಾಡಿರುವ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸಿದ ಅಂತರ ರಾಜ್ಯ ಚೋರ(Interstate thief)ರನ್ನ ಬಂಧಿಸುವಲ್ಲಿ ಸಿಐಡಿ(CID) ಅಧಿಕಾರಿಗಳು ಯಶಸ್ವಿಯಾಗಿದ್ದು, ಐವರು ದಂತ ಚೋರರನ್ನು ಜೈಲಿಗಟ್ಟಲಾಗಿದೆ‌


ಹುಬ್ಬಳ್ಳಿ (ಫೆ.16): ಆನೆ ದಂತದಿಂದ ಮಾಡಿರುವ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸಿದ ಅಂತರ ರಾಜ್ಯ ಚೋರ(Interstate thief)ರನ್ನ ಬಂಧಿಸುವಲ್ಲಿ ಸಿಐಡಿ(CID) ಅಧಿಕಾರಿಗಳು ಯಶಸ್ವಿಯಾಗಿದ್ದು, ಐವರು ದಂತ ಚೋರರನ್ನು ಜೈಲಿಗಟ್ಟಲಾಗಿದೆ‌

ಎಡಿಜಿಪಿ ಸಿ.ಐ.ಡಿ ಬೆಂಗಳೂರು ಮತ್ತು ಪ್ರಭಾರ ಡಿ.ಐ.ಜಿ.ಪಿ ಸಿಐಡಿ ಅರಣ್ಯ ಘಟಕ ಬೆಂಗಳೂರು ಹಾಗೂ ಪೊಲೀಸ್ ಉಪಾಧೀಕ್ಷಕರು ಸಿಐಡಿ ಅರಣ್ಯ ಘಟಕ ಹುಬ್ಬಳ್ಳಿ ವಿಭಾಗರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಅರಣ್ಯ ಇಲಾಖೆಯು ಐವರನ್ನು ವಶಕ್ಕೆ ಪಡೆದಿದ್ದು, ಲಕ್ಷಾಂತರ ಮೌಲ್ಯದ ಆನೆ ದಂತ(elephant tusk)ದ ಕಲಾಕೃತಿಗಳನ್ನು ವಶಕ್ಕೆ ಪಡೆಯಲಾಗಿದೆ.

Tap to resize

Latest Videos

ಆನೆದಂತ ಮಾರಾಟ ಮಾಡಲು ಯತ್ನ: ಐವರ ಬಂಧನ

ಕೊಲ್ಲಾಪೂರ ಮೂಲದ ಸಾತ್  ಶಹಾಜನ್ ಜಮಾದಾರ(Saat Shahajan Jamadar), ವಿಜಯ್ ರಾಜಾರಾಂ ಕುಂಬಾರ(Vijaya rajaram Kumbar), ಸಾಗರ ಸುಭಾಷ ಪರಾಣಿಕ(Sagar subhash paranik), ನಿಪ್ಪಾಣಿ ಮೂಲದ ವಿನಾಯಕ ನಾಮದೇವ ಕಾಂಬ್ಳೆ, (Vinayaka Namadev Kamble)  ದಾನಜೀ ಪಾಂಡುರಂಗ ಪಾಟೀಲ ಎಂಬುವವರೇ ಬಂಧಿತ ಆರೋಪಿಗಳು. 

ಅಕ್ರಮವಾಗಿ ಆನೆ ದಂತದಿಂದ ಮಾಡಿರುವ ಕಲಾಕೃತಿಗಳನ್ನು  ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ‌. ಬಂಧಿತರಿಂದ 384 ಗ್ರಾಂ ತೂಕದ ಆನೆಯ ದಂತದಿಂದ ತಯಾರಿಸಿದ ಅಲಂಕಾರಿಕ ಪಟ್ಟಿಗೆ, 112 ಗ್ರಾಂ ತೂಕದ ಆನೆಯ ದಂತದಿಂದ ತಯಾರಿಸಿದ ಕೆಂಪು ಹರಳು, ಇರುವ ಒಂದು ಖಡ್ಗ, 350 ಗ್ರಾಂ ತೂಕದ ಆನೆಯ ದಂತದಿಂದ ಮಾಡಿದ ಒಂದು ಆಯತಾಕಾರದ ಪೆಟ್ಟಿಗೆ, 279 ಗ್ರಾಂ ತೂಕದ ಆನೆಯ ದಂತದಿಂದ ಮಾಡಿದ ಒಂದು ಮೊಟ್ಟೆಯಾಕಾರದ ಪೆಟ್ಟಿಗೆಯನ್ನು ವಶಕ್ಕೆ ಪಡೆಯಲಾಗಿದೆ‌

ಇನ್ನೂ ಆರೋಪಿತ ಸಾತ್ ಶಹಜಾನ ಜಮಾದಾರ ಇತನಿಗೆ ವಿಚಾರಣೆ ಒಳಪಡಿಸಿದಾಗ ಇವುಗಳನ್ನು ತನ್ನ ತಂದೆಯವರಾದ ಶಹಜಾನ ಜಮಾದಾರ ರಾಜಸ್ಥಾನ(Rajastan)ದಲ್ಲಿ ನಡೆಯುವ ಜಾತ್ರೆಗಳು ಸಂತೆಗಳು ಸಾಧುಸಂತರ ಬಳಿಯಿಂದ ಅನೇಕ ವರ್ಷಗಳ ಹಿಂದೆ ಸಂಗ್ರಹಿಸಿ ಮನೆಯಲ್ಲಿಟ್ಟಿದ್ದರು. ಅವುಗಳನ್ನು ಮಾರಾಟ ಮಾರಿದರೆ ಸಾಕಷ್ಟು ದುಡ್ಡು ಬರಬಹುದು ಅಂತಾ ತಿಳಿದು ನಾವು ಇಲ್ಲಿಗೆ ಮಾರಾಟ ಮಾಡಲು ಬಂದಿರುವುದಾಗಿ ಬಾಯಿ ಬಿಟ್ಟಿದ್ದಾರೆ.

ಬೆಂಗ್ಳೂರಲ್ಲಿ ದಂತಚೋರರ ಗ್ಯಾಂಗ್‌: 8 ಮಂದಿ ಬಂಧನ

ಆರೋಪಿತರ ವಿರುದ್ಧ 01/2023 ಕಲಂ 9,39,40, 48 (A)49(B), 50,51,55 R/W ಶೆಡ್ಯೂಲ್ (1) ವನ್ಯಜೀವಿ ಸಂರಕ್ಷಣಾ ಕಾಯ್ದೆ(Wildlife act) 1972 ರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ ಆದ ಪ್ರಸಾದ ಪಣೇಕರ್ ಹಾಗೂ ಸಿಬ್ಬಂದಿಗಳಾದ ಎಲ್.ಎ ಪಾಠಕ, ಅಶೋಕ ನಾಗರಹಳ್ಳಿ, ರವೀಂದ್ರ ಗೋಣೆನವರ, ಎಸ್.ಎಚ್‌. ಹುಲಗೇರ ಹಾಗೂ ದಿವ್ಯ ಎಸ್ ನಾಯ್ಕ ಅವರ ಕಾರ್ಯಕ್ಕೆ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

click me!