Pocso case: ಅಪ್ರಾಪ್ತೆಗೆ ಮಗು ಜನನ; ತಲೆಮರೆಸಿಕೊಂಡಿದ್ದ ಆರೋಪಿ ಬಂಧನ 

By Ravi Janekal  |  First Published Feb 16, 2023, 12:21 PM IST

ತಾಲೂಕಿ ಗ್ರಾಮವೊಂದರಲ್ಲಿ ಹತ್ತನೇ ತರಗತಿ ಓದುತ್ತಿರಯವ ಹದಿನಾರು ವರ್ಷದ ಬಾಲಕಿಗೆ ಹೆರಿಗೆಯಾಗಿ , ಗಂಡು ಮಗು ಜನಿಸಿದೆ ಘಟನೆ ನಡೆದಿದೆ.


ಕೊಪ್ಪಳ (ಫೆ.16) : ತಾಲೂಕಿ ಗ್ರಾಮವೊಂದರಲ್ಲಿ ಹತ್ತನೇ ತರಗತಿ ಓದುತ್ತಿರಯವ ಹದಿನಾರು ವರ್ಷದ ಬಾಲಕಿಗೆ ಹೆರಿಗೆಯಾಗಿ , ಗಂಡು ಮಗು ಜನಿಸಿದೆ ಘಟನೆ ನಡೆದಿದೆ.

ಈ ಘಟನೆಗೆ ಕಾರಣವಾದ ಆರೋಪಿಯನ್ನು ಪೋಕ್ಸೋ ಕಾಯ್ದೆ(Pocso act) ಅಡಿಯಲ್ಲಿ ಬಂಧಿಸಲಾಗಿದೆ.  ಅಪ್ರಾಪ್ತೆ ಜತೆಗೆ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದ ಕಾಮುಕ. ವಿದ್ಯಾರ್ಥಿ ಗರ್ಭಿಣಿಯಾಗಿರುವ ವಿಷಯ ತಿಳಿದು ತಲೆಮರೆಸಿಕೊಂಡಿದ್ದ. ಗರ್ಭಿಣಿಯಾಗಿರುವ ವಿದ್ಯಾರ್ಥಿನಿ ಪೋಷಕರ ಬಳಿ ಆರೋಪಿಯ ಹೆಸರು ಹೇಳಿದ್ದಾಳೆ. ಆದರೆ ಅದಾಗಲೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಜಾತ್ರೆಯೊಂದರಲ್ಲಿ ಇರುವುದನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. 

Latest Videos

undefined

Sexual assault: 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕ ಫಿರೋಜ್‌ಖಾನ್ ಅರೆಸ್ಟ್

ಬಾಲಕಿ ಗರ್ಭವತಿಯಾಗಿದ್ದರು ಕುಟುಂಬದವರು ಮರ್ಯಾದೆಗೆ ಅಂಜಿ ಮುಚ್ಚಿಟ್ಟದ್ದರು. ಆದರೆ ಆಕೆ ಮಗವಿಗೆ ಜನ್ಮ ನೀಡುವಾಗ ವಿಷಯ ಪೊಲೀಸರ ಗಮನಕ್ಕೆ ಬಂದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಕೊಪ್ಪಳ ತಾಲೂಕಿನ ಅಳವಂಡಿ ಪೊಲೀಸ್ ಠಾಣೆ(Alavandi police station)ಯಲ್ಲಿ ಪ್ರಕರಣ ದಾಖಲಾಗಿದೆ.

ತಹ​ಸೀ​ಲ್ದಾರ್‌ ಕಚೇ​ರಿ​ಯಲ್ಲಿ ಪ್ರಭಾರ ಮುಖ್ಯಶಿಕ್ಷಕ ಆತ್ಮಹತ್ಯೆ

ಸಿಂದಗಿ: ಬಿಇಒ, ನಿಕಟಪೂರ್ವ ಮುಖ್ಯ ಶಿಕ್ಷಕ ಮತ್ತಿತರರ ಕಿರುಕುಳಕ್ಕೆ ಬೇಸತ್ತು ಸಾಸಬಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(Sasabalad high school)ಯ ಪ್ರಭಾರ ಮುಖ್ಯ ಶಿಕ್ಷಕ ಬಸವರಾಜ ಮಲ್ಲಪ್ಪ ನಾಯಕಲ್‌ ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಭಾನುವಾರ ರಾತ್ರಿ ನಡೆದಿದೆ. ಘಟ​ನೆ ಹಿನ್ನೆ​ಲೆ​ಯ​ಲ್ಲಿ ಸಿಂದಗಿ ಬಿಇಒ ಸೇರಿ ನಾಲ್ವ​ರನ್ನು ಅಮಾ​ನತು ಮಾಡಲಾ​ಗಿ​ದೆ.

ಮೂಲತಃ ಕೋರವಾರ(Koravar village) ಗ್ರಾಮದ ನಿವಾಸಿ, ತಾಲೂಕಿನ ಸಾಸಾಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯಶಿಕ್ಷಕ ಬಸವರಾಜ ಮಲ್ಲಪ್ಪ ನಾಯಕಲ್‌(54) ಆತ್ಮಹತ್ಯೆ ಮಾಡಿಕೊಂಡವರು. ಆತ್ಮ​ಹತ್ಯೆಗೂ ಮುನ್ನ ಬಸ​ವ​ರಾಜ ಅವರು 2 ಪುಟ​ಗಳ ಡೆತ್‌ ನೋಟ್‌ ಬರೆ​ದಿದ್ದು, ಅದರಲ್ಲಿ ಶಾಲೆಯ ನಿಕಟಪೂರ್ವ ಮುಖ್ಯಶಿಕ್ಷಕ ಜಿ.ಎನ್‌.ಪಾಟೀಲ, ಬಿಇಒ ಎಚ್‌.ಎಂ.ಹರನಾಳ ಹಾಗೂ ಸಿಆರ್‌ಪಿಗಳಾದ ಸಂಗಮೇಶ ಚಿಂಚೊಳ್ಳಿ, ಎಸ್‌.ಎಲ….ಬಜಂತ್ರಿ, ಬಿ.ಎಂ.ತಳವಾರ ಮಾನಸಿಕ ಹಿಂಸೆ ನೀಡುತ್ತಿದ್ದರೆಂದು ಆರೋ​ಪಿ​ಸಿ​ದ್ದಾ​ರೆ.

Ramanagara: ಬ್ಯಾಂಕ್‌ ನೋಟಿಸ್‌ಗೆ ಹೆದರಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಘಟ​ನೆ ಹಿನ್ನೆ​ಲೆ​ಯ​ಲ್ಲಿ ತಪ್ಪಿ​ತ​ಸ್ಥ​ರನ್ನು ಕೂಡಲೇ ಬಂಧಿ​ಸ​ಬೇಕು ಎಂದು ಆಗ್ರಹಿ​ಸಿ ಮೃತರ ಸಂಬಂಧಿಕರು, ಸರ್ಕಾರಿ ನೌಕರರ ಸಂಘದವರು, ಶಿಕ್ಷಕರ ಸಂಘದವರು ಸಿಂದಗಿಯಲ್ಲಿ ಸೋಮವಾರ ಭಾರೀ ಪ್ರತಿಭಟನೆ ನಡೆಸಿದರು. ಇದರ ಬೆನ್ನಲ್ಲೇ ಸಿಂದಗಿ ಬಿಇಒ ಎಂ.ಎಚ್‌.ಹರನಾಳ, ಸಾಸಾಬಾಳ ಶಾಲೆ ಸಹ ಶಿಕ್ಷಕ ಬಿ.ಎಂ.ತಳವಾರ, ಮುಖ್ಯ ಶಿಕ್ಷಕ ಬಿ.ಎಲ್‌.ಭಜಂತ್ರಿ, ಸಿಆರ್‌ಪಿ ಜಿ.ಎನ್‌.ಪಾಟೀಲರನ್ನು ಅಮಾನತು ಮಾಡ​ಲಾ​ಗಿ​ದೆ.

click me!