ದಾವಣಗೆರೆ: ಅಧಿಕಾರಿಗಳಿಗೇ ಖೆಡ್ಡಾ, ಅಕ್ರಮ ಬೈಕ್‌ಗಳಿಗೆ ಸಕ್ರಮ ಮುದ್ರೆ ಒತ್ತುತ್ತಿದ್ದ ಆರ್‌ಟಿಒ ಸಿಬ್ಬಂದಿ ಬಂಧನ

By Girish Goudar  |  First Published Aug 2, 2023, 8:52 PM IST

ಕಳ್ಳತನ ಮಾಡಿದ್ದ ಬೈಕುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತ್ತೆ ಮಾರಾಟ ಮಾಡುತ್ತಿದ್ದ  ಪ್ರಕರಣದ ಜಾಲ ಇದಾಗಿದ್ದು, ಐದು ಜನರನ್ನು ಬಂಧಿಸಲಾಗಿದೆ. ಆರ್‌ಟಿಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾದ (ಎಸ್ಡಿಎ) ಜಗದೀಶ್, ಪ್ರದೀಪ್, ವಸಂತಕುಮಾರ್, ಶಶಿಕುಮಾರ್ ಬಂಧಿತರು. ಇವರ ಜತೆ ಮಧ್ಯವರ್ತಿ ರಸೂಲ್ ಕೂಡ ಬಂಧನವಾಗಿದೆ. 


ವರದಿ: ವರದರಾಜ್ 

ದಾವಣಗೆರೆ(ಆ.02):  ಸಾಮಾನ್ಯವಾಗಿ ಅಕ್ರಮ ಮನೆ ಕಟ್ಟಿಕೊಂಡವರು ಸಕ್ರಮ ಮಾಡಿಕೊಳ್ಳಬಹುದು ಎಂದು ಸರಕಾರ ತನ್ನ ಲಾಭದ ದೃಷ್ಟಿಯಿಂದ ಆದೇಶ ಹೊರಡಿಸುವುದನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಆದರೆ ಇಲ್ಲೊಂದು ಪ್ರಕರಣದಲ್ಲಿ ಅಕ್ರಮವಾಗಿ ಕದ್ದ ಬೈಕ್‌ಗಳನ್ನು ಆರ್‌ಟಿಒ ಸಿಬ್ಬಂದಿಗಳೇ ಸಕ್ರಮ ಮಾಡಿಕೊಟ್ಟು, ರಸ್ತೆಯಲ್ಲಿ ಓಡಾಡಲು ಅನುವು ಮಾಡಿಕೊಡುತ್ತಿದ್ದರು. 

Tap to resize

Latest Videos

ಇಂತಹ ಘಟನೆ ದಾವಣಗೆರೆ ಆರ್‌ಟಿಒ ಕಚೇರಿಯಲ್ಲಿ ನಡೆದಿದ್ದು, ನಾಲ್ಕು ಜನ ಆರ್‌ಟಿಒ ಸಿಬ್ಬಂದಿ, ಓರ್ವ ಮಧ್ಯವರ್ತಿ ಪರಪ್ಪನ ಅಗ್ರಹಾರಕ್ಕೆ ಸಾಲಾಗಿ ಹೋಗಿದ್ದಾರೆ. ಇದರಿಂದ ಜನರಿಗೆ ಆರ್‌ಟಿಒ ಕಚೇರಿ ಮೇಲೆ ಇದ್ದ ಸಾಸಿವೆ ಕಾಳುವೆಯಷ್ಟು ನಂಬಿಕೆ ಹಾಳಾಗಿದೆ. ಕಳ್ಳತನ ಮಾಡಿದ್ದ ಬೈಕುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತ್ತೆ ಮಾರಾಟ ಮಾಡುತ್ತಿದ್ದ  ಪ್ರಕರಣದ ಜಾಲ ಇದಾಗಿದ್ದು, ಐದು ಜನರನ್ನು ಬಂಧಿಸಲಾಗಿದೆ. ಆರ್‌ಟಿಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾದ (ಎಸ್ಡಿಎ) ಜಗದೀಶ್, ಪ್ರದೀಪ್, ವಸಂತಕುಮಾರ್, ಶಶಿಕುಮಾರ್ ಬಂಧಿತರು. ಇವರ ಜತೆ ಮಧ್ಯವರ್ತಿ ರಸೂಲ್ ಕೂಡ ಬಂಧನವಾಗಿದೆ. 

ದಾವಣಗೆರೆ ಬೈಕ್‌ ಕಳವು ಪ್ರಕರಣ: ಇಬ್ಬರ ಬಂಧನ, 6 ಬೈಕ್‌ ಜಪ್ತಿ

ಹೊನ್ನಾಳಿಯಲ್ಲಿ ನಡೆದಿದ್ದ ಕಳ್ಳತನದ ಪ್ರಕರಣದಲ್ಲಿ ವಶಪಡಿಸಿಕೊಂಡ ಬೈಕುಗಳ ಮೂಲ ವಾರಸುದಾರರು ಯಾರೆಂದು ತನಿಖೆ ನಡೆಸಿದಾಗ ಆರ್‌ಟಿಒ ಕಚೇರಿಯ ಪ್ರಥಮ ಮತ್ತು ದ್ವೀತಿಯ ದರ್ಜೆ ಗುಮಾಸ್ತರು ಈ ಹಗರಣದಲ್ಲಿ ಭಾಗಿಯಾಗಿರುವುದು ಬಯಲಿಗೆ ಬಂದಿದೆ.  ಕಳ್ಳತನ ಮಾಡಿದ ಬೈಕ್‌ಗಳನ್ನು ಬೇರೊಬ್ಬರ ಹೆಸರಿಗೆ ನೋಂದಣಿ ಮಾಡಿ ಮಾರಾಟಮಾಡುವುದಕ್ಕೆ ಆರ್‌ಟಿಒ ಸಿಬ್ಬಂದಿಗಳು ಸಹಕರಿಸುತ್ತಿದ್ದರು. ಕದ್ದ ವಾಹನಗಳ ನೈಜ ಮಾಲೀಕರ ಸಹಿಯನ್ನು ಮಧ್ಯವರ್ತಿ ಮಾಡುತ್ತಿದ್ದು, ಇದಕ್ಕೆ ಆರ್‌ಟಿಒ ಕಚೇರಿಯ ಎಸ್ಡಿಎ ಜಗದೀಶ್ ಸಹಕರಿಸುತ್ತಿದ್ದರು. 

ಆರ್‌ಟಿಒ ಕಚೇರಿಯಲ್ಲಿ ದಾಖಲೆಗಳು ಬದಲಾವಣೆ ಆಗಿ. ಮೂಲ ಮಾಲೀಕನ ಬದಲಿಗೆ ಬೇರೊಬ್ಬನ ಹೆಸರಿಗೆ ದಾಖಲೆಗಳನ್ನು ಸೃಷ್ಟಿಮಾಡಲಾಗುತ್ತಿತ್ತ.  ವಾಹನಗಳ ಮಾಲೀಕರ ಸಹಿಯನ್ನು ಮಧ್ಯವರ್ತಿ ಮಹಮದ್ ರಸೂಲ್ ಮಾಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಪೋರ್ಜರಿ ಸಹಿ ಸಂಬಂಧ ಬಸವನಗರ ಠಾಣೆಯಲ್ಲಿ 10 ದೂರುಗಳು ದಾಖಲಾಗಿವೆ. 

ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ನಿಲುಗಡೆ ಮಾಡಿದ್ದ ಬೈಕುಗಳನ್ನು ನಕಲಿ ಕೀ ಬಳಸಿ ಕದಿಯುವ ಕೆಲಸವನ್ನು ಒಂದು ತಂಡ ಮಾಡುತಿತ್ತು. ಹೀಗೆ ಕದ್ದ ಬೈಕನ್ನು ಅದನ್ನು ಆಟೋ ಕನ್ಸಲ್ಟೆನ್ಸಿ ಮೂಲಕ ಮಾರಾಟ ಮಾಡಲಾಗುತಿತ್ತು. ಇದಕ್ಕೆ ನಕಲಿ ದಾಖಲೆಗಳನ್ನು ಆರ್ ಟಿಒ ಕಚೇರಿ ಸಿಬ್ಬಂದಿಗಳು ಮಾಡಿಕೊಡುತ್ತಿದ್ದರು. ಹೀಗೆ ಮೂರು ತಂಡಗಳಾಗಿ ಕೃತ್ಯ ಎಸಗುತ್ತಿದ್ದ ಎಲ್ಲೂರು ಇದೀಗ ಜೈಲು ಪಾಲಾಗಿದ್ದಾರೆ.

ಶೂನ್ಯ ಬಂಡವಾಳದಲ್ಲಿ ಕೈ ತುಂಬಾ ಹಣ

ಸಾಮಾನ್ಯವಾಗಿ ಎಲ್ಲರೂ ದುಡಿಮೆ ಮಾಡಬೇಕೆಂದರೆ, ಬ್ಯಾಂಕ್ ನಲ್ಲಿ ಸಾಲ ಮಾಡುತ್ತೇವೆ ಅಥವಾ ಕೈಗಡ ತೆಗೆದುಕೊಳ್ಳುತ್ತೇವೆ..ಆದರೆ ಶೂನ್ಯ ಬಂಡವಾಳದಲ್ಲಿ ಈ ತಣಡ ಕೈ ತುಂಬಾ ಹಣ ಮಾಡಿಕೊಳ್ಳುತ್ತಿತ್ತು. ಈ ಕಳ್ಳರ ಆಯ್ಕೆ ಕೇವಲ ಹೀರೋ ಹಾಗೂ ಹೋಂಡಾ  ಕಂಪನಿಯ ಫ್ಯಾಷನ್, ಸ್ಪೆಂಡರ್ ಬೈಕ್ ಗಳಾಗಿದ್ದು, ಹೊಸ ಬೈಕ್ ಗಳನ್ನು ಕದಿಯುವುದೇ ಇವರ ಅಜೆಂಡಾ...ಈ ಗ್ಯಾಂಗ್ ಬಳಿ ಮೊದಲೇ ನಕಲಿ ಕೀಗಳು ಇದ್ದು, ಅವುಗಳ ಮೂಲಕ ವಾಹನ ಕದೀಯುತ್ತಿದ್ದರು. ಇದಾದ ಬಳಿಕ ಮೊದಲು ಏಜೆಂಟ್ ಸಂಪರ್ಕ ಮಾಡುತ್ತಿದ್ದರು..ಆ ನಂತರ ಆರ್‌ಟಿಒ  ಅಧಿಕಾರಿಗಳನ್ನು ಸಂಪರ್ಕಿಸಿ ಅಲ್ಲಿನ ಸಿಬ್ಬಂದಿ ಬಳಿ ಗಾಡಿ ನಂಬರ್ ನಮೂದಿಸಿ ಓರಿಜಿನಲ್ ಸಹಿ ರೀತಿಯೇ 29-30 ನೇ ಫಾರಂಗೆ ಏಜೆಂಟ್ ಸೈನ್ ಮಾಡುತ್ತಿದ್ದ . ಇದನ್ನು ಎಸ್ಡಿಎ ಆರ್ ಟಿಒ ಶ್ರೀಧರ್ ಮಲ್ನಾಡ್ ಟೇಬಲ್‌ನಲ್ಲಿ ಇಡುತ್ತಿದ್ದ. ತನ್ನ ಕೆಳ ಸಿಬ್ಬಂದಿಗಳ ಮೇಲೆ ನಂಬಿಕೆ ಇದ್ದ ಕಾರಣ ಎಲ್ಲ ಫೈಲ್ ಗಳಿಗೆ ಆರ್‌ಟಿಒ ಅದನ್ನು ಗಮನಿಸದೇ ಸಹಿ ಹಾಕುತ್ತಿದ್ದರು..ನಂತರ ಸಾರಿಗೆ ಇಲಾಖೆಯಿಂದ ಓರಿಜಿನಲ್ ಕಾರ್ಡ್ ಎಸ್ಡಿಎಗೆ ಬರುತ್ತಿತ್ತು. ಇದಾದ ಬಳಿಕ ಆ ಕಾರ್ಡ್‌ನ್ನು ಏಜೆಂಟ್ ಪಡೆದುಕೊಂಡು ಐವತ್ತರಿಂದ ಆರವತ್ತು ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಇದು ಮೊದಲ ಹಂತದ ಉಪಾಯವಾದರೆ, ಇನ್ನೊಂದು ಹಂತದಲ್ಲಿ  ಇನ್ನು ಕದ್ದ ಬೈಕ್ ಮಾರಾಟ ಮಾಡಿ ಬಂದ ಹಣವನ್ನು ಎಲ್ಲರೂ ಸಮಾನವಾಗಿ ಪಾಲು ಮಾಡಿಕೊಳ್ಳುತ್ತಿದ್ದರು

ಕಳ್ಳತನ ಬಯಲಿಗೆ ಬಂದಿದ್ದು ಹೇಗೆ?

ಹೊನ್ನಾಳಿಯಲ್ಲಿ ಬೈಕ್‌ವೊಂದು ಕಳ್ಳತನವಾಗಿರುವ ಸಂಬಂಧ ಅಲ್ಲಿ ಪ್ರಕರಣ ದಾಖಲಾಗುತ್ತದೆ. ತನಿಖೆ ಚುರುಕುಗೊಳಿಸಿದಾಗ ಹೊನ್ನಾಳಿಯಲ್ಲಿ ಕಳ್ಳತನವಾಗಿರುವ ಬೈಕ್ ದಾವಣಗೆರೆಯಲ್ಲಿ ಪ್ರತಿನಿತ್ಯ ಓಡಾಡುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಇರುತ್ತದೆ. ಅಲ್ಲದೇ ದಾವಣಗೆರೆಯಲ್ಲಿ ಸೂಪರ್ ಕಾಪ್ ಎಂದೇ ಹೆಸರು ಮಾಡಿದ ಟ್ರಾಫಿಕ್ ವೃತ್ತ ನಿರೀಕ್ಷಕ ಅನಿಲ್ ಸಿಟಿಯಲ್ಲಿ ಗಾಡಿಗಳ ತಪಾಸಣೆ ನಡೆಸುವ ವೇಳೆ ಬೈಕ್ ಸವಾರನೊಬ್ಬ ತನ್ನ ಒರಿಜಿನಲ್ ಕಾರ್ಡ್ ನ್ನು ತೋರಿಸುತ್ತಾನೆ..ನಂತರ ಆ ಗಾಡಿ ನಂಬರ್ ನ್ನು ಯಂತ್ರಾಂಶದಲ್ಲಿ ನೋಡಿದಾಗ ಮಾರ್ಚ್ ತಿಂಗಳಿನಲ್ಲಿ ಕಳ್ಳತನವಾದ ಗಾಡಿಯಾಗಿರುತ್ತದೆ..ಅಲ್ಲದೇ ಆರ್ ಸಿ ಕಾರ್ಡ್ ನಲ್ಲಿ ಪಾರ್ಟಿ 2 ಅಂತ ನಮೂದಾಗಿರುತ್ತದೆ. ಇದಾದ ಬಳಿಕ ಆತನನ್ನು ಕರೆ ತಂದು ಈ ಹಿಂದೆ ಇರುವ ಜಾಲವನ್ನು ಬೇಧಿಸಲಾಗುತ್ತದೆ. 

ಏಕಾಂತದಲ್ಲಿದ್ದ ಹಳೇ ವಿಡಿಯೋ ವೈರಲ್‌; ವಿದ್ಯಾರ್ಥಿಗಳಿಬ್ಬರ ಆತ್ಮಹತ್ಯೆ!

ಪ್ರಕರಣದಲ್ಲಿ ಆರ್ ಟಿ ಓ ಅಧಿಕಾರಿಗಳು ಸೇರಿ ಐದು ಜನರ ಬಂಧನ 

ಈ ಪ್ರಕರಣ ಸಂಬಂಧ ಐದು ಜನರನ್ನು ಬಂಧಿಸಲಾಗಿದೆ. ಹೊನ್ನಾಳಿ ಪೊಲೀಸರು 26 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.ದಾವಣಗೆರೆ ನಗರದ ನಿಟುವಳ್ಳಿಯ ಆಟೋ ಚಾಲಕ ಸಿದ್ದೇಶ, ಕೂಲಿ ಕಾರ್ಮಿಕ ಮಂಜುನಾಥ, ಆರ್‌ಟಿಒ ಏಜೆಂಟ್ ಪ್ರಕಾಶ್ ಹಾಗೂ ಆಟೊ ಲಿಂಕ್ಸ್ ಕೆಲಸಗಾರರಾದ ಕಲೀಂ ಅಲಿಯಾಸ್ ಕಲಾಮುದ್ದೀನ್, ಮಹಮದ್ ಯಾಸೀರ್ ಅರಾತ್ ಮೊದಲು ಬಂಧಿಸಲಾಗಿದ್ದು, ನಂತರ ಐದು ಜನರನ್ನು ಬಂಧಿಸಲಾಗಿದ್ದು, ಒಟ್ಟು 10 ಜನ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಪೊಲೀಸ್ ಇನ್ಸೆಪೆಕ್ಟರ್  ಸಿದ್ದೇಗೌಡ, ಸಿಪಿಐ ಅನಿಲ್, ಪಿಎಸ್‌ಐ ಶಿವಕುಮಾರ್, ಎಎಸ್‌ಐ ಪರಶುರಾಂ, ತಿಪ್ಪೇಸ್ವಾಮಿ, ಪ್ರಕಾಶ್, ಸಿಬ್ಬಂದಿ ದೊಡ್ಡಬಸಪ್ಪ, ಮೌನೇಶಾಚಾರ್, ಚೇತನ್ ಕುಮಾರ್, ಜಗದೀಶ್, ಸುರೇಶ್ ನಾಯ್ಕ್, ಕೃಷ್ಣಪ್ಪ, ಹನುಮಂತಪ್ಪ, ಗುರುಸಿದ್ದನಗೌಡ, ಸೋಮಶೇರ್ಖ ಹಾಗೂ ಮಾರುತಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆ ಬೈಕ್ ಕಳ್ಳರ ಬೇದಿಸಿದ ಪೋಲಿಸರ ಕಾರ್ಯಕ್ಕೆ ಜನ ಶಹಬ್ಬಾಸ್ ಗಿರಿ ನೀಡಿದ್ದಾರೆ.

26 ಬೈಕ್‌ಗಳು ಪೊಲೀಸರ ವಶಕ್ಕೆ

ಹೊನ್ನಾಳಿಯ ಟಿಬಿ ಸರ್ಕಲ್‌ನಲ್ಲಿ ಬೈಕ್ ಪ್ರಕರಣವನ್ನು ಭೇದಿಸಲು ಮುಂದಾದಾಗ 26 ಬೈಕ್‌ಗಳು ಸಿಕ್ಕಿವೆ. ಆರೋಪಿಗಳಾದ ಸಿದ್ದೇಶ ಹಾಗೂ ಮಂಜುನಾಥ ಅವರನ್ನು ತನಿಖೆಗೊಳಪಡಿಸಿದಾಗ ಹೊನ್ನಾಳಿ, ದಾವಣಗೆರೆ, ಹರಪನಹಳ್ಳಿ, ಜಗಳೂರು, ಹಾವೇರಿ, ರಾಣೆಬೆನ್ನೂರು, ಶಿವಮೊಗ್ಗ, ಚನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ ಹಾಗೂ ವಿವಿಧ ಕಡೆಗಳಲ್ಲಿ ನಕಲಿ ಕೀ ಗಳನ್ನು ಬಳಸಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಿದ್ದೇಶ್, ಮಂಜುನಾಥ್ ಈ ಇಬ್ಬರು ಕಳ್ಳತನ ಮಾಡುತ್ತಿದ್ದ ಬೈಕ್‌ಗಳನ್ನು ಪ್ರಕಾಶ್, ಕಲಾಮುದ್ದೀನ್ ಹಾಗೂ ಮಹಮದ್ ಯಾಸೀನ್ ಅರಾತ್ ಅವರಿಗೆ ಮಾರಾಟ ಮಾಡುತ್ತಿದ್ದು, ಈ ಮೂವರು ನಕಲಿ ದಾಖಲೆ ಸೃಷ್ಟಿಸಿ ಆರ್‌ಟಿಒ ಏಜೆಂಟ್ ಗಳ ಸಹಾಯದಿಂದ ಕಳ್ಳತನ ಮಾಡಿದ ಬೈಕುಗಳ ಆರ್.ಸಿ.ಗಳನ್ನು ಬೇರೆಯವರಿಗೆ ಬದಲಾವಣೆ ಮಾಡಿ ಮಾರಾಟ ಮಾಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

click me!