ಬೆಂಗಳೂರಿನಲ್ಲಿ ಸಾರ್ವಜನಿಕರ ಎದುರೇ ರೌಡಿಶೀಟರ್ ಮೇಲೆ ಅಟ್ಯಾಕ್, ಸಿಸಿಟಿವಿಯಲ್ಲಿ ದೃಶ್ಯ ಸೆರೆ!

Published : Mar 28, 2023, 01:03 PM IST
ಬೆಂಗಳೂರಿನಲ್ಲಿ ಸಾರ್ವಜನಿಕರ ಎದುರೇ ರೌಡಿಶೀಟರ್ ಮೇಲೆ ಅಟ್ಯಾಕ್, ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಸಾರಾಂಶ

ಸಾರ್ವಜನಿಕರ ಎದುರಲ್ಲೆ  ಬೆಂಗಳೂರಿನಲ್ಲಿ ರೌಡಿಶೀಟರ್ ಮೇಲೆ ಅಟ್ಯಾಕ್ ನಡೆದಿದೆ. ಕೆಜಿ ನಗರ ಠಾಣೆ ರೌಡಿಶೀಟರ್ ಲೊಡ್ಡೆ ಪ್ರವೀಣನ ಮೇಲೆ ಮೂರು ಮಂದಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.

ಬೆಂಗಳೂರು (ಮಾ.28): ಸಾರ್ವಜನಿಕರ ಎದುರಲ್ಲೆ  ಬೆಂಗಳೂರಿನಲ್ಲಿ ರೌಡಿಶೀಟರ್ ಮೇಲೆ ಅಟ್ಯಾಕ್ ನಡೆದಿದೆ. ಎರಡು ದಿನದ ಹಿಂದೆ ಚಾಮರಾಜಪೇಟೆಯ ಧೋಬಿ ಘಾಟ್ ಬಳಿ ಈ  ಘಟನೆ ನಡೆದಿದ್ದು, ಕೆಜಿ ನಗರ ಠಾಣೆ ರೌಡಿಶೀಟರ್ ಲೊಡ್ಡೆ ಪ್ರವೀಣನ ಮೇಲೆ ಮೂರು ಮಂದಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಹಣಕಾಸು ವಿಚಾರಕ್ಕೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಮೂರು ಮಂದಿ ಆರೋಪಿಗಳು ಅಟ್ಯಾಕ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೌಡಿಶೀಟರ್ ಪ್ರವೀಣ್ ಹಾಗೂ ಸ್ವಾಮಿ ಮೇಲೆ ಹಲ್ಲೆ ನಡೆದಿದ್ದು, ಗಾಯಗೊಂಡಿರುವ ಪ್ರವೀಣನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಈ ಬಗ್ಗೆ ಮಾತನಾಡಿರುವ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು , ರೌಡಿಶೀಟರ್ ಪ್ರವೀಣ್ ಹಾಗೂ ಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಮಾರಕಾಸ್ತ್ರ ಮೂಲಕ ಹಲ್ಲೆ ಮಾಡಿದ್ದಾರೆ. 307 ಸೇರಿ ಹಲವು ಕೇಸ್ ಪ್ರವೀಣ್ ಮೇಲಿದೆ. ಸದ್ಯ ಆರೋಪಿಗಳನ್ನ ಪತ್ತೆ ಹಚ್ಚುವ ಕಾರ್ಯದಲ್ಲಿದ್ದೇವೆ. ಒಟ್ಟು 9 ಜನ ಬೈಕ್ ನಲ್ಲಿ ಬಂದು ಹಲ್ಲೆ ಮಾಡಿರೋದು ತಿಳಿದುಬಂದಿದೆ. ಸಿಸಿಟಿವಿ ಆಧರಿಸಿ ಆರೋಪಿಗಳ ಹುಡುಕಾಟ ಮುಂದುವರೆಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

82 ವರ್ಷದ ತಂದೆ​ಯನ್ನೇ ಮನೆ​ಯಿಂದ ಹೊರ ಹಾಕಿದ ಮಗ - ಸೊಸೆ! 

ಇಬ್ಬರು ರೌಡಿಶೀಟರ್‌ಗಳು ಗಡಿಪಾರು
ಶಿವಮೊಗ್ಗ: ಜಿಲ್ಲೆಯಲ್ಲಿ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಸಾರ್ವಜನಿಕರ ಆಸ್ತಿ ಮತ್ತು ಜೀವ ಹಾನಿಪಡಿಸುವ ಆತಂಕದಿಂದ ಇಬ್ಬರು ರೌಡಿ ಶೀಟರ್‌ಗಳನ್ನು ಶಿವಮೊಗ್ಗ ಜಿಲ್ಲೆಯಿಂದ ಆರು ತಿಂಗಳು ಗಡಿಪಾರು ಮಾಡಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಆದೇಶ ಹೊರಡಿಸಿದ್ದಾರೆ.

ಶಿರಾಳಕೊಪ್ಪದ ಸುನೀಲ್‌ ಕುಮಾರ್‌ (54) ಮತ್ತು ಶಿಕಾರಿಪುರದ ಅಬ್ದುಲ್‌ ಮುನಾಫ್‌ ಅಲಿಯಾಸ್‌ ಸ್ಟಾರ್‌ ಮುನ್ನಾ (48) ಗಡಿಪಾರು ಶಿಕ್ಷೆಗೊಳಗಾದವರು. ಸುನಿಲ್‌ ಕುಮಾರ್‌ಗೆ ಗದಗ ಮತ್ತು ಮುನಾಫ್‌ಗೆ ವಿಜಯಪುರ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ನೀಡಿದ್ದಾರೆ.

PSI SCAM: ಹೆಂಡತಿನ ತವರಿಗೆ ಕಳುಹಿಸಿ ತಲೆಮರೆಸಿಕೊಂಡು ಗರ್ಲ್ ಫ್ರೆಂಡ್‌ ಜತೆ ಸುತ್ತುತ್ತಿದ್ದ ಪಿಎಸ್‌ಐ ನವೀನ್ ಬಂಧನ!

ಹಲ್ಲೆ ಪ್ರಕರಣ, ರೌಡಿ ಶೀಟರ್‌ ಪತ್ತೆಗೆ ಪೊಲೀಸರ ಶೋಧ
ಗಂಗಾವತಿ: ನಗರದಲ್ಲಿ ಕಳೆದ ವಾರ ನಡೆದ ಹಲ್ಲೆ ಪ್ರಕರಣ ಸೇರಿದಂತೆ ರೌಡಿ ಶೀಟರ್‌ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದರು.

ಡಿಸಿ ಮತ್ತು ಎಸ್ಪಿ ಸೂಚನೆ ಮೇರೆಗೆ ಡಿವೈಎಸ್ಪಿ ಚಂದ್ರಶೇಖರ ಮತ್ತು ಪಿಐ ಅಡಿವೆಪ್ಪ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಆರೋಪಿಗಳ ಮನೆಗೆ ದೌಡಾಯಿಸಿದ ಪೊಲೀಸರು ಅರೋಪಿಗಳನ್ನು ತಮಗೆ ಒಪ್ಪಿಸುವಂತೆ ಕುಟುಂಬದವರಿಗೆ ತಾಕೀತು ಮಾಡಿದ್ದಾರೆ.

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಮುಖಂಡರ ಮನೆ ಮೇಲೆ ದಾಳಿ ನಡೆಸಿ, ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಕೆಆರ್‌ಪಿಪಿ ಮುಖಂಡರು ಸೇರಿದಂತೆ ಬಿಜೆಪಿ, ಕಾಂಗ್ರೆಸ್‌ ಮುಖಂಡರ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ.

ಸಚ್‌ರ್‍ ವಾರೆಂಟ್‌ದೊಂದಿಗೆ ದಾಳಿ ನಡೆಸಿದ ಪೊಲೀಸರು ರೌಡಿ ಶೀಟರ್‌ ಪತ್ತೆ ಕಾರ್ಯ ನಡೆಸಿದ್ದಾರೆ.ಅಲ್ಲದೆ ಚುನಾವಣೆಯಲ್ಲಿ ಹಣ, ವಸ್ತುಗಳ ಸಂಗ್ರಹ ಮಾಡಿದ್ದಾರೆ ಎಂಬ ವದಂತಿ ಇದ್ದಿದ್ದರಿಂದ ಶೋಧ ನಡೆಸಿದ್ದಾರೆ. ಗಂಗಾವತಿ ನಗರದಲ್ಲಿ ಏಕಕಾಲಕ್ಕೆ ಆರಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ಇದರಿಂದ ಕೆಲವರು ನಗರದಿಂದ ಕಾಲ್ಕಿತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ