
ಬೆಂಗಳೂರು (ಮಾ.28): ಪಿಎಸ್ ಐ ಅಕ್ರಮ ನೇಮಕಾತಿ ಹಗರಣ ಸಂಬಂಧ ಆರೋಪಿ ಪಿಎಸ್ ಐ ನವೀನ್ ಪ್ರಸಾದ್ ಎಂಬಾತನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಈತ ಕಳೆದ ಏಳೆಂಟು ತಿಂಗಳಿನಿಂದ ಪರಾರಿಯಾಗಿದ್ದ. ಪಿಎಸೈ ಅಕ್ರಮ ನೇಮಕಾತಿ ಪ್ರಕರದಲ್ಲಿ ಮತ್ತೊಬ್ಬ ಪಿಎಸೈ ಹರೀಶ್ ಜೊತೆ ಸಂಪರ್ಕ ಹೊಂದಿದ್ದ ಆರೋಪ ಇವನ ಮೇಲಿತ್ತು. ಈ ಹಿನ್ನೆಲೆಯಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ ನವೀನ್ ಪ್ರಸಾದ್ ಪರಾರಿಯಾಗಿದ್ದ. ಆದರೆ ಕಳೆದ ರಾತ್ರಿ ನಂದಿನಿ ಲೇಔಟ್ ರಿಂಗ್ ರೋಡ್ ನಲ್ಲಿ ಕಾರ್ ನಲ್ಲಿ ಸುತ್ತಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಶೇಖರ್ ನೇತೃತ್ವದಲ್ಲಿ ಪಿಎಸ್ ಐ ನವೀನ್ ನನ್ನು ಬಂಧಿಸಲಾಗಿದೆ. ಸದ್ಯ ಬಂಧನದಲ್ಲಿರುವ ಪಿಎಸ್ ಐ ನವೀನ್ ನನ್ನು ಸಿಐಡಿ ಕಚೇರಿಯಲ್ಲಿ ತನಿಖಾಧಿಕಾರಿಗಳು ಇರಿಸಿದ್ದಾರೆ. ಮಧ್ಯಾಹ್ನ ಕೋರ್ಟ್ ಗೆ ಹಾಜರು ಪಡಿಸಲಿರುವ ಸಿಐಡಿ ಕಸ್ಟಡಿ ಪಡೆಯಲಿದೆ.
ಪಿಎಸ್ಐ ಕೇಸ್ ನಲ್ಲಿ ನವೀನ್ ಪ್ರಸಾದ್ ಬಂಧನ ಬಳಿಕ ರೋಚಕವಾಗಿರುವ ಮಾಹಿತಿ ಲಭ್ಯವಾಗಿದೆ. ಈತ ಮದುವೆಯಾಗಿದ್ದರೂ ಕೂಡ ಗರ್ಲ್ ಫ್ರೆಂಡ್ ಜೊತೆ ಇದ್ದ ಎಂದು ತಿಳಿದುಬಂದಿದೆ. ಮೂಲತಃ ಮಾಗಡಿ ಮೂಲದ ನವೀನ್ ಗದಗ ಮೂಲದ ಎಸ್ಐ ಷರೀಫ್ ಕಲ್ಲಿಮನಿಯ ಆಪ್ತನಾಗಿದ್ದಾನೆ, ಇವರು ಎಸ್‌ಐ ಕ್ಯಾಂಡಿಡೇಟ್ ಗಳನ್ನು ಕರೆತಂದು ಡೀಲ್ ಮಾಡ್ತಾಯಿದ್ದರು. ಮಾತ್ರವಲ್ಲ ನೇಮಕಾತಿ ವಿಭಾಗದಲ್ಲಿನ ಎಫ್ ಡಿಎ ಹರ್ಷ ನ ಜೊತೆಗೆ ಕೂಡ ಸಂಪರ್ಕ ಹೊಂದಿದ್ದರು.
ಬಿಎಸ್‌ವೈ ಮನೆಯಲ್ಲೇ ನಡೆದಿದೆ ಪಿಎಸ್‌ಐ ನೇಮಕಾತಿ ಹಗರಣ: ಸಿದ್ದರಾಮಯ್ಯ ಗಂಭೀರ ಆರೋಪ
ನವೆಂಬರ್ ವೇಳೆಗೆ ಮಾಗಡಿಯಲ್ಲಿದ್ದ ಹೆಂಡತಿ ಮಕ್ಕಳನ್ನು ನವೀನ್ ತವರಿಗೆ ಕಳಿಸಿದ್ದ, ಬಳಿಕ ಹಾಸನ ಯುವತಿಯ ಜೊತೆ ಸುತ್ತಾಟ ನಡೆಸುತ್ತಿದ್ದನು. ಇವರಿಬ್ಬರೂ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿದ್ದರು. ಯಾರಿಗೂ ತಿಳಿಯದಂತೆ ತೆಲಂಗಾಣ ರಿಜಿಸ್ಟ್ರೇಷನ್ ಕಾರಿನಲ್ಲಿ ಓಡಾಡುತ್ತಿದ್ದರು. ಆ ಯುವತಿಯೇ ಈತನಿಗೆ ಶ್ರೀ ರಕ್ಷೆಯಾಗಿದ್ದಳು. ಅಪಾರ್ಟ್ಮೆಂಟ್ ನಲ್ಲಿ ಪ್ರತಿಯೊಂದು ಚಲನ ವಲನಗಳನ್ನು ಗಮನಿಸುತ್ತಿದ್ದಳು. ಈತ ಸಿಸಿಕ್ಯಾಮಾರಗಳನ್ನು ಗಮನಿಸಿಕೊಂಡು ಓಡಾಡುತ್ತಿದ್ದ. ಯಾರು ಒಳ ಬರ್ತಾರೆ ಯಾರು ಹೊರ ಹೋಗುತ್ತಾರೆ ಎನ್ನುವ ಎಲ್ಲಾ ಮಾಹಿತಿ ಪಡೆಯುತ್ತಿದ್ದ. ಸಿಸಿಟಿವಿಗಳನ್ನು ಸಹ ಮಾನಿಟರ್ ಮಾಡುತ್ತಿದ್ದ. ಯಾರಿಗೂ ಗುರುತು ಸಿಗಬಾರದೆಂದು ಈ ಆಸಾಮಿ ಪ್ರತಿದಿನ ತಲೆಗೆ ಕ್ಯಾಪ್ ಧರಿಸಿಕೊಂಡು ಓಡಾಡುತ್ತಿದ್ದ.
ಲೋಕಾಯುಕ್ತ ದಾಳಿ: 40 ಸಾವಿರ ಲಂಚ ಪಡೆವಾಗ ಸಿಕ್ಕಿಬಿದ್ದ ರಾಣೆಬೆನ್ನೂರು ಪಿಎಸ್‌ಐ
ಈತ ಇದ್ದಂತಹ ಜಾಗದ ಬಗ್ಗೆ ಅರಿತಿದ್ರಾ ಬ್ಯಾಡರಹಳ್ಳಿ ಪೊಲೀಸರು ?
ಬೇರೆ ಕಡೆಗೆ ಹೋದರೆ ಹುಡುಕಾಟ ಮಾಡ್ತಾರೆ ಅಂತ ತಾನು ವಾಸವಿದ್ದ ಅಪಾರ್ಟ್‌ಮೆಂಟ್ ನಲ್ಲಿಯೇ ನವೀನ್ ಬೀಡುಬಿಟ್ಟಿದ್ದ ಎನ್ನಲಾಗಿದೆ. ಇದೀಗ ಈತನಿಗೆ ಸಹಾಯ ಮಾಡಿದ್ದ ಯುವತಿಯನ್ನು ಕೂಡ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ