ರೈತರಿಗೆ ಕೋಟ್ಯಂತ ರು. ಬಾಕಿ ಕೊಡ್ಬೇಕಿದ್ದ ಗಿರಣಿ ಮಾಲಿಕ ಆತ್ಮಹತ್ಯೆ| ಹರಿಹರದ ಎಂ.ಬಿ.ರೈಸ್ ಮಿಲ್ ಮಾಲಿಕ ಆತ್ಮಹತ್ಯೆ| ಸುದ್ದಿ ತಿಳಿಯುತ್ತಿದ್ದಂತೆ ಕಂಗಾಲಾದ ರೈತರು
ದಾವಣಗೆರೆ(ಜು.22): ರೈತರಿಗೆ ಕೋಟ್ಯಂತರ ರುಪಾಯಿ ಬಾಕಿ ನೀಡಬೇಕಿದ್ದ ಹರಿಹರದ ರೈಸ್ ಮಿಲ್ ಮಾಲೀಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಮಂಗಳವಾರ ವರದಿಯಾಗಿದೆ.
ಹರಿಹರದ ಎಂ.ಬಿ. ರೈಸ್ ಮಿಲ್ ಮಾಲೀಕ ಹನುಮೇಶ ಗೌಡ (56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 3 ದಿನಗಳ ಹಿಂದೆ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಹನುಮೇಶಗೌಡ ಇಲ್ಲಿನ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಆತ್ಮಹತ್ಯೆ ಮಾಡುವ ಹಂತಕ್ಕೆ ತಲುಪಿದ್ದೆ: ಚೇತನ್ ಭಗತ್
ಹನುಮೇಶ ಗೌಡ ರೈತರಿಂದ ಸಾಕಷ್ಟು ಭತ್ತ ಖರೀದಿ ಮಾಡಿದ್ದರು. ಕಳೆದೊಂದು ವರ್ಷದಿಂದಲೂ ರೈತರು ಹಣ ನೀಡುವಂತೆ ಗಿರಣಿ ಮಾಲೀಕನಿಗೆ ಒತ್ತಾಯಿಸುತ್ತಿದ್ದರು. ಪ್ರತಿಭಟನೆಗಳನ್ನೂ ನಡೆಸುತ್ತಿದ್ದರು. ಆದಷ್ಟು ಶೀಘ್ರ ಹಣ ನೀಡುವುದಾಗಿ ಹನುಮೇಶಗೌಡ ಸಹ ರೈತರಿಗೆ ಭರವಸೆ ನೀಡಿದ್ದರು.
ಹನುಮೇಶಗೌಡ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಮಿಲ್‌ಗೆ ಭತ್ತ ಕೊಟ್ಟಿದ್ದ ರೈತರು ಸಾಕಷ್ಟುಸಂಖ್ಯೆಯಲ್ಲಿ ಆಸ್ಪತ್ರೆ ಶವಾಗಾರದ ಬಳಿ ಧಾವಿಸಿದರು. ಆದರೆ, ಮೃತನ ಕುಟುಂಬ ಸದಸ್ಯರು ಶವಾಗಾರದ ಬಳಿ ಸಂಜೆ ಹೊತ್ತಿನವರೆಗೂ ಬಂದಿರಲಿಲ್ಲ. ಮತ್ತೊಂದು ಕಡೆ ಭತ್ತ ಕೊಟ್ಟರೈತರು ತಮ್ಮ ಹಣ ಯಾರಿಂದ ವಸೂಲಿ ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.