ಹೂವಿನಹಡಗಲಿ: ಪತ್ನಿಯ ಶೀಲ ಶಂಕಿಸಿ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಪತಿ

By Kannadaprabha News  |  First Published Jul 22, 2020, 9:52 AM IST

ಪತ್ನಿಯ ಶೀಲ ಶಂಕಿಸಿ ಕೊಲೆ| ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನವಲಿ ಗ್ರಾಮದಲ್ಲಿ ನಡೆದ ಘಟನೆ|
ಆರೋಪಿಯನ್ನು ಬಂಧಿಸಿದ ಪೊಲೀಸರು| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿವೈಎಸ್ಪಿ ಮಲ್ಲೇಶ ನಾಯ್ಕ ದೊಡ್ಡಮನಿ, ಸಿಪಿಐ ಕೆ. ರಾಮರೆಡ್ಡಿ|


ಹೂವಿನಹಡಗಲಿ(ಜು.22):  ತಾಲೂಕಿನ ನವಲಿ ಗ್ರಾಮದಲ್ಲಿ ಪತ್ನಿಯ ಶೀಲ ಶಂಕಿಸಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳವಾರ ಜರುಗಿದೆ.

ಹನುಮವ್ವ(35) ಕೊಲೆಯಾಗಿರುವ ಮಹಿಳೆಯಾಗಿದ್ದು, ಈಕೆಯ ಗಂಡ ಮರಿಯಪ್ಪ ತನ್ನ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದಾನೆಂದು ತಿಳಿದು ಬಂದಿದೆ. ಆರೋಪಿ ಮರಿಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. 

Tap to resize

Latest Videos

ಗಂಡನನ್ನು ಕೊಂದು ದೂರು ಕೊಟ್ಟ ಪತ್ನಿ ಸೇರಿ ನಾಲ್ವರು ಆರೆಸ್ಟ್..!

ಸ್ಥಳಕ್ಕೆ ಡಿವೈಎಸ್ಪಿ ಮಲ್ಲೇಶ ನಾಯ್ಕ ದೊಡ್ಡಮನಿ, ಸಿಪಿಐ ಕೆ. ರಾಮರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೂವಿನಹಡಗಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!