Cybercrime : ನಿವೃತ್ತ ಮಹಿಳಾ ಬ್ಯಾಂಕ್ ಅಧಿಕಾರಿಗೆ ಲಾಟರಿ ಆಸೆ.. ಒಕೆ ಅಂದಿದ್ದಕ್ಕೆ!

By Suvarna NewsFirst Published Dec 27, 2021, 9:02 PM IST
Highlights

* ನಿವೃತ್ತ ಬ್ಯಾಂಕ್ ಅಧಿಕಾರಿಗೆ 12.5 ಲಕ್ಷ ರೂಪಾಯಿ 
*  ಲಾಟರಿಯಲ್ಲಿ ಹಣ ಗೆದ್ದೀದ್ದೀರಿ ಎಂದು ನಂಬಿಸಿದರು
*  ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಪಡೆದುಕೊಂಡರು
* ಸೇವಾ ಶುಲ್ಕ ನೀಡಬೇಕು ಎಂದು ವಂಚನೆ

ಮುಂಬೈ(ಡಿ. 27)  ಸೈಬರ್ ಅಪರಾಧ (Cybercrime) aಆನ್ ಲೈನ್  ವಂಚನೆ ಪ್ರಕರಣ ಬಗ್ಗೆ ಪ್ರತಿ ದಿನ ವರದಿಯಾಗುತ್ತಲೇ ಇರುತ್ತವೆ. ಈ ಪ್ರಕರಣ ಅದರ ಸಾಲಿಗೆ ಮತ್ತೊಂದು ಸೇರ್ಪಡೆ.  ನಿವೃತ್ತ ಬ್ಯಾಂಕ್ (Retired Bank Mnager) ಅಧಿಕಾರಿಯೇ ದೊಡ್ಡ ಮೊತ್ತದ ವಂಚನೆಗೆ ಒಳಗಾಗಿದ್ದಾರೆ. ನಿವೃತ್ತ  ಮಹಿಳಾ ಅಧಿಕಾರಿಗೆ ನೀವು 7.5 ಲಕ್ಷ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದೀರಿ ಎಂದು ನಂಬಿಸಿ 12.5 ಲಕ್ಷ ರೂಪಾಯಿ (Fraud) ವಂಚಿಸಿದ್ದಾರೆ.

ನೀವು  ನಾಪ್ಟೋಲ್ ಕಂಪನಿಯಿಂದ ಲಾಟರಿ ಗೆದ್ದಿದ್ದೀರಿ ಎಂದು ಹೇಳಿದ್ದು ಮಹಿಳೆ ನಿವಾಸದ ವಿಳಾಸಕ್ಕೆ ಸ್ಕ್ರಾಚ್ ಕಾರ್ಡ್ ಕಳಿಸಿದ್ದಾರೆ.  ಹಣ ಪಡೆದುಕೊಳ್ಳಲು ಮೊಬೈಲ್ ನಂಬರ್ ಗೆ ಕರೆ ಮಾಡಿ ಎಂದು  ನಂಬರ್ ನೀಡಿದ್ದಾರೆ. ನಂಬಿ ಕರೆ ಮಾಡಿದ ಮಹಿಳೆ ಹಣ ಕಳೆದುಕೊಂಡಿದ್ದಾರೆ.

Latest Videos

ಮಲಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಉಳಿದವರಿಗೂ ಸೈಬರ್ ವಂಚನೆಯ ಎಚ್ಚರಿಕೆ ನೀಡಿದ್ದಾರೆ.
ವಂಚನೆಗೆ ಒಳಗಾದ ಮಹಿಳೆ ಹೇಳುವಂತೆ, ಜೂನ್ 30 ರಂದು ಮಹಿಳೆಯ ಕಚೇರಿಯ ಅಡ್ರೆಸ್ ಗೆ ಪತ್ರವೊಂದು ಬಂದಿದೆ,. ಮಹಿಳೆ ನಿವೃತ್ತಿ ಆಗಿರುವ ಕಾರಣ ಅದನ್ನು ಆಕೆಯ ನಿವಾಸಕ್ಕೆ ಕಳುಹಿಸಿಕೊಡಲಾಗಿದೆ. ನಿಮ್ಮ ಮದುವೆಯ  12 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 7.5 ಲಕ್ಷ ರೂಪಾಯಿಗಳ ಲಾಟರಿ ಗೆದ್ದಿದ್ದೀರಿ ಎಂದು ಬರೆದಿದ್ದನ್ನು ನೋಡಿ ಮಹಿಳೆ ಸಂತಸಗೊಂಡಿದ್ದಾರೆ.

ಜುಲೈ 2 ರಂದು, ನಿತಿನ್ ಕುಮಾರ್ ಸಿಂಗ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ.  ನಾನು ನಾಪ್ಟೋಲ್ ಕಂಪನಿಯ ಪರವಾಗಿ ಕರೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. 

Bank Fraud: ಯುನಿಯನ್ ಬ್ಯಾಂಕ್‌ಗೆ 53 ಕೋಟಿ ವಂಚಿಸಿದ್ದ 'ಮರಿಮಲ್ಯ' ಸೆರೆ!

ನೀವು ಹಣ ಪಡೆದುಕೊಳ್ಳಲು ಸೇವಾ ತೆರಿಗೆಯಾಗಿ 8,250 ರೂ.ಗೆ ಹಣ ನೀಡಬೇಕು ಎಂದಿದ್ದಾರೆ. ಆಗ ಮಹಿಳೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಇದಾದ ನಂತರ ಹಣದ ಆಸೆಗೆ ಬಿದ್ದು ಆಧಾರ್ ಮತ್ತು ಪಾನ್ ಕಾರ್ಡ್ ಕಾಪಿ ಕಳುಹಿಸಿಕೊಟ್ಟಿದ್ದಾರೆ.  ಆಕೆಯ ಮನವೊಲಿಸಿ ಸಲ್ಲದ ಕಾರಣ  ಹೇಳಿಕೊಂಡು ನಂತರ ವಂಚನೆ ಮಾಡಿದ್ದಾರೆ.  

ಗುಡ್ ಮಾರ್ನಿಂಗ್ ಪ್ರಾಡ್:   ಗೊತ್ತಿಲ್ಲದ ನಂಬರ್ ನಿಂದ ಗುಡ್ ಮಾರ್ನಿಂಗ್ (Cybercrime) ಮೆಸೇಜ್ ಬಂದರೆ ಯಾವ ಕಾರಣಕ್ಕೂ ಸ್ವೀಕರಿಸಲು ಹೋಗಬೇಡಿ. ಗುಡ್ ಮಾರ್ನಿಂಗ್ ಮೆಸೇಜ್ ಸ್ವೀಕರಿಸಿದ್ದಕ್ಕೆ ಇಲ್ಲೊಬ್ಬರು 5.91 ಲಕ್ಷ ರೂ. (Fraud) ಕಳೆದುಕೊಂಡಿದ್ದ ಪ್ರಕರಣ ವರದಿಯಾಗಿತ್ತು.

 50  ವರ್ಷದ ವ್ಯಕ್ತಿ ಗೋವಿಂದಪುರ ಪೊಲೀಸರಿಗೆ (Bengaluru Police) ದೂರು ನೀಡಿದ್ದಾರೆ.  ಕಳೆದ ಎರಡು ವರ್ಷಗಳಿಂದ ಗೊತ್ತಿಲ್ಲದ ಸಂಖ್ಯೆಯಿಂದ ನಿರಂತರವಾಗಿ ಮೆಸೇಜ್ ಬರುತ್ತಲೇ ಇತ್ತು.  ಗುಡ್ ಮಾರ್ನಿಂಗ್ ಮತ್ತು ಗುಡ್ ನೈಟ್ ಮೆಸೇಜ್ ಗಳ ಸ್ವೀಕಾರ ಆಗುತ್ತಲೇ ಇತ್ತು.  ಎರಡು ವರ್ಷದಲ್ಲಿ ಈ ಬೆಗೆ ಇಪ್ಪತ್ತು ಮೆಸೇಜ್ ಬಂದಿರಬಹುದು ಎಂದು ದೂರುದಾರರು ಹೇಳಿದ್ದರು.

ಆದರೆ ಅಕ್ಟೋಬರ್  8  ರಂದು ಮುಂಜಾನೆ  6.30ಕ್ಕೆ ಮೆಸೇಜ್ ಮಾಡುತ್ತಿದ್ದ ಮಾಯಾಂಗನೆ ಬೆಂಗಳೂರಿಗೆ ಬರುತ್ತಿರುವುದಾಗಿ  ಮತ್ತು ಹೋಟೆಲ್ ನಲ್ಲಿ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾಳೆ.  ಸುಮಾರು ಸಮಯದ ನಂತರ ವಾಟ್ಸ ಅಪ್ ನಲ್ಲಿ ಲೋಕೇಶನ್ ಸಹ ಶೇರ್ ಮಾಡಿದ್ದಾಳೆ.  ದೂರು ದಾರ ವ್ಯಕ್ತಿ ವೀರಣ್ಣ ಪಾಳ್ಯದ ಹೋಟೆಲ್ ಗೆ ಧಾವಿಸಿದ್ದು  ಬೆಳದಿಂಗಳ ಬಾಲೆ 10.30ಕ್ಕೆ ಭೇಟಿ ಮಾಡುತ್ತೇನೆ ಎಂದಿದ್ದಳು. 

ಕೊಟ್ಟ ಸಂದೇಶದ ಆಧಾರದಲ್ಲಿ ಹಣ ಕಳೆದುಕೊಂಡಾತ ರೂಂ ನಂಬರ್  212 ಕ್ಕೆ ಹೋಗಿದ್ದಾರೆ. ಆದರೆ ಅಲ್ಲಿ ಆಕೆಯ ಬದಲು ಮೂರು ಜನರನ್ನು ಕಂಡು ದಂಗಾಗಿದ್ದಾನೆ.  ಯುವತಿ ಜತೆ ಇಬ್ಬರು ಪುರುಷರು ಇದ್ದು ನಾವು ಪೊಲೀಸರು ಈಕೆ ಡ್ರಗ್ ಪೆಡ್ಲರ್ ಆಗಿದ್ದು ನಿಮ್ಮನ್ನು ಕರೆಸಿಕೊಂಡಿದ್ದಾಳೆ ಎಂದು ಬ್ಲಾಕ್ ಮೇಲ್ ಶುರುಹಚ್ಚಿಕೊಂಡಿದ್ದರು.

click me!