
ಬೆಂಗಳೂರು (ಜೂ.18): ರಾಷ್ಟ್ರ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸಲು ಷಡ್ಯಂತ್ರ ನಡೆದಿದ್ಯಾ ಎಂಬ ಸಂಶಯ ಬಲವಾಗಿದೆ. ವಿಶೇಷ ಅಭಿಯೋಜಕರನ್ನಾಗಿ ಭಯೋತ್ಪಾದಕ ಕೃತ್ಯಗಳ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಎಐ) ಪ್ರತಿನಿಧಿಸುವ ಹಿರಿಯ ವಕೀಲ ಪಿ.ಪ್ರಸನ್ನಕುಮಾರ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಜೂನ್ 15ಕ್ಕೆ ಆದೇಶಿಸಿತ್ತು. ಹಾಗೇ ಎಸ್‌ಪಿಪಿ ಸಹಾಯಕರಾಗಿ ವಕೀಲ ಸಿ.ಸಚಿನ್ ಅವರನ್ನು ಸರ್ಕಾರ ನಿಯೋಜಿಸಿತ್ತು.
ಬೆಂಗಳೂರು: ಸಿನಿಮಾ ಸ್ಟೈಲ್ ನಲ್ಲಿ ಬಾಲಕ ಕಿಡ್ನಾಪ್, ರಾತ್ರಿ 1 ನಿಮಿಷವೂ ನಿದ್ದೆ ಮಾಡದೆ ಪತ್ತೆ ಹಚ್ಚಿದ ಖಾಕಿ
ಆದರೆ ಇದೀಗ ಮೂರೇ ದಿನಕ್ಕೆ ಎಸ್‌ಪಿಪಿ ಬದಲಾವಣೆಗೆ ಸರ್ಕಾರದ ಚಿಂತನೆ ನಡೆಸಿದೆ ಎನ್ನಲಾಗಿದೆ. ಪ್ರಸನ್ನ ಕುಮಾರ್ ನೇಮಕಕ್ಕೆ ಸರ್ಕಾರದ ಸಚಿವರೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ಬದಲಾಯಿಸುವಂತೆ ಒತ್ತಡ ತಂದಿದ್ದಾರೆ ಎನ್ನಲಾಗುತ್ತಿದೆ. ಪ್ರಭಾವಿ ಸಚಿವರು ಸೇರಿ ಹಲವರು ಎಸ್‌ಪಿಪಿ ಬದಲಾವಣೆ ಮಾಡುವಂತೆ ಸಲಹೆ ನೀಡಿದ್ದು, ಹೊಸದಾಗಿ ಯಾರನ್ನ ನೇಮಿಸಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಮಾತ್ರವೇ ಬಾಕಿ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಎಸ್‌ಪಿಪಿ ಬದಲಾಯಿಸಿದರೆ ಸರ್ಕಾರದ ಮೇಲೆ ಮತ್ತಷ್ಟು ಅನುಮಾನ ಮೂಡಬಹುದು ಎಂಬ ಆತಂಕ ಕೂಡ ಒಂದು ಕಡೆ ಇದೆ. ಈ ಆತಂಕದ ಹಿನ್ನೆಲೆಯಲ್ಲಿ ಇನ್ನೂ ಅಂತಿಮ ತೀರ್ಮಾನ ಸರ್ಕಾರ ಇನ್ನೂ ಕೂಡ ಕೈಗೊಂಡಿಲ್ಲ.
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು ಪೊಲೀಸ್ ಕಸ್ಟಡಿಯಿಂದ ಆಸ್ಪತ್ರೆಗೆ ಶಿಫ್ಟ್!
ಇನ್ನು ಸಿಎಂ ಸಿದ್ದರಾಮಯ್ಯ ಈ ಹಿಂದೆಯೇ ದರ್ಶನ್ ವಿಚಾರವನ್ನು ಎತ್ತಿಕೊಂಡು ಯಾರು ಕೂಡ ನನ್ನ ಬಳಿಗೆ ಬರಬೇಡಿ ಎಂಬ ಮಾತನ್ನು ಹೇಳಿದ್ದಾರೆ. ಈ ಮೂಲಕ ಎಲ್ಲರಿಗೂ ಖಡಕ್ ಆಗಿ ಸೂಚನೆ ನೀಡಿದ್ದಾರೆ. ಹೀಗಾಗಿ ತನಿಖೆ ಪಾರದರ್ಶಕವಾಗಿ ನಡೆಯಲಿದೆ ಎಂಬುದನ್ನು ರಾಜ್ಯದ ಜನತೆ ಬಲವಾಗಿ ನಂಬಿದ್ದಾರೆ. ಆದರೆ ಇದೀಗ ಅಂದು ಸಿಎಂ ಬಳಿಗೆ ಬಂದಿದ್ದ ಗ್ಯಾಂಗ್ ಖಡಕ್ ವಕೀಲರ ಬದಲಾವಣೆಗೆ ಪಟ್ಟು ಹಿಡಿದಿದೆ ಎನ್ನಲಾಗಿದೆ.
ಸದ್ಯ ಸಿಎಂ ಗೆ ಒತ್ತಡ ಹೆಚ್ಚಿರೋ ಹಿನ್ನೆಲೆಯಲ್ಲಿ ಸರ್ಕಾರಿ ಪಿಪಿ ಪ್ರಸನ್ನ ಕುಮಾರ್ ಬದಲಾಯಿಸಲು ಪ್ರಯತ್ನ ನಡೆದಿದ್ದು, ಮೂರು ಜನ ಮಂತ್ರಿಗಳಿಂದ ಒತ್ತಡ ಹೆಚ್ಚಿರುವ ಕಾರಣ ಜಗದೀಶ್ ಅಥವಾ ಭಾನುಪ್ರಕಾಶ್ ಅವರನ್ನ ಪಿಪಿ ಮಾಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಲವು ವಕೀಲರ ಜೊತೆ ಎಜಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಬಿ.ಎನ್.ಜಗದೀಶ್ ಅಥವಾ ಭಾನುಪ್ರಕಾಶ್ ಇಬ್ಬರಲ್ಲಿ ಯಾರನ್ನು ನೇಮಿಸಬೇಕೆಂಬ ಗೊಂದಲ ಇದೆ ಎನ್ನಲಾಗಿದೆ.
ಈ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ 17 ಮಂದಿ ಬಂಧನವಾಗಿದೆ. ಬಹಳ ಕ್ರೂರವಾಗಿ ರೇಣುಕಾಸ್ವಾಮಿಯನ್ನು ಕೊಂದಿರುವ ಕಾರಣ ಎನ್‌ಐಎ, ಸಿಬಿಐ ಹಾಗೂ ಇಡಿ ಎಸ್‌ಪಿಪಿ ಆಗಿರುವ ಪ್ರಸನ್ನ ಕುಮಾರ್ ಅವರನ್ನೇ ನಟ ದರ್ಶನ್ ಗ್ಯಾಂಗ್ ವಿರುದ್ಧ ವಾದಿಸಲು ಸರ್ಕಾರ ನೇಮಿಸಿತ್ತು. ಇದರಿಂದ ರಾಜ್ಯದ ಜನತೆಯೂ ಸರ್ಕಾರದ ಉತ್ತಮ ನಿರ್ಧಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಮಾತ್ರವಲ್ಲ ಎರಡನೇ ಬಾರಿ ಡಿ ಗ್ಯಾಂಗ್ ಅನ್ನು ಪೊಲೀಸ್ ಕಸ್ಟಡಿಗೆ ನೀಡುವಲ್ಲಿ ಕೋರ್ಟ್‌ನಲ್ಲಿ ವಾದಿಸಿ ಕೇಸ್‌ಗೆ ಮುನ್ನಡೆ ತಂದಿದ್ದು, ಇದೇ ಪ್ರಸನ್ನಕುಮಾರ್. ಆದರೆ ಪ್ರಭಾವಿ ಸಚಿವರುಗಳು ಯಾಕೆ ಬದಲಾವಣೆಗೆ ಒತ್ತಾಯಿಸುತ್ತಿದ್ದಾರೆ ಎಂಬುದು ಮಾತ್ರ ನಿಗೂಢ ಪ್ರಶ್ನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ