ಬಾಗಲಕೋಟೆ: ನಕಲಿ ಆಸ್ಪತ್ರೆ ಮೇಲೆ ಆರೋಗ್ಯ ಇಲಾಖೆ, ಪೊಲೀಸ್ ಅಧಿಕಾರಿಗಳಿಂದ ದಾಳಿ

By Ravi Janekal  |  First Published Jun 18, 2024, 9:20 PM IST

ಯಾವುದೇ ವೈದ್ಯಕೀಯ ಪದವಿ ಪಡೆಯದೇ, ನಕಲಿ ಆಸ್ಪತ್ರೆ ತೆರೆದು ಬಡರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಕುಂಬಾರ ಗಲ್ಲಿಯಲ್ಲಿ ನಡೆದಿದೆ. ಸುರೇಖಾ ಚರ್ಕಿ (60) ಅನಧಿಕೃತವಾಗಿ ಆಸ್ಪತ್ರೆ  ನಡೆಸುತ್ತಿದ್ದ ಆರೋಪಿ ಮಹಿಳೆ.


ಬಾಗಲಕೋಟೆ (ಜೂ.18): ಯಾವುದೇ ವೈದ್ಯಕೀಯ ಪದವಿ ಪಡೆಯದೇ, ನಕಲಿ ಆಸ್ಪತ್ರೆ ತೆರೆದು ಬಡರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಕುಂಬಾರ ಗಲ್ಲಿಯಲ್ಲಿ ನಡೆದಿದೆ.

ಸುರೇಖಾ ಚರ್ಕಿ (60) ಎಂಬಾಕೆ ಅನಧಿಕೃತವಾಗಿ ಆಸ್ಪತ್ರೆ ನಡೆಸುತ್ತಿದ್ದಳು. ಈಕೆ ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ. ವೈದ್ಯಕೀಯ ಬಗ್ಗೆ ಯಾವುದೇ ಜ್ಞಾನವಿಲ್ಲದಿದ್ರೂ ಬಡರೋಗಿಗಳನ್ನು ಬಂಡವಾಳ ಮಾಡಿಕೊಂಡು ಹಣ ಮಾಡುವ ದುರುದ್ದೇಶದಿಂದ ನಕಲಿ ಆಸ್ಪತ್ರೆ ನಡೆಸುತ್ತಿದ್ದ ಮಹಿಳೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ನಕಲಿ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆಸ್ಪತ್ರೆಯಲ್ಲಿ ಹೆರಿಗೆ ಸ್ಕ್ಯಾನಿಂಗ್ ಪತ್ತೆಯಾಗಿಲ್ಲ. ಆದರೆ ಹಲವು ವಸ್ತುಗಳು ನಕಲಿ ಔಷಧಿಗಳನ್ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Latest Videos

undefined

ಪೌರಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ತಲುಪಲಿಸಿ: ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವಿ.ವೆಂಕಟೇಶನ್

ಜನವಸತಿ ಹೆಚ್ಚಿರುವ ಕುಂಬಾರಗಲ್ಲಿ. ಹೆಚ್ಚಾಗಿ ಬಡವರೇ ವಾಸಿಸುತ್ತಿದ್ದಾರೆ. ಈ ಸ್ಥಳದಲ್ಲಿ ಯಾವುದೇ ಮಾನ್ಯತೆ, ವೈದ್ಯಕೀಯ ಪದವಿ ಇಲ್ಲದೇ ಆಸ್ಪತ್ರೆ ತೆರೆದಿದ್ದ ಖತರ್ನಾಕ್ ನಕಲಿ ವೈದ್ಯ. ಹಿಂದಿನಿಂದಲೂ ಅನಾರೋಗ್ಯದಿಂದ ಆಸ್ಪತ್ರೆ ಬಂದ ರೋಗಿಗಳಿಗೆ ನಕಲಿ ಔಷಧ ಕೊಟ್ಟಿರುವ ಬಗ್ಗೆ ಮಾಹಿತಿ. ಆದರೆ ಈ ಆಸ್ಪತ್ರೆಗೆ ಎಲ್ಲಿಂದ ಔ‍ಷಧ ತಯಾರಾಗುತ್ತಿತ್ತು? ಯಾರು ಸರಬರಾಜು ಮಾಡುತ್ತಿದ್ದರು ಎಂಬುದು ರಹಸ್ಯವಾಗಿದೆ. ಇದೇ ರೀತಿ ಅನೇಕ ಕಡೆ ನಕಲಿ ಆಸ್ಪತ್ರೆ ಜಾಲ ತಲೆ ಎತ್ತಿರುವ ಸಾಧ್ಯತೆ ಇದೆ. ಹೀಗಾಗಿ ಮೊದಲಿಗೆ ಔಷಧ ಎಲ್ಲಿಂದ ತರಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆಗೆ ಮುಂದಾಗಿರುವ ಪೊಲೀಸರು.

ದಸರಾ ಆನೆ ಅಶ್ವತ್ಥಾಮ ಸಾವಿನ ಬೆನ್ನಲ್ಲೇ ಗಂಗಶ್ರೀ ಸಾವು!

ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಟಿಹೆಚ್ಓ ಗೈಬುಸಾಬ್ ಗಲಗಲಿ, ಜಮಖಂಡಿ ಪೊಲೀಸರಿಂದ ದಾಳಿ ನಡೆದಿರುವ ದಾಳಿ. ನಕಲಿ ಆಸ್ಪತ್ರೆ ನಡೆಸುತ್ತಿರುವ ಬಗ್ಗೆ ಹಲವು ದಿನಗಳಿಂದ ಮಾಹಿತಿ ಕಲೆಹಾಕಿದ್ದ ಪೊಲೀಸರು. ಇದೀಗ ದಾಳಿ ನಡೆಸಿ ನಕಲಿ ಆಸ್ಪತ್ರೆ ಜಾಲದ ಬಗ್ಗೆ ಸಂಪೂರ್ಣ ತನಿಖೆ ಕೈಗೊಂಡು ಕ್ರಮ ಜರುಗಿಸಲು ಮುಂದಾಗಿರುವ ಪೊಲೀಸರು.

click me!