ಸಿಗರೆಟ್, ಗುಟ್ಕಾ, ಗಾಂಜಾ ಪ್ಯಾಕೆಟ್ ಗಳನ್ನು ಜೈಲೊಳಗೆ ಸಾಗಿಸಿದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ನಿತ್ಯವೂ ಯಾವುದೇ ತಪಾಸಣೆ ಇಲ್ಲದೆ ಇಂಥ ನಿಷೇಧಿತ ವಸ್ತುಗಳ ಸಾಗಾಟ ಇಲ್ಲಿ ನಡೆಯುತ್ತಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಲಬುರಗಿ(ಡಿ.22): ಇಲ್ಲಿನ ಕೇಂದ್ರ ಕಾರಾಗೃಹ ಕ್ರಿಮಿನಲ್‌ಗಳ ಪಾಲಿನ ಸ್ವರ್ಗವಾಗುತ್ತಿರುವ ಆರೋಪ ಕೇಳಿಬಂದಿದೆ. ಇಲ್ಲಿ ಹಣ ಚೆಲ್ಲಿದರೆ ನಿಷೇಧಿತ ವಸ್ತುಗಳೆಲ್ಲವೂ ಕ್ರಿಮಿನಲ್‌ಗಳಿರುವ ಸೆಲ್‌ಗೆ ಸರಬರಾಜು ಆಗುತ್ತವೆ. ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಸೇರಿ ಪ್ರಮುಖ ಕೈದಿಗಳಿಗೆ ಜೈಲಲ್ಲಿ ನಿತ್ಯವೂ ಗುಟ್ಕಾ, ಸಿಗರೆಟ್ ಮತ್ತಿತರ ವಸ್ತುಗಳು ಪೂರೈಕೆಯಾಗುತ್ತವೆ ಎಂಬುದಕ್ಕೆ ಸಾಕ್ಷಿ ಹೇಳುವ ವಿಡಿಯೋವೊಂದು ಇದೀಗ ಬಯಲಾಗಿದೆ.
ಸಿಗರೆಟ್, ಗುಟ್ಕಾ, ಗಾಂಜಾ ಪ್ಯಾಕೆಟ್ ಗಳನ್ನು ಜೈಲೊಳಗೆ ಸಾಗಿಸಿದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ನಿತ್ಯವೂ ಯಾವುದೇ ತಪಾಸಣೆ ಇಲ್ಲದೆ ಇಂಥ ನಿಷೇಧಿತ ವಸ್ತುಗಳ ಸಾಗಾಟ ಇಲ್ಲಿ ನಡೆಯುತ್ತಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
undefined
ಬೆಂಗಳೂರು: ನಿಮ್ಮ ಹೆಸರಿಗೆ ಡ್ರಗ್ಸ್ ಬಂದಿದೆ ಎಂದು 1.8 ಕೋಟಿ ಸುಲಿಗೆ: 8 ಖದೀಮರು ಅರೆಸ್ಟ್..!
ಆರ್.ಡಿ.ಪಾಟೀಲ್, ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬಚ್ಚಾ ಖಾನ್, ಜಾನ್ ಎಂಬ ಕೈದಿಗಳಿಗೆ ಜೈಲಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಎಸ್‌ಐಎಸ್‌ಎಫ್) ಯ ಇನ್ಸ್‌ಪೆಕ್ಟರ್ ವಿಶ್ವನಾಥ ಪೊಲೀಸ್ ಪಾಟೀಲ್ ಅವರ ಸುಪರ್ದಿಯಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಅವರ ಸುಪರ್ದಿಯಲ್ಲೇ ಇಲ್ಲಿ ಎಲ್ಲವೂ ತಪಾಸಣೆ, ಸ್ಕ್ಯಾನ್ ಆಗಬೇಕು. ಹೀಗಿದ್ದಾಗೂ ಜೈಲಿನೊಳಗೆ ಈ ವಸ್ತುಗಳು ಹೇಗೆ ಪ್ರವೇಶಿಸುತ್ತಿವೆ ಎಂಬುದೇ ಅಚ್ಚರಿ ಎಂಬಂತಾಗಿದೆ.
ಬೆಂಗ್ಳೂರಲ್ಲಿ ಗ್ರಾಹಕರ ಮನೆಗೆ ಗಾಂಜಾ ಡೆಲಿವರಿ: ಸಿಹಿ ತಿನಿಸು ಮಾರಾಟಗಾರರ ಬಂಧನ
ಪ್ರಿಯಾಂಕ್ ಖರ್ಗೆ ತರಾಟೆ: ಸಮಗ್ರ ವರದಿಗೆ ಸೂಚನೆ
ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ತಕ್ಷಣ ಸಮಗ್ರ ವರದಿ ಸಲ್ಲಿಸುವಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಕುಮಾರ್ ಮತ್ತು ಎಸ್.ಪಿ.ಅಡ್ಡೂರು ಶ್ರೀನಿವಾಸಲು ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ನೀಡಿದ್ದಾರೆ.
ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಆರಂಭವಾಗುತ್ತಿದ್ದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ರಂಗನಾಥ್ ಅವರನ್ನು ಜೈಲಿನಲ್ಲಿ ನಡೆಯುತ್ತಿರುವ ಅಕ್ರಮದ ಕುರಿತು ತೀವ್ರ ತರಾಟೆಗೆ ತೆಗೆದುಕೊಂಡರು. ಜೈಲಲ್ಲಿ ಅಕ್ರಮವಾಗಿ ಗುಟ್ಕಾ ಪೂರೈಸಲಾಗುತ್ತಿದೆಯಂತೆ. ಇದೆಲ್ಲದಕ್ಕೂ ಕಡಿವಾಣ ಹಾಕಬೇಕು. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಜೈಲು ಬಳಕೆಯಾಗಬಾರದು. ಅಲ್ಲಿನ ಸಿಸಿಟಿವಿ ಫುಟೇಜ್ ತರಿಸಿ, ಪರಿಶೀಲನೆ ನಡೆಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.