ಮೊಬೈಲ್ ಖರೀದಿಗೆ ಹಣ ಕೊಡದ ತಾಯಿ ಕೊಂದು ತಂದೆಗೆ  ಹೇಳಿದ!

Published : Jan 21, 2021, 05:18 PM IST
ಮೊಬೈಲ್ ಖರೀದಿಗೆ ಹಣ ಕೊಡದ ತಾಯಿ ಕೊಂದು ತಂದೆಗೆ  ಹೇಳಿದ!

ಸಾರಾಂಶ

ಮೊಬೈಲ್ ಖರೀದಿಗೆ ಹಣ ಕೊಡದ ತಾಯಿಯನ್ನೇ ಕೊಂದ ಪುತ್ರ/ ಮಲತಾಯಿಯನ್ನೇ ಹತ್ಯೆ ಮಾಡಿದ/ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಪ್ರಕರಣ/ ತಂದೆಯೇ ಮಗನ ಮೇಲೆ ದೂರು ಕೊಟ್ಟರು

ಮೀರತ್(ಜ.  21)  ಮೊಬೈಲ್ ಖರೀದಿಗೆ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಇಲ್ಲೊಬ್ಬ ತನ್ನ ತಾಯಿಯನ್ನೇ ಹತ್ಯೆ ಮಾಡಿದ್ದಾನೆ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಪ್ರಕರಣ ನಡೆದಿದ್ದು ಹೊಸ ಮೊಬೈಲ್ ಫೋನ್ ಖರೀದಿಸಲು ಹಣ ನೀಡದ ಕಾರಣ ಮಲತಾಯಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ.

ನಂತರ, ಆರೋಪಿ ಮಹಿಳೆಯ ಕೊಲೆ ಬಗ್ಗೆ ತಂದೆಗೆ ತಿಳಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಪಿಪಿಇ ಕಿಟ್ ಧರಿಸಿ ಬಂದವ ದೋಚಿದ್ದು  25 ಕೆಜಿ ಚಿನ್ನ!

ಆರೋಪಿ ತಂದೆ, ಸಾವಿಗೀಡಾದ ಮಹಿಳೆ ಪತಿ ಅಬ್ದುರ್ ರೆಹ್ಮಾನ್  ಪ್ರಕರಣ ದಾಖಲಿಸಿದ್ದಾರೆ. ಭೀಕರ ಕೊಲೆ ಪ್ರದೇಶದಲ್ಲಿ ಆತಂಕ ಸೃಷ್ಟಿ ಮಾಡಿತ್ತು.

ಕೊಲೆಯಾದ ರೇಷ್ಮಾ  ಅಬ್ದುರ್ ರೆಹ್ಮಾನ್ ಎರಡನೇ ಹೆಂಡತಿ. ಮೊದಲ ಹೆಂಡತಿ ಮತ್ತು ಮಕ್ಕಳು ಬೇರೆ ಕಡೆ ವಾಸ ಮಾಡುತ್ತಿದ್ದರು.

ಮಂಗಳವಾರ ಮಧ್ಯಾಹ್ನ, ರೇಷ್ಮಾ ಅವರ ಮಲಮಗ  ಖಿಜ್ರ್ ಅವರ ಬಳಿಗೆ ಬಂದು 10,000 ರೂ.ಗೆ ಬೇಡಿಕೆ ಇಟ್ಟಿದ್ದಾನೆ.  ಆದರೆ ತನ್ನ ಬಳಿ ಹಣವಿಲ್ಲ ಎಂದು ಮಹಿಳೆ ಹೇಳಿದಾಗ ಸಿಟ್ಟಿಗೆದ್ದು ಹತ್ಯೆ ಮಾಡಿದ್ದಾನೆ. ನನ್ನ ಮಗ ಕಂಪನಿಯೊಂದರಲ್ಲಿ  ಕೆಲಸ ಮಾಡುತ್ತಿದ್ದು ಅದನ್ನು ಕಳೆದುಕೊಂಡಿದ್ದ. ನಂತರ ಡ್ರಗ್ಸ್ ಅಡಿಕ್ಟ್ ಆಗಿದ್ದ ಎಂದು ತಂದೆ ಹೇಳಿಕೆ ನೀಡಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!