
ಮುಂಬೈ(ಅ.03): ದೇಶದ ವಾಣಿಜ್ಯ ನಗರಿ ಮುಂಬೈ(Mumbai) ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯನ್ನು(rave party) ಮಾದಕ ವಸ್ತು ನಿಯಂತ್ರಣ ದಳ(NCB) ಬಯಲು ಮಾಡಿದೆ.
ಈ ವೇಳೆ ಹಡಗಿನಲ್ಲಿದ್ದ ಕೊಕೇನ್, ಹಶೀಶ್ ಮತ್ತು ಎಂಡಿಎಂಎ ಸೇರಿದಂತೆ ಇನ್ನಿತರ ಅಕ್ರಮ ಮಾದಕ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಈ ಪಾರ್ಟಿಯಲ್ಲಿ ತೊಡಗಿದ್ದ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ 10 ಮಂದಿ ಪೈಕಿ ಬಾಲಿವುಡ್ ಸೂಪರ್‌ಸ್ಟಾರ್(Bollywood Superstar) ಒಬ್ಬರ ಪುತ್ರನೂ ಇದ್ದಾನೆ ಎಂದು ಮೂಲಗಳು ತಿಳಿಸಿವೆ.
"
ಈ ಹಡಗಿನಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಶನಿವಾರ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಪ್ರಯಾಣಿಕರಂತೆ ಇದೇ ಹಡಗಿನಲ್ಲಿ ಮಸ್ತಿಯಲ್ಲಿದ್ದರು. ಮುಂಬೈ ಕರಾವಳಿಯನ್ನು ದಾಟಿದ ಹಡಗು ಸಮುದ್ರದ ಮಧ್ಯ ಭಾಗಕ್ಕೆ ಬರುತ್ತಿದ್ದಂತೆ ರೇವ್ ಪಾರ್ಟಿ(Rave party) ಆರಂಭವಾಗಿತ್ತು.
ಈ ವೇಳೆ ಬಂಧಿತರು ಯಾವುದೇ ಭೀತಿಯಿಲ್ಲದೆ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದರು. 7 ಗಂಟೆಗಳ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾದ ಆರೋಪಿಗಳನ್ನು ಭಾನುವಾರ ಮುಂಬೈಗೆ ವಾಪಸ್ ಕರೆತರಲಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ