
ಬೆಂಗಳೂರು ( ಏ. 02 ) ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ವಿಚಾರಣೆ ಮುಂದುವರಿದಿದೆ ಅಡುಗೋಡಿ ಟೆಕ್ನಿಕಲ್ ಸೆಂಟರ್ ಗೆ ಭೇಟಿ ನೀಡಿದ ಬಳಿಕ ವಕೀಲ ಕೆ.ಎನ್.ಜಗದೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಆರ್ ಪಿಸಿ 161ಡಿಯಲ್ಲಿ ಸಂತ್ರಸ್ತೆಯ ವಿಚಾರಣೆ ಮುಂದುವರೆದಿದೆ. ಆರೋಪಿ ವಿಚಾರಣೆಗೆ ಹಾಜರಾಗಬಹುದು ಎಂದು ನಾನು ಸಹ ಬಂದಿದ್ದೆ. ಆದರೆ ಆರೋಪಿ ಇಂದು ವಿಚಾರಣೆಗೆ ಹಾಜರಾಗಿಲ್ಲ. ಸಂತ್ರಸ್ತೆ ಹೇಳಿದ್ದರಿಂದಲೇ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಬಂದಿದ್ದೇನೆ. ಹಾಗೇನಾದರೂ ಇದ್ದಲ್ಲಿ ಎಸ್ಐಟಿ ನನಗೆ ನೊಟೀಸ್ ನೀಡಲಿ, ನಾನು ಮಾಹಿತಿ ನೀಡುವುದನ್ನ ನಿಲ್ಲಿಸುತ್ತೇನೆ ಎಂದರು.
ಅಡುಗೋಡಿ ಟೆಕ್ನಿಕಲ್‌ಸೆಲ್ ನಲ್ಲಿ ಸಂತ್ರಸ್ತ ಯುವತಿಯನ್ನ ವಿಚಾರಣೆಯನ್ನು ತನಿಖಾಧೀಕಾರಿಗಳು ನಡೆಸಿದ್ದಾರೆ. ಸುದೀರ್ಘವಾಗಿ ಎರಡು ಗಂಟೆಗಳಿಂದ ವಿಚಾರಣೆ ನಡೆಯುತ್ತಿದೆ ಮೂರು ಕೇಸ್ ಸಂಬಂಧ ಬೇರೆ ಬೇರೆ ಆಯಾಮದಲ್ಲಿ ವಿಚಾರಣೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಲೆಮರೆಸಿಕೊಂಡಿರೋ ಇಬ್ಬರು ವ್ಯಕ್ತಿಗಳ ಜೊತೆಯಿದ್ದ ಬಗ್ಗೆ ಪ್ರಶ್ನೆ ಕೇಳಲಾಗಿದೆ.
ಜಾರಕಿಹೊಳಿ ವಿಡಿಯೋ ಚಾಟ್, ವಾಟ್ಸಪ್ ದಾಖಲೆ ಬಹಿರಂಗ
ಕೆಲ ಪ್ರಶ್ನೆಗಳಿಗೆ ಯುವತಿ ಅಸ್ಪಷ್ಟ ಉತ್ತರ ನೀಡಿದ್ದಾರೆ. ಸದಾಶಿವನಗರ ಠಾಣೆಯಲ್ಲಿ ದಾಖಲಾದ ಕೇಸ್ ವಿಚಾರಕ್ಕೂ ಉತ್ತರ ನೀಡಿಲ್ಲ. ಜೊತೆಗೆ ಪೋಷಕರು ಕೊಟ್ಟ ಕಿಡ್ಯಾಪ್ ಗೆ ಕೇಸ್ ಬಗ್ಗೆ ಯುವತಿ ಉತ್ತರ ನೀಡಿದ್ದಾಳೆ.
ನಾನು ಕಿಡ್ನಾಪ್ ಆಗಿಲ್ಲ...ಡ್ಯಾಡಿ ಮಮ್ಮಿ ಯಾರದೋ ಒತ್ತಡದಿಂದ ಹಾಗೇ ದೂರು ಕೊಟ್ಟಿದ್ದಾರೆ.. ಇಷ್ಟರಲ್ಲೇ ಪೋಷಕರನ್ನ ಭೇಟಿ ಆಗ್ತೀನಿ.. ನಾನು ಯಾರ ಒತ್ತಡದಲ್ಲಿಲ್ಲ ಎಂದು ಯುವತಿ ಹೇಳಿದ್ದಾಳೆ ಕಬ್ಬನ್ ಪಾರ್ಕ್ ಕೇಸ್ ಸಂಬಂಧ ನಾನು ಈಗಾಗ್ಲೇ ಹೇಳಿಕೆ ನೀಡಿದ್ದೇನೆ . ಸಾಕ್ಷ್ಯಗಳನ್ನ ಸಹ ಕೊಡುತ್ತೇನೆ ಎಂದು ಯುವತಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ