SIT ತನಿಖೆ ಬಗ್ಗೆ ಒಂದೇ  ಒಂದು ಮಾತು ಹೇಳಿದ ಡಿಜಿ ಪ್ರವೀಣ್ ಸೂದ್!

By Suvarna News  |  First Published Apr 6, 2021, 6:23 PM IST

ಶಿವಮೊಗ್ಗದಲ್ಲಿ ಡಿಜಿ ಪ್ರವೀಣ್ ಸೂದ್ ಹೇಳಿಕೆ/ ಎಸ್ಐಟಿ ರಚನೆ  ಮಾಡಿದ ಉದ್ದೇಶ ಸ್ವತಂತ್ರ ತನಿಖೆ ನಡೆಸಲು/ ಎಸ್ಐಟಿ ತನಿಖೆ ಬಗ್ಗೆ ಬೆಳಿಗ್ಗೆ, ಸಂಜೆ ಮತಾನಾಡಬಾರದು/ ಎಸ್ಐಟಿಯವರು ಸ್ವತಂತ್ರ ವಾಗಿ ನಿಷ್ಪಕ್ಷಪಾತವಾಗಿ ಕಾನೂನಿನ ಪ್ರಕಾರ ತನಿಖೆ ನಡೆಸುತ್ತಾರೆ/  ಎಸ್ಐಟಿ ಎನು ಕೆಲಸ ಮಾಡುತ್ತಾರೆ ಎಂದು ತನಿಖೆ ಮುಗಿದ ನಂತರ ಮಾತನಾಡಬೇಕು


ಶಿವಮೊಗ್ಗ(ಏ. 06)  ಸಿಡಿ ಕೇಸ್ ನಲ್ಲಿ ಎಸ್ಐಟಿ ರಚನೆ  ಮಾಡಿದ ಉದ್ದೇಶ ಸ್ವತಂತ್ರ ತನಿಖೆ ನಡೆಸುವುದು. ಎಸ್ಐಟಿ ತನಿಖೆ ಬಗ್ಗೆ ಬೆಳಿಗ್ಗೆ, ಸಂಜೆ ಮತಾನಾಡಬಾರದು. ಎಸ್ಐಟಿಯವರು ಸ್ವತಂತ್ರ ವಾಗಿ ನಿಷ್ಪಕ್ಷಪಾತವಾಗಿ ಕಾನೂನಿನ ಪ್ರಕಾರ ತನಿಖೆ ನಡೆಸುತ್ತಾರೆ ಎಂದು ಡಿಜಿ ಪ್ರವೀಣ್ ಸೂದ್ ಹೇಳಿದ್ದಾರೆ.

ಎಸ್ಐಟಿ ಎನು ಕೆಲಸ ಮಾಡುತ್ತಾರೆ ಎಂದು ತನಿಖೆ ಮುಗಿದ ನಂತರ ಮಾತನಾಡಬೇಕು. ಪ್ರತಿದಿನ ಎಸ್ಐಟಿ ತನಿಖೆ ಬಗ್ಗೆ ಮಾತನಾಡಬಾರದು. ಪ್ರತಿದಿನ ಎಸ್ ಐಟಿ ತನಿಖೆ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಎಸ್ಐಟಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡುತ್ತದೆ. ತನಿಖೆ ನಡೆಯುವಾಗ ಟೀಕೆ ಟಿಪ್ಪಣಿ ಮಾಡುವುದು ಸೂಕ್ತವಲ್ಲ, ಸರಿಯಲ್ಲ. ಎಸ್ಐಟಿ ತನಿಖೆ ಕುರಿತಂತೆ ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.

Tap to resize

Latest Videos

ಸಿಡಿ ಸ್ಫೋಟದ ಹಿಂದೆ ಯಾರಿದ್ದಾರೆ? ಯುವತಿ  ಹೇಳಿಕೆಯಲ್ಲಿ ಸಿಕ್ಕ ಅಂಶ

ಶಿವಮೊಗ್ಗದ ಹುಣಸೋಡು ಸ್ಪೋಟ ಪ್ರಕರಣ ದ ಕುರಿತು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ. ಶಿವಮೊಗ್ಗ ನಗರಕ್ಕೆ ಪೋಲಿಸ್ ಕಮಿಷನರೇಟ್ ಮಾಡುವ ಕುರಿತು ಸರ್ಕಾರದ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

 

click me!