ಜಾರಕಿಹೊಳಿ ಸಿ.ಡಿ.ಕೇಸ್: ಎಸ್‌ಐಟಿ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್!

By Suvarna News  |  First Published Apr 5, 2021, 10:28 PM IST

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿ. ಡಿ. ಪ್ರಕರಣ ದಿನಕ್ಕೊಂದು ತಿರುವುಪಡೆದುಕೊಳ್ಳುತ್ತಿದೆ. ಇನ್ನು ಇದೀಗ ಹೈಕೋರ್ಟ್ ಈ ಬಗ್ಗೆ ಎಸ್‌ಐಟಿ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಕೊಟ್ಟಿದೆ.


ಬೆಂಗಳೂರು, (ಏ.05): ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಎಸ್‌ಐಟಿ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್ ನೀಡಿ, ವರದಿಯನ್ನ ಕೇಳಿದೆ.

ಮಾಜಿ ಸಚಿವರ ಖಾಸಗಿ ವಿಡಿಯೋ ಸಿ.ಡಿ ಬಹಿರಂಗ ಪ್ರಕರಣದ ತನಿಖೆಯನ್ನ ಎಸ್​ಐಟಿಗೆ ನೀಡಿದ್ದು ಮತ್ತು ಪ್ರಕರಣವನ್ನ ಸಿಬಿಐಗೆ ನೀಡಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು. 

Latest Videos

undefined

ಈ ಅರ್ಜಿಯ ವಿಚಾರಣೆಯು ಇಂದು (ಸೋಮವಾರ) ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆದಿದ್ದು,  ಪ್ರಕರಣದ ತನಿಖೆಯ ವರದಿಯನ್ನ ನೀಡುವಂತೆ ಎಸ್​ಐಟಿ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. 

'ವಿಚಾರಣೆಯಿಂದ ತಪ್ಪಿಸಿಕೊಳ್ಳಲು ರಮೇಶ್ 'ಜಾರಿಕೊಳ್ಳಲು' ಕೊರೋನಾ ನೆಪವೇ'?

ವಕೀಲ ಉಮೇಶ್ ಎಂಬುವವರು ಎಸ್‌ಐಟಿ ರಚನೆಯನ್ನ ಪ್ರಶ್ನಿಸಿ ಪಿಐಎಲ್ ಹಾಕಿದ್ರು. ಇನ್ನು ವಕೀಲ ಜಿ.ಆರ್ ಮೋಹನ್ ಪ್ರಕರಣ ಸಿಬಿಐಗೆ ನೀಡಲು ‌ಕೋರಿದ್ದರು. ಎಸ್‌ಐಟಿಯಿಂದ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಆರೋಪವನ್ನೂ ಜಿ.ಆರ್ ಮೋಹನ್ ಮಾಡಿದ್ದರು.

2 ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್​ ನೋಟಿಸ್ ಜಾರಿಗೊಳಿಸಿದೆ. ಪ್ರಕರಣದ ತನಿಖೆ ಎಲ್ಲಿ ತನಕ ಬಂದಿದೆ? ಎಸ್‌ಐಟಿ ತನಿಖೆ ಎಲ್ಲಿಯವರೆಗೆ ಬಂದಿದೆ? ಕೇಸ್ ಯಾವ ಹಂತದಲ್ಲಿ ನಡೆಯುತ್ತಿದೆ? ಎಂದು ಮುಚ್ಚಿದ ಲಕೋಟೆಯಲ್ಲಿ ವರದಿಯನ್ನ ನೀಡಬೇಕು ಎಂದು ಸೂಚಿಸಿದೆ. 

click me!