
ಬೆಂಗಳೂರು(ಮಾ. 03) ರಮೇಶ್ ಜಾರಕಿಹೊಳಿ ತಮ್ಮ ಮೇಲಿನ ಆರೋಪದ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಿಡಿ ಬಾಂಬ್ ಪ್ರಕರಣದ ಬಗ್ಗೆ ಹಿರಿಯ ವಕೀಲರು ಏನಂತಾರೆ ಎನ್ನುವುದು ಅಷ್ಟೆ ಮುಖ್ಯ.
ಇದು ಮೇಲ್ನೋಟಕ್ಕೆ ಪಕ್ಕಾ ಹನಿಟ್ರ್ಯಾಪ್ ಅನ್ನೋದು ಗೊತ್ತಾಗ್ತಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ವಕೀಲ ಪಿಪಿ ಹೆಗಡೆ ಹೇಳಿಕೆ ನೀಡಿದ್ದಾರೆ ನಿರ್ದೋಷಿ ಅಂತಾ ರಮೇಶ್ ಜಾರಕಿಹೊಳಿ ಆಗಬೇಕಂದ್ರೆ ಆರೋಪಿ ವಿರುದ್ಧ ದೂರು ದಾಖಲಿಸಬೇಕು. ಪೊಲೀಸರ ತನಿಖೆಯಿಂದ ಸತ್ಯಾ ಸುಳ್ಳು ಅನ್ನೋದು ತಿಳಿಯಲಿದೆ. ಸದ್ಯಕ್ಕೆ ಜಾರಕಿಹೊಳಿ ನೈತಿಕವಾಗಿ ನಿರ್ದೋಷಿ ಆಗೋದು ಬಹಳ ಕಷ್ಟ. ಕಾನೂನು ಪ್ರಕಾರ ನಿರ್ದೋಷಿ ಆಗಲು ಅವಕಾಶ ಇದೆ. ಕಾನೂನು ಪ್ರಕಾರ ಅಪರಾಧ ಎಸಗಿಲ್ಲ ಅಂತಾ ಆಗಬೇಕು ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಕೊಟ್ಟ ಮೊದಲ ಪ್ರತಿಕ್ರಿಯೆ
ಈ ಪ್ರಕರಣದಲ್ಲಿ ಪ್ರಾಯಸ್ಥರು ಒಟ್ಟಿಗೆ ಸೇರಿದ್ದಾರೆ ಪ್ರಾಯಸ್ಥರು ಒಪ್ಪಿಗೆ ಯಿಂದ ದೈಹಿಕ ಸಂಪರ್ಕ ಬೆಳೆಸಲು ಕಾನೂನಿನ ಪ್ರಕಾರ ಒಪ್ಪಿಗೆ ಇದೆ ಒಟ್ಟಿಗೆ ಸೇರೋದು ಕಾನೂನು ಪ್ರಕಾರ ಅಪರಾಧ ಅಲ್ಲ. ಯುವತಿಯನ್ನು ಸದ್ಯಕ್ಕೆ ಸಂತ್ರಸ್ತೆ ಅಂತಾ ಹೇಳಲಾಗುವುದಿಲ್ಲ. ಯಾವ ಆಧಾರದಲ್ಲಿ ಅವಳನ್ನು ಸಂತ್ರಸ್ತೆ ಅಂತಾ ಹೇಳ್ತಿದ್ದೀರಾ? ಅವಳು ದೋಷಿ ಇರಬಹುದು? ಇವರನ್ನು ಬ್ಲಾಕ್ ಮೇಲ್ ಮಾಡಿರಬಹುದು. ಅವಳು ಕೂಡ ಒಪ್ಪಿಗೆಯಿಂದ ಸಚಿವರ ಜೊತೆ ದೈಹಿಕ ಸಂಪರ್ಕ ಬೆಳೆಸಿರಬೇಕು. ಮಹಿಳೆ ಇದುವರೆಗೂ ದೂರು ನೀಡಿಲ್ಲ..ದೂರುದಾರಳೂ ಅಲ್ಲ. ಅವಳ ಮೇಲೆ ಅತ್ಯಾಚಾರ ಆಗಿದೆ ಎಂದಾಗ ಮಾತ್ರ ಅವಳು ಸಂತ್ರಸ್ತೆಯಾಗುತ್ತಾಳೆ ಎಂದರು.,
ಅವಳು ಈಗ ಸಂತ್ರಸ್ತೆ ಅಲ್ಲಾ..ಆಕೆ ಸಂತ್ರಸ್ತೆಯೂ ಆಗಿರಬಹುದು,ಅಪರಾಧಿಯೂ ಆಗಿರಬಹುದು,ಬ್ಲಾಕ್ ಮೇಲ್ ಕೂಡ ಮಾಡಿರಬಹುದು. ಅವಳ ವಿಚಾರಣೆಯೂ ಈ ಪ್ರಕರಣದಲ್ಲಿ ಆಗಬೇಕು. ಸಂತ್ರಸ್ತೆ ಎಂದು ಹೇಗೆ ಪರಿಗಣಿಸ್ತಿರಿ,ದೂರು ಎಲ್ಲಿದೆ? ಸ್ವ ಇಚ್ಛೆಯಿಂದ ಸಂಪರ್ಕ ಬೆಳೆಸಿದಾಗ ಆಕೆ ಕಾನೂನಿನ ಅಡಿಯಲ್ಲಿ ಸಂತ್ರಸ್ಥೆ ಆಗೋದಿಲ್ಲ. ರಮೇಶ್ ಜಾರಕಿಹೊಳಿ ಹೇಳಿಕೆ ಆಧಾರದಲ್ಲಿ ಪೊಲೀಸರು ದೂರು ದಾಖಲಿಸಬಹುದು. ಅದು ಪೊಲೀಸ್ ತನಿಖೆಯಿಂದ ಆಗಬೇಕು. ಬ್ಲಾಕ್ ಮೇಲ್ ಮಾಡಿದ್ದಿದ್ದರೆ ಮಹಿಳೆ ಅಪರಾಧಿ ಆಗುತ್ತಾಳೆ. ಮಹಿಳೆಯರಿಗೆ ಯಾರೆಲ್ಲ ಸಹಾಯ ಮಾಡಿದ್ರೂ ಎಲ್ಲರೂ ಅಪರಾಧಿಗಳಾಗ್ತಾರೆ. ಆ ಹುಡುಗೆಯೇ ಆಮಿಷಕ್ಕೊಳಗಾಗಿ ಈ ರೀತಿ ಮಾಡಿರಬಹುದು. ಇದೂ ಕ್ಲಿಯರ್ ಆಗಿ ಬ್ಲಾಕ್ ಮೇಲ್ ಪ್ರಕರಣ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
"
ವಂಚನೆ ಮಾಡೋದಕ್ಕಾಗಿಯೇ ಸೆಳೆದು,ವಿಡಿಯೋ ಮಾಡಿ ತೇಜೋವಧೆ ಮಾಡಿರಬಹುದು. ಇದು ಖಂಡಿತ ಸುಲಿಗೆಯ ಪ್ರಕರಣ.ಇದರ ಬಗ್ಗೆ ದೂರು ನೀಡುವ ಸ್ವಾತಂತ್ರ್ಯ ನೊಂದ ವ್ಯಕ್ತಿಗಿದೆ. ರಮೇಶ್ ಜಾರಕಿಹೊಳಿ ಯಾಕೆ ದೂರ ಕೊಟ್ಟಿಲ್ವೊ ಗೊತ್ತಿಲ್ಲ. ರಮೇಶ್ ಜಾರಕಿಹೊಳಿ ದೂರು ಕೊಟ್ಟರೆ ರಮೇಶ್ ಜಾರಕಿಹೊಳಿ ಸಂತ್ರಸ್ತರಾಗ್ತಾರೆ ಬ್ಲಾಕ್ ಮೇಲ್ ಆಗಿದೆ ಅಂತಾ ಹೇಳಬೇಕಾಗಿರೋದು ಯಾರು? ರಮೇಶ್ ಜಾರಕಿಹೊಳಿ ಹೇಳಬೇಕಾಗುತ್ತದೆ. ಅವರ ಹೇಳಿಕೆ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳಬಹುದು ಎಂದರು.
ಬ್ಲಾಕ್ ಮೇಲ್ ಮಾಡಿದ್ದು ಸಾಬೀತಾದ್ರೆ ಯುವತಿಗೂ ಶಿಕ್ಷೆ ಆಗುತ್ತದೆ. ಅದರ ಹಿಂದೆ ಯಾರಿದ್ದಾರೆ,ಯಾರೆಲ್ಲ ಛೂ ಬಿಟ್ಟಿದ್ದಾರೆ ಅನ್ನೋದು ಗೊತ್ತಾಗ್ಬೇಕಿದೆ. ಉದ್ಯೋಗ ಕೊಡ್ತೇನೆ ಅಂತಾ ಹೇಳಿ ದೈಹಿಕವಾಗಿ ಬಳಸಿಕೊಳ್ಳೋದು ವಂಚನೆ ವಂಚನೆ ಹಾಗೂ ಅತ್ಯಾಚಾರವಾಗುತ್ತದೆ. ನೊಂದ ವ್ಯಕ್ತಿ ಹೇಳುವಂತದ್ದೇ ಸಾಕ್ಷಿಯಾಗುತ್ತದೆ. ವಂಚನೆ ಅನ್ನೋದು ಕೌಂಟರ್ ಅಂಡ್ ಎನ್ಕೌಂಟರ್ ಕೇಸ್ ಗಳು. ರಮೇಶ್ ಜಾರಕಿಹೊಳಿ ಕೂಡ ಯುವತಿ ಪ್ರೀತಿಯ ನಾಟಕವಾಡಿದ್ಳು ಅಂತಾ ಹೇಳಬಹುದು. ಅವಳೇ ಸ್ವ ಇಚ್ಛೆಯಿಂದ ಬಂದು ರೆಕಾರ್ಡ್ ಮಾಡಿ ಬೇರೆಯವರಿಗೆ ಕೊಟ್ಟಿದ್ದಾರೆಂದು ಹೇಳಬಹುದು. ಅದಕ್ಕಾಗಿ ಪ್ರೀತಿಯ ನಾಟಕವಾಡಿ ಈ ಕೃತ್ಯ ಎಸಗಿದ್ದಾಳೆಂದು ಹೇಳಬಹುದು. ಪ್ಲಾನ್ ಮಾಡಿ ಸಿಲುಕಿಸಿರೋ ಥರ ಸಿಡಿ ನೋಡಿದಾಗ ಅನಿಸುತ್ತೆ ಎಂದರು.
"
ಯುವತಿ ಪ್ಲಾನ್ ಮಾಡಿರೋಹಾಗಿದೆ.ಅವಳಿಗಿರುವ ಸಂಪರ್ಕ ಸಿಡಿ ಕೊಟ್ಟಿರೋದು ಅಂದ್ರೆ ಅವಳೆ ಸಿಡಿ ಮಾಡಿಸಿರುತ್ತಾಳೆ. ಅವಳ ಫೋನ್ ನಲ್ಲಿ ಆಕೆಯೇ ಮಾತಾಡಿರಬೇಕು. ಬೇರೆಯವರ ಫೋನ್ ನಲ್ಲಿ ವಿಡಿಯೋ ಕಾಲ್ ಮಾಡಲಾಗುತ್ತಾ? ಗೊತ್ತಿದ್ದು ಪ್ಲಾನ್ ಮಾಡಿ ವಿಡಿಯೋ,ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಕೋಣೆಗೂ ಸಿಡಿ ಹಾಕಿದ್ದಾಳೆಂದರೆ ಎಲ್ಲದಕ್ಕೂ ಸಿದ್ಧವಾಗಿ ಹೋದಂತೆ ಕಾಣ್ತಿದೆ ಎಂದು ವಕೀಲ ಪಿ.ಪಿ ಹೆಗಡೆ ಹೇಳಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ