ನ್ಯಾಯಾಲಯದ ಮುಂದೆ ಸಿಡಿ ಲೇಡಿ ಪ್ರತ್ಯಕ್ಷ/ ಯಾವುದೇ ಸಮಸ್ಯೆಯಾಗಿಲ್ಲ/ ಅರ್ಧ ಗಂಟೆ ಮುಂಚೆ ಬಂದಿದ್ದೇವೆ/ [ಪೊಲೀಸ್ ಭದ್ರತೆಯಲ್ಲಿಯೇ ಕರೆದುಕೊಂಡು ಬಂದಿದ್ದೇವೆ
ಬೆಂಗಳೂರು(ಮಾ. 30) ಹಲವು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವಿಡಿಯೋ ಮೂಲಕ ಪ್ರತ್ಯಕ್ಷಳಾಗುತ್ತಿದ್ದ ಲೇಡಿ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ತನಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದ ಲೇಡಿ ಸಿಡಿ ಬಿಡುಗಡೆಯಾಗಿ 28 ದಿನಗಳ ನಂತರ ಪ್ರತ್ಯಕ್ಷವಾಗಿದ್ದಾಳೆ.
ಸಿಆರ್‌ಪಿಸಿ 164 ಸ್ಟೇಟ್ ಮೆಂಟ್ ರಜಿಸ್ಟರ್ ಮಾಡಿಸಲು ನ್ಯಾಯಾಲಕ್ಕೆ ಲೇಡಿ ಬಂದಾಗಿದೆ. ಈ ಬಗ್ಗೆ ವಕೀಲ ಜಗದೀಶ್ ಸ್ಪಷ್ಟನೆ ನೀಡಿದ್ದು ನರೇಶ್ ಗೌಡ ಯಾರೂ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
ಗೌಪ್ಯತೆ ಕಾಪಾಡಬೇಕಿದ್ದ ಕಾರಣ ಯಾರಿಗೂ ಗೊತ್ತಾಗದ ಹಾಗೆ ಕರೆದುಕೊಂಡು ಬಂದಿದ್ದೇವೆ ಎಂದು ಜಗದೀಶ್ ಹೇಳಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಹೆಚ್ಚಿನ ವಿಚಾರಣೆ ಅಗತ್ಯ ಇದೆ ಎಂದು ಕರೆದುಕೊಂಡು ಹೋಗುತ್ತಾರೆಯೋ ಎಂಬುದನ್ನು ನೋಡಬೇಕು . ಸರ್ಕಾರ ನಮಗೆ ಸಹಕಾರ ಕೊಟ್ಟಿದೆ ಎಂದರು .
ನೃಪತುಂಗ ರಸ್ತೆಯಲ್ಲಿ ಇರುವ ನ್ಯಾಯಾಲಯದ ಆವರಣಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು ನ್ಯಾಯಾಲಯದ ಪ್ರೊಸಿಡಿಂಗ್ಸ್ ಮುಗಿದ ಮೇಲೆ ವಿವರ ನೀಡುತ್ತೇವೆ ಎಂದು ತಿಳಿಸಿದರು. ಈ ರೀತಿಯ ಪ್ರಕರಣದಲ್ಲಿ ಮಹಿಳೆ ನೀಡುವ ಹೇಳಿಕೆ ಮುಖ್ಯವಾಗುತ್ತದೆ.