ಹೈಕೋರ್ಟ್ ಮೆಟ್ಟಿಲೇರಿದ ಮಾಜಿ ಸಚಿವರ ಖಾಸಗಿ ವಿಡಿಯೋ ಸಿ.ಡಿ ಪ್ರಕರಣ/ ವಿಶೇಷ ತನಿಖಾ ತಂಡದ ರದ್ದು ಕೋರಿ ಪಿಐಎಲ್ / ವಕೀಲೆ ಗೀತಾ ಮಿಶ್ರಾ ರಿಂದ ಪಿಐಎಲ್ ಸಲ್ಲಿಕೆ/ ಹಿರಿಯ ವಕೀಲ ಜಿ.ಆರ್ ಮೋಹನ್ ಮೂಲಕ ಅರ್ಜಿ ಸಲ್ಲಿಕೆ/ ಪೊಲೀಸ್ ಕಮಿಷನರ್ ರಚಿಸಿರುವ ಎಸ್ಐಟಿ ಕಾನೂನಿಗೆ ವಿರುದ್ದವಾಗಿದೆ
ಬೆಂಗಳೂರುಮಾ. 29) ಸಿಡಿ ಸ್ಫೋಟ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಮಾಜಿ ಸಚಿವರ ಖಾಸಗಿ ವಿಡಿಯೋ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿ ನೇಮಕವಾಗಿರುವ ವಿಶೇಷ ತನಿಖಾ ತಂಡ ರದ್ದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ವಕೀಲೆ ಗೀತಾ ಮಿಶ್ರಾ ರಿಂದ ಪಿಐಎಲ್ ಸಲ್ಲಿಕೆ ಮಾಡಿದ್ದಾರೆ. ಹಿರಿಯ ವಕೀಲ ಜಿ.ಆರ್ ಮೋಹನ್ ಮೂಲಕ ಅರ್ಜಿ ಸಲ್ಲಿಕೆಯಾಗಿದೆ. ಪೊಲೀಸ್ ಕಮಿಷನರ್ ರಚಿಸಿರುವ ಎಸ್ಐಟಿ ಕಾನೂನಿಗೆ ವಿರುದ್ದವಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ರಿಂದಲೇ ತನಿಖೆ ಮಾಡಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ವಕೀಲೆ ಗೀತಾ ಮಿಶ್ರಾ ಮನವಿ ಮಾಡಿಕೊಂಡಿದ್ದಾರೆ.
undefined
ಜಾರಕಿಹೊಳಿ ಬ್ರದರ್ಸ್ ಹೈ ಅಲರ್ಟ್; ಬಿಜೆಪಿ ನಾಯಕರೊಂದಿಗೂ ಮಾತುಕತೆ
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಸ್ ಐಟಿ ರಚನೆ ಮಾಡಿದ್ದು ಪ್ರಕರಣ ಕುರಿತು ಎಸ್ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಗಂಟೆಗೆ ಒಂದು ತಿರುವು ಪಡೆದುಕೊಳ್ಳುತ್ತಿರುವ ಪ್ರಕರಣ ಎಲ್ಲಿಂದ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಸರಳವಾಗಿ ಹೇಳಲು ಸಾಧ್ಯವಿಲ್ಲ. ಅನೇಕ ಗೋಜಲು ಮತ್ತು ಗೊಂದಲ ಎದುರಾಗುತ್ತಿದ್ದು ಸಿಡಿ ಲೇಡಿ ಹಾಜರಾದ ಮೇಲೆ ಮಾತ್ರ ಸ್ಪಷ್ಟನೆ ಸಿಗಲು ಸಾಧ್ಯ.