ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಗೆ ಬಂಡವಾಳ ಹಾಕಿರುವ ಶಂಕೆಯ ಮೇರೆಗೆ ನಗರದ ಉದ್ಯಮಿಯೊಬ್ಬರ ಮನೆ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು, (ಮಾ.21): ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಹಿಂದೆ ಕೆಲ ಪತ್ರಕರ್ತರು ಇದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಇದಕ್ಕೂ ಮುಂಚೆ ಮಹಾನಾಯಕನ ಕೈವಾಡವಿದೆ ಎನ್ನಲಾಗಿತ್ತು. ಆದ್ರೆ, ಇದೀಗ ಉದ್ಯಮಿಯೊಬ್ಬರು ಇದ್ದಾರಾ ಎನ್ನುವ ಶಂಕೆ ವ್ಯಕ್ತವಾಗಿದೆ.
ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಲಾಗಿದ್ದು, ಎಸ್ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಶಿವಕುಮಾರ್ ಎನ್ನುವ ಉದ್ಯಮಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದೆ. ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಶಂಕಿತ ವ್ಯಕ್ತಿಗಳು ಈ ಉದ್ಯಮಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದೆ.
‘ಸೀಡಿ ಗ್ಯಾಂಗ್’ನ ಬಗ್ಗೆ ಬಾಯ್ಬಿಟ್ಟ ಬಾಯ್‌ಫ್ರೆಂಡ್!
ಶಂಕಿತರಿಗೆ ಹಣಕಾಸು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಈ ಉದ್ಯಮಿ ಕಲ್ಪಿಸಿದ್ದ ಎಂದು ಹೇಳಲಾಗುತ್ತಿದೆ. ಈ ಕುರಿತು ಮಾಹಿತಿ ಖಚಿತವಾಗುತ್ತಿದ್ದಂತೆಯೇ ದಾಳಿ ನಡೆಸಿ 2 ಗಂಟೆಗಳ ಕಾಲ ಪರಿಶೀಲನೆ ನಡೆಸಿದೆ.
ದಾಳಿ ವೇಳೆ ಉದ್ಯಮಿ ಶಿವಕುಮಾರ್ ಮನೆಯಲ್ಲಿ ಪೆನ್ ಕ್ಯಾಮರಾ, ಎರಡು ಸಿಮ್ ಕಾರ್ಡ್ ಮತ್ತು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಉದ್ಯಮಿ ಕೂಡ ಸ್ಟಿಂಗ್ ಮಾಡ್ತಿದ್ನಾ ಅನ್ನೋ ಅನುಮಾನ ಹುಟ್ಟಿದೆ.
CD ಕೇಸ್: ರಮೇಶ್ ಜಾರಕಿಹೊಳಿಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಬಿಜೆಪಿ
ಈ ಉದ್ಯಮಿ ಶಿವಕುಮಾರ್ ಕಳೆದ ಮೂರ್ನಾಲ್ಕು ತಿಂಗಳಿನಿಂದ ಶಂಕಿತ ಆರೋಪಿ ನರೇಶ್ ಜೊತೆಗೆ ಟಚ್ ನಲ್ಲಿರುವುದು ಸಿಡಿಆರ್ ನಲ್ಲಿ ಕನ್ಫರ್ಮ್ ಆಗಿದೆ.