ವಿವಿ ಕುಲಪತಿ ಹುದ್ದೆ ತೆಗೆಸಿ ಕೊಡುವುದಾಗಿ ವಂಚಿಸಿದ ರಾಮಸೇನೆ ಸಂಸ್ಥಾಪಕ ಬಂಧನ/ ಮಂಗಳೂರಿನಲ್ಲಿ ರಾಮಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಬಂಧನ ರಾಯಚೂರು ವಿವಿಯ ಕುಲಪತಿ ಹುದ್ದೆ ತೆಗೆಸಿಕೊಡುವುದಾಗಿ ವಂಚನೆ/ ಮಂಗಳೂರಿನ ಕಂಕನಾಡಿ ನಗರ ಠಾಣಾ ಪೊಲೀಸರಿಂದ ಆರೋಪಿ ಬಂಧನ
ಮಂಗಳೂರು(ಮಾ. 29) ವಿವಿ ಕುಲಪತಿ ಹುದ್ದೆ ಕೊಡುವುದಾಗಿ ವಂಚಿಸಿದ ರಾಮಸೇನೆ ಸಂಸ್ಥಾಪಕನ ಬಂಧನವಾಗಿದೆ. ಮಂಗಳೂರಿನಲ್ಲಿ ರಾಮಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಬಂಧನವಾಗಿದೆ.
ರಾಯಚೂರು ವಿವಿಯ ಕುಲಪತಿ ಹುದ್ದೆ ತೆಗೆಸಿಕೊಡುವುದಾಗಿ ವಂಚನೆ ಮಾಡಿದ್ದ ಮಾಡಿದ್ದ ಆರೋಪ ಕೇಳಿಬಂದಿತ್ತು. ಮಂಗಳೂರಿನ ಕಂಕನಾಡಿ ನಗರ ಠಾಣಾ ಪೊಲೀಸರು ಅತ್ತಾವರರನ್ನು ವಶಕ್ಕೆ ಪಡೆದಿದ್ದಾರೆ.
undefined
ಮಂಗಳೂರು ವಿವಿಯ ಪ್ರಾಧ್ಯಾಪಕರೊಬ್ಬರಿಂದ 17.5ಲಕ್ಷ ಪಡೆದಿದ್ದ ಪ್ರಸಾದ್ ಅತ್ತಾವರ ಕುಲಪತಿ ಹುದ್ದೆ ತೆಗೆಸಿಕೊಡಲು 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ ಗಣ್ಯ ವ್ಯಕ್ತಿಗಳ ಜೊತೆಗಿನ ಫೋಟೋ ತೋರಿಸಿ ಪ್ರಸಾದ್ ವಂಚನೆ ನಡೆಸುತ್ತಿದ್ದ.
ಮಾಜಿ ಶಾಸಕರ ಪುತ್ರನಿಗೂ ಬೆತ್ತಲೆ ವಿಡಿಯೋ ತೋರಿಸಿ ವಂಚಿಸಿದ್ದರು
ಹಣ ವಾಪಾಸ್ ಕೇಳಿದಾಗ ದುಡ್ಡು ಕೊಟ್ಟವರಿಗೆ ಪ್ರಸಾದ್ ಅವಾಜ್ ಹಾಕಿದ್ದ. ವಿವೇಕ್ ಆಚಾರ್ಯ ಎಂಬವರ ದೂರಿನ ಆಧಾರದಲ್ಲಿ ಪ್ರಸಾದ್ ಬಂಧನವಾಗಿದೆ.
ಈ ಹಿಂದೆ ಶ್ರೀರಾಮ ಸೇನೆ ರಾಜ್ಯ ಸಂಚಾಲಕನಾಗಿ ಪ್ರಸಾದ್ ಕೆಲಸ ಮಾಡಿದ್ದರು. ಬಳಿಕ ಅಲ್ಲಿಂದ ಹೊರಬಂದು ತನ್ನದೇ ಆದ ರಾಮ ಸೇನಾ ಸಂಘಟನೆ ಕಟ್ಟಿದ್ದ ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿಯೂ ಆಕ್ಟೀವ್ ಇದ್ದರು. ಮಂಗಳೂರು ಉತ್ತರ, ಪೂರ್ವ ಠಾಣೆಗಳಲ್ಲಿ ಈತನ ವಿರುದ್ದ ಹಲವು ಪ್ರಕರಣ ದಾಖಲಾಗಿದ್ದ ಸದ್ಯ ಕಂಕನಾಡಿ ಠಾಣೆಯಲ್ಲಿ ಪ್ರಸಾದ್ ವಿರುದ್ದ ರೌಡಿಶೀಟರ್ ಪಟ್ಟಿ ತೆರೆದುಕೊಂಡಿದೆ.