ಪಾರ್ಟಿ ಮೇಲೆ ದಾಳಿ: ಮೋಜು-ಮಸ್ತಿ ಮಾಡುತ್ತಿದ್ದ 6 ಯುವತಿಯರು, 19 ಯುವಕರು ಅರೆಸ್ಟ್

By Suvarna News  |  First Published Jun 21, 2020, 4:09 PM IST

ಕೋವಿಡ್19 ನಿಯಮ ಉಲ್ಲಂಘಿಸಿ ಮೋಜು-ಮಸ್ತಿ ಮಾಡುತ್ತಿದ್ದ 6 ಯುವತಿಯರು, 19 ಯುವಕರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ರಾಮನಗರ, (ಜೂನ್.21): ಜಿಲ್ಲೆಯ ಅವ್ವೇರಹಳ್ಳಿ ರೆಸಾರ್ಟ್‌ವೊಂದರಲ್ಲಿ ಕೋವಿಡ್ 19 ನಿಯಮ ಉಲ್ಲಂಘಿಸಿ ರಾತ್ರಿ ಪಾರ್ಟಿ ಮಾಡುತ್ತಿದ್ದ 26 ಮಂದಿಯನ್ನು ರಾಮನಗರ ಗ್ರಾಮಾಂತ ಪೊಲೀಸರು ಬಂಧಿಸಿದ್ದಾರೆ.

ರಾಮನಗರದ ಅವ್ವೇರಹಳ್ಳಿ ರೆಸಾರ್ಟ್‌ನಲ್ಲಿ ಬೆಂಗಳೂರು ಮೂಲದ  6 ಮಂದಿ ಯುವತಿಯರು ಮತ್ತು 19 ಯುವಕರು ಮದ್ಯ ಸೇವಿಸಿ ಮೋಜು ಮಸ್ತಿ ಮಾಡುತ್ತಿದ್ದರು. 

Tap to resize

Latest Videos

ಉದ್ಯಮಿ ಅಂತ ಬಿಲ್ಡಪ್ ಕೊಟ್ಟು ಯುವತಿಯರ ಸ್ನೇಹ ಬೆಳೆಸ್ತಿದ್ದ ಆಸಾಮಿಯ ಅಸಲಿ ಮುಖ ಬಯಲು

ಈ ಖಚಿತ ಮಾಹಿತಿ ಮೇರೆಗೆ ಶನಿವಾರ ತಡರಾತ್ರಿ ಪೊಲೀಸರು ಮೇಲೆ ದಾಳಿ ಮಾಡಿದ್ದು, ರೆಸಾರ್ಟ್ ಮಾಲೀಕ ಸೇರಿದಂತೆ 26 ಜನರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಸಿಸಿ 188,269 ಮತ್ತು ಡಿಎಂ ಆಕ್ಟ್-2005 ಅಡಿಯಲ್ಲಿ ದೂರು ದಾಖಲಾಗಿದೆ.

click me!