ವಿಮಾನ ನಿಲ್ದಾಣಕ್ಕೆ ಬಂದಿಳೀದ ರೈಲ್ವೆ ಸಿಬ್ಬಂದಿ ಕಿಡ್ನಾಪ್/ ಕಾರಿನಲ್ಲಿ ಕರೆದುಕೊಂಡು ಹೋಗಿ ದರೋಡೆ/ ಬೆಂಗಳೂರಿನಿಂದ ಕಡೂರಿಗೆ ಕರೆದುಕೊಂಡು ಹೋದರು/ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡರು.
ಬೆಂಗಳೂರು (ಆ. 12) ಬೆಂಗಳೂರು ರೈಲ್ವೆ ವಿಭಾಗದ ಲೋಕೋ ಪೈಲಟ್ ಒಬ್ಬರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಿಂದ ಅಪಹರಣ ಮಾಡಿ, ದರೋಡೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ನಡೆದ ಘಟನೆ ಬೆಳಕಿಗೆ ಬಂದಿದೆ.
ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಸೋನು ಕುಮಾರ್ ಸಿಂಗ್ ಅವರ ದೊರೋಡೆ ಮಾಡಲಾಗಿದೆ. ಮಂಗಳವಾರ ಬೆಳಗಿನ ಜಾವ 1.20ರ ಸುಮಾರಿಗೆ ಬಿಹಾರದ ಪಾಟ್ಬಾದಿಂದ ಸಿಂಗ್ ಅವರು ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಬಳಿಕ ಕೆಆರ್.ಪುರಂಗೆ ತೆರಳಲು ಕ್ಯಾಬ್ ವೊಂದನ್ನು ಬುಕ್ ಮಾಡಿಕೊಂಡಿದ್ದಾರೆ.
ಜಾಲಹಳ್ಳಿ ಎಟಿಎಂ ಒಡೆಯಲು ಈ ಕಳ್ಳರು ಮಾಡಿದ ಮಾಸ್ಟರ್ ಪ್ಲಾನ್
ಕ್ಯಾಬ್ ಬಂದ ನಂತರ ಅಲ್ಲಿಂದ ಹೊರಟಿದ್ದಾರೆ. 2 ಕಿಮೀ ತೆರಳಿದ ಮೇಲೆ ಟೀ ಕುಡಿಯಬೇಕೆಂದು ಚಾಲಕ ಕಾರು ನಿಲ್ಲಿಸಿದ್ದಾನೆ. ಬಳಿಕ ಮತ್ತೊಬ್ಬ ವ್ಯಕ್ತಿ ಕಾರು ಹತ್ತಿದಾಗ ಸಿಂಗ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಚಾಲಕ ಅವರ ಮನವೊಲಿಸಿದ್ದಾನೆ. ಬಳಿಕ ಇಬ್ಬರೂ ವ್ಯಕ್ತಿಗಳು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಏನೋ ಮಾತನಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಸಿಂಗ್ ತಿಳಿಸಿದ್ದಾರೆ.
ಕಾರು ನಿಲ್ಲಿಸಿ ಸಿಂಗ್ ನನ್ನ ಕೈಕಾಲುಗಳನ್ನು ಕಟ್ಟಿಹಾಕಲಾಗಿದೆ. ಬಳಿಕ ತುಮಕೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಬಲಾತ್ಕಾರದಿಂದ ಎಟಿಎಂ ಕಾರ್ಡ್ ತೆಗೆದುಕೊಂಡು 20,000 ರೂ. ಡ್ರಾ ಮಾಡಿ ಅದನ್ನು ಕಾರು ಚಾಲಕನಿಗೆ ನೀಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಇದಾದ ಮೇಲೆ ಬಿಹಾರದಲ್ಲಿರುವ ನನ್ನ ಕುಟುಂಬಕ್ಕೆ ಕರೆ ಮಾಡಿ 2 ಲಕ್ಷ ರೂ. ಗೂಗಲ್ ಪೇ ಮಾಡುವಂತೆ ತಿಳಿಸು ಎಂದು ಬೆದರಿಕೆ ಹಾಕಿದ್ದಾರೆ. ನಮ್ಮ ಬಳಿ ಅಷ್ಟು ಹಣವಿಲ್ಲ ಎಂದಿದ್ದಕ್ಕೆ ಒಂದು ಲಕ್ಷ ರೂ. ಹಣ ತರಿಸಿಕೊಂಡು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ. ನನ್ನ ಪೋನ್ ಮತ್ತು ರೈಲ್ವೆ ಇಲಾಖೆ ನೀಡಿದ್ದ ಸಿಯುಜಿ ಫೋನ್ ಕೂಡ ಕಸಿದುಕೊಂಡಿದ್ದಾರೆ.
ನನ್ನನ್ನು ಕಡೂರು ಬಳಿ ಕರೆದುಕೊಂಡು ಹೋಗಿ ಕಾರಿನಲ್ಲಿಯೇ ಬಿಟ್ಟು ಡಾಬಾ ವೊಂದರಲ್ಲಿ ಇಬ್ಬರು ಮದ್ಯ ಸೇವನೆ ಶುರು ಮಾಡಿದ್ದಾರೆ. ಈ ವೇಳೆ ಅವಕಾಶ ಬಳಸಿ ನಾನು ತಪ್ಪಿಸಿಕೊಂಡು ದ್ವಿಚಕ್ರ ವಾಹನ ಒಂದನ್ನು ಏರಿ ಕಡೂರು ಪೊಲೀಸ್ ಠಾಣೆಗೆ ತೆರಳಿದ್ದೆ. ಬಳಿಕ ಬೆಂಗಳೂರಿಗೆ ವಾಪಸ್ ಬಂದೆ ಎಂದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.