* ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ
* ಯುವತಿಯನ್ನ ಪ್ರೇಮಿಸಿದ್ದ ಭೀಮೇಶ್ ಕಳೆದ ಕೆಲ ದಿನಗಳ ಹಿಂದೆ ಊರು ಬಿಟ್ಟಿದ್ದ
* ಪೊಲೀಸ್ ಅಧಿಕಾರಿಯ ಹೆಸರು ಬರೆದಿಟ್ಟು ಆತ್ಮಹತ್ಯೆ
ರಾಯಚೂರು(ಸೆ. 07) ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೆ ನೀಡಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅನ್ಯ ಜಾತಿಯ ಯುವತಿಯನ್ನ ಪ್ರೀತಿಸಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭೀಮೇಶ್ ನಾಯಕ( 26) ನೇಣಿಗೆ ಶರಣಾಗಿದ್ದಾನೆ. ರಾಯಚೂರು ತಾ. ಗಾಣದಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಯುವತಿಯನ್ನ ಪ್ರೇಮಿಸಿದ್ದ ಭೀಮೇಶ್ ಕಳೆದ ಕೆಲ ದಿನಗಳ ಹಿಂದೆ ಪ್ರೀತಿಸಿದ ಯುವತಿಯೊಂದಿಗೆ ಊರು ಬಿಟ್ಟಿದ್ದ. ಇಡಪನೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು.
ತೀರ್ಥಹಳ್ಳಿ; ಪಾಪಿ ಸಾಕುತಂದೆ.. ಮಗಳ ಮೇಲೆ ನಿರಂತರ ಅತ್ಯಾಚಾರ
ಇಬ್ಬರು ಮದುವೆ ಆಗಿ ಎಸ್ಪಿ ಕಚೇರಿಗೆ ಬಂದಿದ್ದರು. ಇಬ್ಬರನ್ನೂ ಠಾಣೆಗೆ ಕರೆತಂದು ಪ್ರೇಮಿಗಳನ್ನ ಪಿಎಸ್ಐ ಗಂಗಪ್ಪ ಬೇರೆ ಬೇರೆ ಮಾಡಿದ್ದರು ಎಂಬ ಆರೋಪ ಇದೆ. ಇಡಪನೂರು ಪಿಎಸ್ಐ ಗಂಗಪ್ಪ ವಿರುದ್ಧ ಡೆತ್ ನೋಟ್ ಬರೆದಿಟ್ಟು ಯುವಕ ಸುಸೈಡ್ ಮಾಡಿಕೊಂಡಿದ್ದಾನೆ.
ಡೆತ್ ನೋಟ್ ನಲ್ಲಿ ಯುವತಿ ಕುಟುಂಬಸ್ಥರ ಹೆಸರುಗಳು ಹಾಗೂ ಪಿಎಸ್ ಐ ಹೆಸರು ಬರೆದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿಸಿದ್ದ ಯುವತಿಗೆ ಇಂದು ಬೇರೆಡೆ ಮದುವೆ ಮಾಡಿದಕ್ಕೆ ನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾಣದಾಳ ಗ್ರಾಮದ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.