ತೀರ್ಥಹಳ್ಳಿ; ಬಾಲಕಿ ಕಾಡಿದ ಕಾಮುಕ ಸಾಕುತಂದೆ, ಶಿಕ್ಷಕಿಯಿಂದ ಬೆಳಕಿಗೆ ಬಂದ ಘೋರ ಪ್ರಕರಣ

By Suvarna News  |  First Published Sep 7, 2021, 3:32 PM IST

* ತೀರ್ಥಹಳ್ಳಿಯಿಂದ ಘೋರ ಪ್ರಕರಣ ವರದಿ
* ಸಾಕುತಂದೆಯಿಂದ  ಮಗಳ ಮೇಲೆ ಲೈಂಗಿಕ ದೌರ್ಜನ್ಯ
* ಬಾಲಕಿಯ ಮೇಲೆ ದೌರ್ಜನ್ಯ ನಡೆಸಿದ ಎದುರುಮನೆ ಯುವಕ
* ಮಾಳೂರು ಠಾಣೆಯಲ್ಲಿ ಪ್ರಕರಣ


ತೀರ್ಥಹಳ್ಳಿ(ಸೆ. 07)  ಹೆತ್ತ ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಸುದ್ದಿ ಕೇಳಿ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ರಾಜಸ್ಥಾನದ ಜೋಧಪುರದಿಂದ ವರದಿಯಾಗಿತ್ತು. ಇದೀಗ ತೀರ್ಥಹಳ್ಳಿಯಿಂದ ಅಂತದ್ದೇ ಒಂದು ಘೋರ ಸುದ್ದಿ ಬಂದಿದೆ.

ಸಾಕುತಂದೆಯೇ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ . ಸಾಲದ್ದಕ್ಕೆ ಎದುರು ಮನೆ ಯುವಕನು ಕೂಡ ಬಾಲಕಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ.

Tap to resize

Latest Videos

ಕ್ಯಾಮರಾ ಮುಂದೆ ಬೆತ್ತಲಾಗಿ ಲೈವ್ ಬಾ ಎನ್ನುತ್ತಿದ್ದ ವಿದೇಶಿ ಪತಿರಾಯ

ಘಟನೆ ಕುರಿತಂತೆ ಮಾಳೂರು ಠಾಣೆಯಲ್ಲಿ ದೂರು ದಾಖಲಾಗಿದೆ . ಲೈಂಗಿಕ ದೌರ್ಜನ್ಯ ನಡೆಸಿದ ಸಾಕು ತಂದೆ ಮಂಜುನಾಥ್ ಹಾಗು ಎದುರುಮನೆ ಯುವಕ ಹಾಗು ಮಂಜು ಸಂಬಂಧಿ ರಾಮುನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೊದಲ ಪತ್ನಿ ತೊರೆದಿದ್ದ ಮಂಜುನಾಥ್ ಕೂಲಿ ಕೆಲಸ ಮಾಡುತ್ತಿದ್ದು , ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾದ ವಿಧವೆಯನ್ನು ಮದುವೆಯಾಗಿದ್ದ . ಎರಡನೇ ಪತ್ನಿಗೆ ಹೆಣ್ಣು ಮಗುವಿತ್ತು . ಆ ಅಪ್ರಾಪ್ತ ಬಾಲಕಿಯ ಮೇಲೆ ಕಣ್ಣು ಹಾಕಿದ ಮಂಜುನಾಥ್ ಪತ್ನಿ ಇಲ್ಲದ ಸಂದರ್ಭದಲ್ಲಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಶುರು ಮಾಡಿದ .

ಇದಲ್ಲದೆ  ಎದುರು ಮನೆ ಯುವಕ ರಾಮು ಕೂಡ ಬಾಲಕಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ . ಆರನೇ ತರಗತಿ ಓದುತ್ತಿರುವ ಬಾಲಕಿಯಲ್ಲಾದ ಬದಲಾವಣೆಯನ್ನು ಗಮನಿಸಿದ ಶಿಕ್ಷಕಿಗೆ ಅನುಮಾನ ಬಂದಿದೆ. ನಂತರ ಪ್ರಕರಣ ಬೆಳಕಿಗೆ ಬಂದಿದೆ . ತಕ್ಷಣ ಅಲರ್ಟ್ ಆದ ಮಾಳೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಸದ್ಯ ನ್ಯಾಯಾಲಯ ಆರೋಪಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದೆ.

click me!