Raichur ಅಳುತ್ತಿದ್ದ ಮಗುವಿನ ಬಾಯಿ-ಮೂಗು ಮುಚ್ಚಿದ ತಂದೆ: ಉಸಿರುಗಟ್ಟಿ 14 ತಿಂಗಳ ಮಗು ಸಾವು

By Sathish Kumar KH  |  First Published Sep 5, 2023, 3:59 PM IST

ತಾಯಿ ಇಲ್ಲದೇ ಅಳುತ್ತಿದ್ದ ಮಗುವನ್ನು ಸುಮಾಧಾನ ಮಾಡಲಾಗದ ತಂದೆಯೇ ಬಾಯಿ-ಮೂಗು ಮುಚ್ಚಿ ಸ್ವಂತ ಮಗುವನ್ನೇ ಕೊಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.


ರಾಯಚೂರು (ಸೆ.05): ಗಂಡ ಹೆಂಡತಿಯ ನಡುವೆ ಕೂಸು ಬಡವಾಯ್ತು ಎಂಬ ಗಾದೆಯನ್ನು ನಾವು ಕೇಳಿದ್ದೇವೆ. ಆದರೆ, ಇಲ್ಲಿ ಗಂಡ- ಹೆಂಡತಿ ಜಗಳಕ್ಕೆ 14 ತಿಂಗಳ ಮಗು ದಾರುಣವಾಗಿ ಬಲಿಯಾಗಿರುವ ದುರ್ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಸ್ವತಃ ತಂದೆಯೇ ಮಗು ಜೋರಾಗಿ ಅಳುತ್ತಿರುವುದನ್ನು ತಡೆಯಲು ಬಾಯಿ ಮುಚ್ಚಿದ್ದು, ಮಗು ಉಸಿರುಗಟ್ಟಿ ಸಾವನ್ನಪ್ಪಿದೆ.

ಹೌದು, 14 ತಿಂಗಳ ಹಸುಗೂಸನ್ನು‌ ತಂದೆಯೇ ಕೊಲೆ ಮಾಡಿದ್ದಾರೆ. ಹೋಗೆ ಕೊಲೆ ಮಾಡಿದ ಮಗುವಿನ ಮೃತ ದೇಹವನ್ನು ಯಾರಿಗೂ ಅನುಮಾನ ಬರಬಾರದು ಎಂದು ಕಲ್ಲಿನ ರಾಶಿಯಲ್ಲಿ ಮುಚ್ಚಿಟ್ಟು ಬಂದಿದ್ದಾನೆ. ಈ ದುರ್ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾ. ಕನಸಾವಿ ಗ್ರಾಮದಲ್ಲಿ ನಡೆದಿದೆ. ಮೃತ ಮಗುವನ್ನು ಅಭಿನವ (14 ತಿಂಗಳು) ಎಂದು ಹೇಳಲಾಗಿದೆ. ಇನ್ನು ಕೊಲೆ ಆರೋಪದಡಿ ಮಗುವಿನ ತಂದೆ ಮಹಾಂತೇಶ್‌ನನ್ನು ಮುದಗಲ್ ಠಾಣೆಯ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

Tap to resize

Latest Videos

ಕರ್ನಾಟಕದ ಪ್ರಸಿದ್ಧ ಬಾಕ್ಸರ್ ಮಲ್ಪೆಯ ವಿರಾಜ್‌ ಮೆಂಡನ್‌ ಆತ್ಮಹತ್ಯೆ

ಆರೋಪಿ ಮಹಾಂತೇಶ್‌ ತನ್ನ ಪತನಿ ಜೊತೆಗೆ ಆಗಾಗ್ಗೆ ಜಗಳ ಮಾಡುತ್ತಿದ್ದನು. ಗಂಡನ ಜಗಳದಿಂದ ಬೇಸತ್ತ ಪತ್ನಿ ಮಗುವನ್ನು ಕರೆದುಕೊಂಡು ತನ್ನ ತವರುಮನೆ ಕನಸಾವಿ ಗ್ರಾಮಕ್ಕೆ ಹೋಗಿದ್ದಳು. ಇನ್ನು ಪತ್ನಿ ಬಹಳ ದಿನವಾದರೂ ಬರಲಿಲ್ಲ ಎಂಬ ಕೋಪದಿಂದ ಬಾಗಲಕೋಟೆಯ ಇಳಕಲ್‌ನಿಂದ ಮಹಾಂತೇಶ್‌,  ಹೆಂಡತಿಯ ತವರು ಮನೆಗೆ ಹೋಗಿದ್ದಾನೆ. ಈ ವೇಳೆ ಮನೆಗೆ ಬರುವಂತೆ ಹೇಳಿದ್ದಾನೆ. ಆಗ ತಾನು ಬರುವುದಿಲ್ಲ ಎಂದು ಹೆಂಡತಿ ಹೇಳಿದ್ದರಿಂದ ಪುನಃ ಅಲ್ಲಿಯೀ ಜಗಳ ಮಾಡಿದ್ದಾನೆ. 

ಇನ್ನು ಇಷ್ಟಕ್ಕೇ ಸುಮ್ಮನಾಗದ ಕಿರಾತಕ ಮಹಾಂತೇಶ್‌ ನನ್ನ ಮಗುವನ್ನ ನನಗೆ ಕೊಡು. ನಾನು ಊರಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಮಗುವನ್ನು ತಾಯಿಯಿಂದ ಕಿತ್ತುಕೊಂಡಿದ್ದಾನೆ. ಇನ್ನು ತಾಯಿ ಇಲ್ಲದೇ ಮಗು ಜೋರಾಗಿ ಅಳಲು ಪ್ರಾರಂಭಿಸಿದೆ. ಅಳುವುದನ್ನು ಲೆಕ್ಕಿಸದೇ ಮಗುವನ್ನು ಎತ್ತಿಕೊಂಡು ಬಂದ ಮಹಾಂತೇಶ್‌ ಮಗು ಜೋರಾಗಿ ಅಳುವುದನ್ನು ಸಹಿಸಲಾಗದೇ ಮಗುವಿನ ಮೂಗು, ಬಾಯಿ ಮುಚ್ಚಿದ್ದಾನೆ. ಕೆಲವೇ ಕ್ಷಣಗಳಲ್ಲಿ 14 ತಿಂಗಳ ಹಸುಗೂಸು ಅಭಿನವ್‌ ಉಸಿರುಗಟ್ಟಿ ಸಾವನ್ನಪ್ಪಿದೆ.

Bengaluru: ಸಾವಿನ ಮನೆಯಲ್ಲಿ ಅಳುತ್ತಲೇ ಬಂಗಾರವನ್ನು ಕದ್ದೊಯ್ದ ಕಳ್ಳರು

ಇನ್ನು ಮಗು ಸಾವಿನ ಬೆನ್ನಲ್ಲೇ ಭಯಭೀತನಾದ ಪಾತಿ ತಂದೆ ಮಹಾಂತೇಶ್‌ ಅಲ್ಲಿಯೇ ಇದ್ದ ಕಲ್ಲುಗಳ ಒಳಗೆ ಮಗು ಶವವಿಟ್ಟು ಹೋಗಿದ್ದಾನೆ. ಇನ್ನು ಗಂಡನ ಮನೆಗೆ ಫೋನ್‌ ಮಾಡಿ ಮಗುವಿನ ಬಗ್ಗೆ ವಿಚಾರಿಸಿದಾಗ ಮಹಾಂತೇಶ್‌ ಮಗುವನ್ನು ಕರೆದುಕೊಮಡು ಬಂದಿಲ್ಲ ಎಂದು ಹೇಳಿದ್ದಾರೆ. ಆಗ, ಹೆಂಡತಿ ಮನೆಯವರು ತಮ್ಮ ಗ್ರಾಮದಲ್ಲಿ ಎಲ್ಲಾದರೂ ಮಗುವನ್ನು ಬಿಟ್ಟು ಹೋಗಿದ್ದಾನೆಯೇ ಎಂದು ಹುಡುಕಾಡಿದ್ದಾರೆ. ಬಸ್‌ ನಿಲ್ದಾಣದ ಹಿಂಬದಿಯಲ್ಲಿ ಕಲ್ಲಿನ ರಾಶಿ ಮಾಡಿದ್ದನ್ನು ನೋಡಿದ್ದಾರೆ. ಆಗ, ಕಲ್ಲುಗಳನ್ನು ತೆಗೆದು ನೋಡಿದರೆ ಮಗುವಿನ ಮೃತದೇಹ ಕಂಡುಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಆರೋಪಿ ಮಹಾಂತೇಶ್ ನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ಮಾಡಿದ್ದ ವಿಚಾರವನ್ನು ಬಾಯಿಬಿಟ್ಟಿದ್ದಾನೆ. ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

click me!