ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ವಿವಾಹೇತರ ಸಂಬಂಧದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪುರುಷನ ಪತ್ನಿ ಮತ್ತು ಅವರ ಕುಟುಂಬ ಸದಸ್ಯರು ಗಲಾಟೆ ಮಾಡಿ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ.
ಹೈದರಾಬಾದ್ (ಸೆ.5): ಪತಿಯ ವಿವಾಹೇತರ ಸಂಬಂಧ ಗೊತ್ತಾದ ಬಳಿಕ ಪತ್ನಿ ಮಾಡಿದ್ದೇನು ಅನ್ನೋದು ನೋಡಿದ್ರೆ ನಿಮಗೆ ಅಚ್ಚರಿಯಾಗೋದು ಖಂಡಿತ. ಪತಿ ಹಾಗೂ ಆತನ ಲವರ್ ಇಬ್ಬರನ್ನೂ ಕಟ್ಟಿ ಹಾಕಿದ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಗ್ರಾಮದ ರಸ್ತೆ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯಲ್ಲಿ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಪತ್ನಿಗೆ ಗಂಡನ ವಿವಾಹೇತರ ಸಂಬಂಧದ ಬಗ್ಗೆ ಅರಿವಿತ್ತು. ಇದನ್ನು ತನ್ನ ಕುಟುಂಬದವರಿಗೂ ತಿಳಿಸಿದ್ದಳು. ರೆಡ್‌ಹ್ಯಾಂಡ್ ಆಗಿ ಗಂಡ ಆತನ ಲವರ್ ಜೊತೆ ಸಿಕ್ಕಿ ಹಾಕಿಕೊಂಡ ಬಳಿಕ, ಇಬ್ಬರನ್ನೂ ಭಾಗಶಃ ಕಟ್ಟಿಹಾಕಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. 30 ವರ್ಷದ ಹುಸೇನ್, ಹಸ್ನಾಬಾದ್ ಮೂಲದ 32 ವರ್ಷದ ಶಬಾನಾ ಎನ್ನುವ ಮಹಿಳೆಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಎನ್ನುವುದು ಹುಸೇನ್‌ನ ಪತ್ನಿ ನಜಿಯಾಗೆ ಗೊತ್ತಾಗಿತ್ತು. ಈ ಸಂಬಂಧ ತಿಳಿದ ನಾಜಿಯಾ ಮತ್ತು ಆಕೆಯ ಕುಟುಂಬಸ್ಥರು, ಹುಸೇನ್ ಹಾಗೂ ಶಬಾನಾರ ಕೈಗಳನ್ನು ಕಟ್ಟಿ ಜಿಲ್ಲೆಯ ಲೇಪಾಕ್ಷಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ.
ಕೈಗಳನ್ನು ಕಟ್ಟಿ ಬೀದಿಯಲ್ಲಿ ಮೆರವಣಿಗೆ ಮಾಡಿದ ಬಳಿಕ, ಆಟೋರಿಕ್ಷಾದಲ್ಲಿ ಇಬ್ಬರನ್ನೂ ತುಂಬಿಕೊಂಡು ಪೊಲೀಸ್ ಸ್ಟೇಷನ್‌ಗೆ ಹೋಗುವ ವೇಳೆ ಹುಸೇನ್ ಓಡಿ ಹೋಗಿದ್ದಾನೆ. 'ಶಬಾನಾ ಎನ್ನುವ ಮಹಿಳೆಯೊಂದಿಗೆ ಹುಸೇನ್ ವಿವಾಹೇತರ ಸಂಬಂಧವನ್ನು ಹೊಂದಿದ್ದ. ಇದೇ ಕಾರಣಕ್ಕಾಗು ಹುಸೇನ್‌ನ ಪತ್ನಿ ನಜಿಯಾ, ಶಬಾನಾ ಉಳಿದುಕೊಂಡಿದ್ದ ಪ್ರದೇಶಕ್ಕೆ ಹೋಗಿದ್ದಳು. ಅಲ್ಲಿ ಇಬ್ಬರ ಕೈಗಳನ್ನೂ ಕಟ್ಟಿಹಾಕಿದ ಈಕೆ, ಇಡೀ ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾಳೆ' ಎಂದು ಹಿಂದುಪುರ ಉಪವಿಭಾಗದ ಪೊಲೀಸ್ ಅಧಿಕಾರಿ ಪಿ.ಕಾಂಜಾಕ್ಷನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. .
ಹುಸೇನ್ ಮತ್ತು ಶಬಾನಾ ಅವರನ್ನು ಥಳಿಸುತ್ತಿರುವ ವೀಡಿಯೊವನ್ನು ನಾಜಿಯಾ ಅವರ ಕುಟುಂಬ ಸದಸ್ಯರು ಚಿತ್ರೀಕರಿಸಿದ್ದಾರೆ ಮತ್ತು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಡ್‌ರೂಮ್ ಸೀನ್‌ಗಾಗಿಯೇ 1 ಕೋಟಿ ಜಾಸ್ತಿ ಸಂಭಾವನೆ ಕೇಳಿದ್ರಾ ತಮನ್ನಾ?
ಈ ಸಂಬಂಧ, 506 (ಅಪರಾಧದ ಬೆದರಿಕೆ), 355 (ಆಕ್ರಮಣ ಅಥವಾ ವ್ಯಕ್ತಿಯನ್ನು ಅವಮಾನಿಸಲು ಬಲವನ್ನು ಬಳಸುವುದು), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು ನಾಜಿಯಾ ಮತ್ತು ಅವರ ಕುಟುಂಬದ ವಿರುದ್ಧ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಶೂನ್ಯ ಎಫ್‌ಐಆರ್ ದಾಖಲು ಮಾಡಿದ್ದಾರೆ. ಪೊಲೀಸರ ಪ್ರಕಾರ ಶಬಾನಾ ಎರಡು ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟಿದ್ದರು.
ಉದಯನಿಧಿ ಸ್ಟ್ಯಾಲಿನ್ ಟೀಕೆಯನ್ನು ಹಿಟ್ಲರ್ ಮಾತಿಗೆ ಹೋಲಿಸಿದ ಬಿಜೆಪಿ!