
ಕೊಪ್ಪಳ/ರಾಯಚೂರು, (ಜುಲೈ.04): ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪೂರ ಗ್ರಾಮದ ಶಾಲೆಯ ಕಾಮುಕ ಶಿಕ್ಷಕ ಕೊನೆಗೆ ಸಿಕ್ಕಿಬಿದ್ದಿದ್ದಾನೆ. ಗೋವಾದಲ್ಲಿ ಅವಿತುಕೊಂಡಿದ್ದ ಕಾಮುಕನನ್ನು ಕಾರಟಗಿ ಪೊಲೀಸರು ಬಂಧಿಸುಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಶಿಕ್ಷಕ ಅಜುರುದ್ದೀನ್ ಕಾಮಪುರಾಣಗಳು ಬಗೆದಷ್ಟು ಬಯಲಾಗುತ್ತಿವೆ.
ಹೌದು....ಈತ ಶಿಕ್ಷಕ ಅಲ್ಲ ಕಾಮ ರಸಿಕ, ರಸಿಕರ ರಾಜ. ಕಂಡ-ಕಂಡ ಮಹಿಳೆಯರನ್ನ ಮೋಡಿ ಮಾಡಿ ಬಲೆಗೆ ಹಾಕಿಕೊಂಡು ಅವರ ಜೊತೆ ಸರಸ ಸಲ್ಲಾಪದಲ್ಲಿ ತೇಲಾಡುತ್ತಾನೆ. ಮಕ್ಕಳನ್ನೂ ಸಹ ಬಿಟ್ಟಿಲ್ಲ..ಗಂಡು ಮಕ್ಕಳ ಗುಪ್ತಂಗದ ಅಳತೆ ಮಾಡಿ ವಿಕೃತ ಆನಂದ ಪಡುತ್ತಿದ್ದ ದೊಡ್ಡ ಕಾಮುಕ. ಇದೀಗ ಅಜುರುದ್ದೀನ್ ಕಾಮಪುರಾಣ ಹಿಂದೆ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಅಲ್ಲದೇ ಕಾಮಚೇಷ್ಠೆ ಬಗ್ಗೆ ಸ್ವತಃ ಈತನ ಹೆಂಡತಿಯೇ ಎರಡು ವರ್ಷದ ಹಿಂದೆಯೇ ಶಿಕ್ಷಣ ಇಲಾಖೆಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ಅದು ಇದೀಗ ಬಹಿರಂಗವಾಗಿದೆ.
ಶಿಕ್ಷಕನ ರಾಸಲೀಲೆ ವಿಡಿಯೋ ವೈರಲ್, ಕಾಮುಕನ ಮತ್ತೊಂದು ಅಸಲಿ ಮುಖ ಬಿಚ್ಚಿಟ್ಟ ಗ್ರಾಮಸ್ಥರು
ಲವ್ ಜಿಹಾದ್ ಆರೋಪ...
ಮನೆಯಲ್ಲಿ ಇಬ್ಬರು ಮಹಿಳೆಯರೊಂದಿಗೆ ಕಾಮದಾಟವಾಡಿದ್ದಾನೆ. ಸಾಲದ್ದಕ್ಕೆ ಮಕ್ಕಳನ್ನ ಮನೆಗೆ ಕರೆಸಿ ವಿದ್ಯಾರ್ಥಿಗಳ ಗುಪ್ತಾಂಗವನ್ನು ಕೋಲಿನಿಂದ ಅಳತೆ ಮಾಡಿ ವಿಡಿಯೋ ಮಾಡಿಕೊಂಡಿದ್ದ..ಗುಪ್ತಾಂಗ ಅಳತೆ ಮಾಡುವ ವೇಳೆ ಲಾಯಿಲ ಇಲ್ಲಲ್ಲಾ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಹಿಂದು ಮಹಿಳೆಯರೇ ಟಾರ್ಗೆಟ್
ಹೌದು...ಅಜರುದ್ದೀನ್ ಸಿಂಧನೂರ ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕ. ಆದ್ರೆ, ಕಾರಟಗಿ ಪಟ್ಟಣದ ಜೆ.ಪಿ.ನಗರದಲ್ಲಿ ವಾಸವಿದ್ದ. ಬಣ್ಣ-ಬಣ್ಣ ಮಾತುಗಳನ್ನಾಡಿ ಕೇವಲ ಹಿಂದೂ ಮಹಿಳೆಯರನ್ನ ಪುಸಲಾಯಿಸಿ ಲೈಂಗಿಕವಾಗಿ ಬಳಿಸಿಕೊಂಡಿದ್ದಾನೆ. ಅಲ್ಲದೇ ಮಹಿಳೆಯರೊಂದಿಗೆ ಕಾಮದಾಟವನ್ನು ವಿಡಿಯೋ ಮಾಡಿಕೊಂಡು ಬಳಿಕ ಬ್ಲ್ಯಾಕ್ ಮೇಲ್ ಮಾಡ್ತಾನಂತೆ. ಈ ಬಗ್ಗೆ ಸ್ವತಃ ಸಂತ್ರಸ್ತೆ ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಮಹಿಳೆ ಜತೆ ರಾಸಲೀಲೆ, ಮಕ್ಕಳ ಗುಪ್ತಾಂಗ ಮುಟ್ಟಿ ಆನಂದ: ಶಿಕ್ಷಕನ ಕಾಮದಾಟ ಬಯಲು ಮಾಡಿದ ಚಿಪ್
ದೂರು ನೀಡಿರುವ ಸಂತ್ರಸ್ತೆ ಮಹಿಳೆ ಲವ್ ಜಿಹಾದ್ ಬಗ್ಗೆ ಉಲ್ಲೇಖಿಸಿದ್ದಾರೆ. ಮಹಿಳಾ ಪೋಷಕರನ್ನ ಪುಸಲಾಯಿಸಿ, ಆ ಬಳಿಕ ಲೈಂಗಿಕ ಸಂಪರ್ಕ ಮಾಡುತ್ತಿದ್ದ. ನಂತರ ತನ್ನ ಸಮುದಾಯಕ್ಕೆ ಸೇರಿಸಿಕೊಳ್ಳುತ್ತೇನೆಂದು ಮೈಂಡ್ ವಾಷ್ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಿಕ್ಷಕನ ವಿರುದ್ಧ ಪತ್ನಿ ದೂರು:
ಎರಡು ವರ್ಷದ ಹಿಂದೆಯೇ ಶಿಕ್ಷಕನ ಪತ್ನಿ ಬಿಇಓಗೆ ದೂರು ನೀಡಿದ್ದಾರೆ. 2011ರಲ್ಲಿ ಅಜರುದ್ದೀನ್ ಮದುವೆಯಾಗಿತ್ತು. ಮದುವೆಯಾದರೂ, ವಿಧವೆ. ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತಿದ್ದ. ಈ ಬಗ್ಗೆ ನಾನೇ ನನ್ನ ಪತಿ ಜೊತೆ ಗಲಾಟೆ ಮಾಡಿದ್ದೆ. ಆತನ ಕೃತ್ಯ ನನ್ನ 8 ವರ್ಷದ ಮಗನ ಮೇಲೆ ಪರಿಣಾಮ ಬೀರಿದೆ. ಶಾಲಾ ಅವಧಿಯಲ್ಲೂ ಆತ ರಜೆ ಮಾಡುತ್ತಿದ್ದ. ಲಾಡ್ಜ್ಗೆ ಹೋಗಿ ಮಹಿಳೆಯರ ಜೊತೆ ಕಾಲ ಕಳೆಯುತ್ತಿದ್ದ. ಈ ಮೂಲಕ ಶಿಕ್ಷಣ ಇಲಾಖೆಗೂ ಮೋಸ ಮಾಡಿದ್ದಾನೆ ಎಂದು ಅಜರುದ್ದೀನ್ ಪತ್ನಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ