Yadgiriಯಲ್ಲಿ ಬುದ್ದಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕ

By Suvarna News  |  First Published Jul 3, 2022, 1:18 PM IST

ಯುವತಿ ಗರ್ಭಿಣಿಯಾದ ಹಿನ್ನೆಲೆ ಕಾಣಿಸಿಕೊಂಡ ಹೊಟ್ಟೆ  ನೋವಿನಿಂದ ಕಾಮುಕ ಅತ್ಯಾಚಾರ ಎಸಗಿರುವ ಪ್ರಕರಣ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ.


ಯಾದಗಿರಿ (ಜು.3): ಅತ್ಯಾಚಾರವೆಸಗಿ ಯುವತಿಯನ್ನು ಗರ್ಭಾವತಿ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಯಾದಗಿರಿ ತಾಲೂಕಿನ ಹಳ್ಳಿಯೊಂದರಲ್ಲಿ 5 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಸಂತ್ರಸ್ತೆ ಯುವತಿ ಗರ್ಭಿಣಿಯಾದ ಹಿನ್ನೆಲೆ ಕಾಣಿಸಿಕೊಂಡ ಹೊಟ್ಟೆ  ನೋವಿನಿಂದ  ಆರೋಪಿಯ ನಿಜಬಣ್ಣ ಬಯಲಾಗಿದೆ. 

ಸಂತ್ರಸ್ತೆ ಹೊಟ್ಟೆ ನೋವೆಂದು ಆಸ್ಪತ್ರೆಗೆ ತೆರಳಿದ್ದ ನಂತರ ಅತ್ಯಾಚಾರಕ್ಕೊಳಗಾದ ಯುವತಿ ಗರ್ಭಾವತಿಯಾಗಿದ್ದು ಪತ್ತೆಯಾಗಿದೆ.  ತಂದೆ ತಾಯಿಯನ್ನು ಕಳೆದುಕೊಂಡು ಯುವತಿ ಅಜ್ಜಿ ಮನೆಯಲ್ಲಿ ವಾಸವಿದ್ದಳು.  ಯುವತಿ ಜಮೀನಿಗೆ ತೆರಳುತ್ತಿರುವಾಗ ಆಕೆಯ ಮೇಲೆ ಕಾಮುಕ ಸಾಬಣ್ಣ ಎಂಬಾತ ಅತ್ಯಾಚಾರ ಎಸಗಿದ್ದ. ಇದೀಗ  ಐದು ತಿಂಗಳ ನಂತರ ಆರೋಪಿಯ ನೀಚ ಕೃತ್ಯ ಬೆಳಕಿಗೆ ಬಂದಿದೆ. 

Tap to resize

Latest Videos

undefined

ಕೊಪ್ಪಳ: ಮಕ್ಕಳಿಗೆ ದೌರ್ಜನ್ಯ, ಮಹಿಳೆಯರ ಜತೆ ರಾಸಲೀಲೆ, ಕಾಮುಕ ಶಿಕ್ಷಕ ಸಸ್ಪೆಂಡ್‌

ಪ್ರಕರಣಕ್ಕೆ ಸಂಬಂಧಿಸಿ ಸೈದಾಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಾಬಣ್ಣನನ್ನು ಬಂಧಿಸಲಾಗಿದೆ. ಈ ಬಗ್ಗೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ‌ ಪ್ರತಿಕ್ರಿಯೆ ನೀಡಿ 30 ವರ್ಷದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.  ಹೆತ್ತವರಿಲ್ಲದ ಹಿನ್ನೆಲೆ ಸಂತ್ರಸ್ತೆಯು ಅಜ್ಜಿ  ಮನೆಯಲ್ಲಿ ವಾಸವಾಗಿದ್ದಳು. ಸಂತ್ರಸ್ತೆ ಯುವತಿಯು ಐದು ತಿಂಗಳ ಗರ್ಭಿಣಿಯಾಗಿದ್ದಾಳೆ. ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿದ ವೇಳೆ ಯುವತಿ ಗರ್ಭಿಣಿಯಾಗಿರುವ ವಿಚಾರ ಬಹಿರಂಗವಾಗಿದೆ. ಪೊಲೀಸರು ಈ ಕುರಿತು ಹೆಚ್ಚಿನ ತನೀಖೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾಹಿತಿ ನೀಡಿದ್ದಾರೆ.

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 1.53 ಕೋಟಿ ವಂಚನೆ: ಇಬ್ಬರ ಬಂಧನ

ಜೇಬಿಗೆ ಕತ್ತರಿ ಹಾಕಲು ಹೋಗಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಖದೀಮ: ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಕುರಿಗಳ ಸಂತೆಯಲ್ಲಿ  ರೈತರ ಜೇಬು ಕತ್ತರಿಸಿ ಹಣ ದೋಚುತ್ತಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ.  ಮಾತ್ರವಲ್ಲ ಸಾರ್ವಜನಿಕರಿಂದ ಕಳ್ಳನಿಗೆ ಸಖತ್ ಗೂಸಾ ಸಿಕ್ಕಿದೆ. ಇಂದು ಭಾನುವಾರವಾದ ಕಾರಣ ಹುಣಸಗಿಯಲ್ಲಿ ಕುರಿ ಸಂತೆ ಇತ್ತು. ಗ್ರಾಮೀಣ ಭಾಗದಿಂದ ಹುಣಸಗಿಗೆ ನೂರಾರು ಜನ ಸಂತೆಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಜೇಬಿನಿಂದ ಹಣ ಎಗರಿಸಲು ಕಳ್ಳ ಹೊಂಚು ಹಾಕಿದ್ದ. ಬಳಿಕ ಕಳ್ಳ ತನ್ನ ಕೈಚಳ ತೋರಿಸಲು ಮುಂದಾಗಿದ್ದಾನೆ. ಈ ವೇಳೆ ಸಿಕ್ಕಿಬಿದ್ದ ಕಳ್ಳನಿಗೆ ಜನರು ಸರಿಯಾಗಿ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಣಸಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!