ಕೆರೆಯಲ್ಲಿ ಅಣ್ಣನ ಮಗ ಬಿದ್ದನೆಂದು ರಕ್ಷಿಸಲು ಹೋದ ಚಿಕ್ಕಪ್ಪನೂ ಸಾವು

By Sathish Kumar KHFirst Published Jun 1, 2023, 11:31 PM IST
Highlights

ಕೆರೆಯಲ್ಲಿ ನೀರು ತುಂಬಿಕೊಂಡು ಬರಲುಹೋದ ಅಣ್ಣನ ಮಗ ಜಾರಿಬಿದ್ದನೆಂದು ರಕ್ಷಣೆ ಮಾಡಲು ಹೋದ ಚಿಕ್ಕಪ್ಪ ಸೇರಿ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ.

ರಾಯಚೂರು (ಜೂ.1): ನರೇಗಾ ಕೆಲಸಕ್ಕೆ ಹೋಗಾದ ಚಿಕ್ಕ ಬಾಲಕನನ್ನು ಕೆರೆಯಲ್ಲಿ ನೀರು ತುಂಬಿಕೊಂಡು ಬಾ ಎಂದು ಕಳುಹಿಸಿದಾಗ ಕಾಲು ಜಾರಿಬಿದ್ದು, ಚೀರಾಡುತ್ತಿದ್ದನು. ಬಾಲಕನ ಚೀರಾಟದ ಶಬ್ದ ಕೇಳಿ ಅಣ್ಣನ ಮಗನನ್ನು ರಕ್ಷಣೆ ಮಾಡಲು ಹೋದ ಚಿಕ್ಕಪ್ಪ ಹಾಗೂ ಮಗ ಇಬ್ಬರೂ ಕೆರೆಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ರಾಯಚೂರು ತಾಲೂಕಿನ ಕೊರ್ತಕುಂದಾ ಗ್ರಾಮದಲ್ಲಿ ನಡೆದಿದೆ.

ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಗ್ಯಾರಂಟಿ ಕಾಯ್ದೆ (ನರೇಗಾ ಯೋಜನೆ)  (Mahatma Gandhi National Rural Employment Guarantee Act- MGNREGA) ಅಡಿಯಲ್ಲಿ ರಾಯಚೂರು ತಾ. ಕೊರ್ತಕುಂದಾ ಗ್ರಾಮದ ಹೊರವಲಯದ ಕೆಲಸ ಮಾಡಲು ಕಾರ್ಮಿಕರು ಹೋಗಿದ್ದಾರೆ. ಈ ವೇಳೆ ಮನೆಯಲ್ಲಿದ್ದರೆ ಮಕ್ಕಳು ತುಂಟಾಟ ಮಾಡಿಕೊಂಡು ಅಥವಾ ಅಪಾಯಕಾರಿ ಆಟದ ಮೂಲಕ ಗಾಯ ಮಾಡಿಕೊಳ್ಳುತ್ತಾರೆ ಎಂದು ಮಗನನ್ನೂ ಕೂಲಿ ಕಾರ್ಮಿಕ ಕೆಲಸದ ಬಳಿ ಕರೆದುಕೊಂಡು ಹೋಗಿದ್ದಾರೆ. ಇನ್ನು ಕುಟುಂಬ ಸದಸ್ಯರು ಕೆಲಸ ಮಾಡುವ ವೇಳೆ ಬಾಲಕನನ್ನು ಕರೆದು ಕೆರೆಯಲ್ಲಿ ನೀರುತುಂಬಿಕೊಂಡು ಬರುವಂತೆ ಕಳುಹಿಸಲಾಗಿದೆ.

ಮೈಸೂರು ಆಯ್ತು ಬೆಳಗಾವಿಯಲ್ಲಿ ಭೀಕರ ಅಪಘಾತ : ಒಬ್ಬ ಸಾವು, ಮೂವರ ಸ್ಥಿತಿ ಗಂಭೀರ

ಕೆರೆಯಲ್ಲಿ ಜಾರಿಬಿದ್ದ ಬಾಲಕ: ಇನ್ನು ಗ್ರಾಮದ ಹೊರವಲಯದಲ್ಲಿದ್ದ ಕೆರೆಯಲ್ಲಿನ ನೀರು ತರಲು ಹೋದ ಬಾಲಕ ಕಾಲುಜಾರಿ ಕೆರೆಯಲ್ಲಿ ಬಿದ್ದು, ಕಾಪಾಡುವಂತೆ ಚೀರಾಡಿದ್ದಾನೆ. ಇನ್ನು ಪಕ್ಕದಲ್ಲಿಯೇ ನರೇಗಾ ಕೆಲಸ ಮಾಡುತ್ತಿದ್ದವರ ಪೈಕಿ ಬಾಲಕ ಚಿಕ್ಕಪ್ಪ ಓಡಿ ಹೋಗಿ ಬಾಲಕ ಮುಳುಗುವುದನ್ನು ಕಾಪಾಡಲು ನೀರಿಗೆ ಧುಮುಕಿದ್ದಾರೆ. ಆದರೆ, ನೀರಿನ ಆಳ ಹೆಚ್ಚಾಗಿದ್ದರಿಂದ ಬಾಲಕ ಹಾಗೂ ಚಿಕ್ಕಪ್ಪ ಇಬ್ಬರೂ ನೀರಿನಲ್ಲಿ ಮುಳುಗಿ ಇಹಲೋಕವನ್ನೇ ತ್ಯಜಿಸಿದ್ದಾರೆ. ಮೃತ ಚಿಕ್ಕಪ್ಪ ಸಲೀಂ ಹುಸೇನಸಾಬ್ (32) ಹಾಗೂ ಅಣ್ಣನ ಮಗ ಯಾಸೀನ್ ರಫಿ (13) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಮೃತ ದುರ್ದೈವಿಗಳಾಗಿದ್ದಾರೆ. 

ಚಿಕ್ಕಪ್ಪನೂ ಕೂಡ ಮರಳಿ ಬರಲೇ ಇಲ್ಲ:  ಕೆರೆಯಲ್ಲಿ ನೀರು ತರಲು ಹೋದ ಬಾಲಕ ಹಾಗೂ ಆತನ ಚಿಕ್ಕಪ್ಪ ಎಷ್ಟೊತ್ತಾದರೂ ಕೆಲಸ ಮಾಡುವ ಸ್ಥಳಕ್ಕೆ ಬಾರದೇ ಇದ್ದಾಗ ಸ್ಥಳಕ್ಕೆ ಹೋಗಿ ಉಳಿದವರು ನೋದಿದ್ದಾರೆ. ಆಗ ಇಬ್ಬರೂ ನಾಪತ್ತೆಯಾಗಿದದ, ನೀರಿನಲ್ಲಿ ಮುಳುಗಿದ್ದಾರೆ ಎಂದು ಖಚಿತವಾಗಿದೆ. ಆಗ ಸ್ಥಳೀಯ ನುರಿತ ಈಜುಗಾರರು ಹಾಗೂ ಮುಳುಗು ತಜ್ಞರ ಸಹಾಯದಿಂದ ಮೃತ ಚಿಕ್ಕಪ್ಪ ಹಾಗೂ ಮಗನ ಮೃತ ದೇಹಗಳನ್ನು ಮೇಲಕ್ಕೆತ್ತಲಾಗಿದೆ. ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಂತರ, ಸ್ಥಳೀಯ ಯಾಪಲದಿನ್ನಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರಿಮ್ಸ್ ಆಸ್ಪತ್ರೆ ರವಾನೆ ಮಾಡಲಾಗಿದೆ. ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು. 

ಹೆಂಡತಿ ಮೇಲಿನ ಕೋಪಕ್ಕೆ ಅವಳಿ ಮಕ್ಕಳನ್ನು ಕತ್ತುಹಿಸುಕಿ ಕೊಂದ ಪಾಪಿ ತಂದೆ

ದಾವಣಗೆರೆ (ಜೂ.1): ಗಂಡ-ಹೆಂಡತಿ ಜಗದಳಲ್ಲಿ ಕೂಸು ಬಡವಾಯ್ತು ಎನ್ನುವುದು ಗಾದೆಯಾಗಿದೆ. ಆದರೆ, ಇಲ್ಲಿ ತಂದೆ-ತಾಯಿ ಜಗಳದಲ್ಲಿ ಕೂಸುಗಳು ಬಡವಾಗುವ ಬದಲು ಪ್ರಾಣವನ್ನೇ ಕಳೆದುಕೊಂಡಿವೆ. ಅದು ಕೂಡ ಜನ್ಮ ಕೊಟ್ಟ ತಂದೆಯೇ ತನ್ನಿಬ್ಬರು ಅವಳಿ ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿರುವ ದುರ್ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಜೀವನದಲ್ಲಿ ಸಂಸಾರ ಎಂಬ ಬಂಡಿಯನ್ನು ಗಂಡ- ಹೆಂಡತಿ ಸೇರಿ ಎರಡು ಎತ್ತುಗಳಂತೆ ಸರಿಸಮಾನವಾಗಿ ಎಳೆದುಕೊಂಡು ಹೋಗಬೇಕು. ಇಲ್ಲವೆಂದರೆ ಎತ್ತು ಏರಿಗೆ, ಕೋಣ ನೀರಿಗೆ ಎಂಬಂತೆ ಇಬ್ಬರೂ ಒಂದೊಂದು ದಿಕ್ಕಿಗೆ ಎಳೆದುಕೊಂಡು ಹೋದರೆ ಕೂಸು ಬಡವಾಯ್ತು ಎನ್ನುವಂತೆ ಮಕ್ಕಳು ಅನಾಥವಾಗುತ್ತವೆ. ಆದರೆ, ಇಲ್ಲಿ ಗಂಡ-ಹೆಂಡತಿ ಜಗರಳಲ್ಲಿ ಕೂಸು ಬಡವಾಗುವ ಬದಲು ಪ್ರಾಣವನ್ನೇ ಕಳೆದುಕೊಂಡಿವೆ. ಅದು ಕೂಡ ಜನ್ಮ ಕೊಟ್ಟ ತಂದೆಯೇ ತನ್ನಿಬ್ಬರು ಅವಳಿ ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

click me!