ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೀತಿಸಿದ ಹುಡುಗಿ ಕೈಕೊಟ್ಲು ಅಂತಾ ಆತ್ಮಹತ್ಯೆ ಮಾಡಿಕೊಂಡ ಯುವಕ

By Sathish Kumar KH  |  First Published Aug 7, 2024, 3:38 PM IST

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ 5 ವರ್ಷ ಪ್ರೀತಿಸಿದರೂ ಕೈಕೊಟ್ಟ ಹುಡುಗಿ. ಲವ್‌ ಫೇಲ್ಯೂರ್‌ನಿಂದ ಆತ್ಮಹತ್ಯೆಗೆ ಶರಣಾರ ರಾಯಚೂರು ಯುವಕ. 


ರಾಯಚೂರು (ಆ.07): ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಹುಡುಗಿ ಪ್ರೀತಿ ಮಾಡುವುದಾಗಿ ಚಾಟಿಂಗ್ ಮಾಡಿ ನಂತರ ಕೈಕೊಟ್ಟ ಹಿನ್ನೆಲೆಯಲ್ಲಿ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಜನತಾಹೌಸ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಮೃತನನ್ನು ಮಾನ್ವಿ ಪಟ್ಟಣದ ನಿವಾಸಿ ವರುಣ್ (26)ಆತ್ಮಹತ್ಯೆಗೆ ಒಳಗಾದ ಯುವಕ ಎಂದು ಗುರುತಿಸಲಾಗಿದೆ. ಈತ ಪ್ರೀತಿ ಮಾಡುವ ಯುವತಿಗೆ ಬೇರೊಬ್ಬನ ಜೊತೆಗೆ ಮದುವೆ ನಿಶ್ಚಯವಾಗಿದ್ದಕ್ಕೆ ಮನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. 

Tap to resize

Latest Videos

undefined

ಉಡುಪಿಯಲ್ಲಿ ನಿಂತಲ್ಲೇ ಅಲ್ಲಾಡುತ್ತಿದ್ದ ಕಾರು; ಜನರಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ರತಿಕ್ರೀಡಾ ಜೋಡಿ!

ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂ ಮೂಲಕ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಯುವತಿ ಪರಿಚಯವಾಗಿದ್ದಾಳೆ. ಇವರಿಬ್ಬರು ಆರಂಭದಲ್ಲಿ ಮೆಸೇಜ್ ಮಾಡುತ್ತಲೇ ಸ್ನೇಹ ಬೆಳೆಸಿಕೊಂಡಿದ್ದಾರೆ. ನಂತರ ಇಬ್ಬರ ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗಿದೆ. ಇಬ್ಬರೂ ಸುಮಾರು 5 ವರ್ಷಗಳಿಂದ ಸಂಪರ್ಕದಲ್ಲಿದ್ದು ಪ್ರೀತಿ ಮಾಡುತ್ತಿದ್ದರು. ಇದೇ ವೇಳೆ ಪ್ರೀತಿಸುವ ಹುಡುಗನಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಗಂಗಾವತಿಯ ಯುವತಿ ರಾಯಚೂರಿಗೆ ಬಂದು 3 ವರ್ಷಗಳ ಕಾಲ ನರ್ಸಿಂಗ್ ಅಭ್ಯಾಸವನ್ನೂ ಮಾಡಿದ್ದಾಳೆ. ಈ ವೇಳೆ ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಾ ಸುತ್ತಾಡಿದ್ದಾರೆ.

ಇನ್ನು ನರ್ಸಿಂಗ್ ಅಭ್ಯಾಸ ಪೂರ್ಣಗೊಂಡ ಬೆನ್ನಲ್ಲಿಯೇ ಊರಿಗೆ ತೆರಳಿದ್ದ ಯುವತಿಗೆ ಮನೆಯವರು ಮದುವೆ ಮಾಡಲು ಮುಂದಾಗಿದ್ದಾರೆ. ಆದರೆ, ಯುವಕನನ್ನು ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಲು ಯುವತಿಗೆ ಧೈರ್ಯ ಬಂದಿಲ್ಲ. ಇನ್ನು ಯುವಕನೊಂದಿಗೆ ಹೋಗಿ ಮದುವೆ ಮಾಡಿಕೊಳ್ಳಲೂ ನಿರ್ಧಾರ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ 4 ತಿಂಗಳ ತಿಂಗಳುಗಳ ಹಿಂದೆ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಮದುವೆ ನಿಶ್ಚಯವಾಗ್ತಿದ್ದಂತೆ ವರುಣ್‌ನನ್ನು ಯುವತಿ ದೂರ ಮಾಡಲು ಆರಂಭಿಸಿದ್ದಾಳೆ.

ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ, ಹತ್ಯೆಗೆ ಸಿಕ್ತು ಬಿಗ್ ಟ್ವಿಸ್ಟ್!

ಆದರೆ, ಸುಮಾರು 5 ವರ್ಷದಿಂದ ಪ್ರೀತಿಸಿದ ಹುಡುಗಿಯನ್ನು ಬಿಟ್ಟಿರಲಾಗದೇ ಮನನೊಂದ ಯುವಕ ಕೊನೆಗೆ ತನ್ನ ಪ್ರೇಯಸಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾನೆ. ನಂತರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತಾಯಿಯ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತ ವರುಣ್ ಶವವನ್ನು ಮಾನ್ವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

click me!