ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ತನಿಖೆಯಲ್ಲಿ ಪೊಲೀಸರಿಗೆ ದರ್ಶನ್ ವಿರುದ್ದ ಮತ್ತೊಂದು ಬಹುದೊಡ್ಡ ಸಾಕ್ಷಿ ಸಿಕ್ಕಿದೆ.
ಬೆಂಗಳೂರು (ಆ.7): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿ (RenukaSwamy) ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಆಗಿರುವ ನಟ ದರ್ಶನ್ (Actor Darshan), ಆತ್ಮೀಯ ಗೆಳತಿ ಪವಿತ್ರಾ ಗೌಡ ( Pavithra Gowda) ಸೇರಿ ಒಟ್ಟು 17 ಮಂದಿ ಈಗ ಜೈಲ್ಲಿನಲ್ಲಿದ್ದಾರೆ.
ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ತನಿಖೆಯಲ್ಲಿ ಪೊಲೀಸರಿಗೆ ದರ್ಶನ್ ವಿರುದ್ದ ಮತ್ತೊಂದು ಬಹುದೊಡ್ಡ ಸಾಕ್ಷಿ ಸಿಕ್ಕಿದೆ. ದರ್ಶನ್ ಕೊಲೆಯಲ್ಲಿ ಭಾಗಿಯಾಗಿರುವ ಸಂಬಂಧ ಎಫ್ ಎಸ್ ಎಲ್ ವರದಿ ಬಂದಿದ್ದು, ರೇಣುಕಾಸ್ವಾಮಿ ದೇಹದ ರಕ್ತದ ಕಲೆಗಳು ದರ್ಶನ್ ಬಟ್ಟೆಗಳ ಮೇಲೆ ಸಿಕ್ಕಿದೆ.
ಕಾರವಾರ ಸೇತುವೆ ಕುಸಿತ, ಪೊಲೀಸರು ಬರದೇ ಇದ್ದಿದ್ರೆ ಮತ್ತಷ್ಟು ದುರಂತ, ಡೈವರ್ ಬದುಕುತ್ತಿರಲಿಲ್ಲ!
ಈ ಅತಿ ದೊಡ್ಡ ಸಾಕ್ಷ್ಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆ ಕಂಟಕವಾಗಲಿದೆ. ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡಿದ್ದ ಅವರ ನೀಲಿ ಬಣ್ಣ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ರೌಂಡ್ ನೆಕ್ ಶರ್ಟ್ ನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಬೆಳಕಿಗೆ ಬಂದಿದೆ.
ಮಹಜರು ವೇಳೆ ವಶಪಡಿಸಿಕೊಂಡಿದ್ದ ದರ್ಶನ್ ಬಟ್ಟೆಯನ್ನು ಪೊಲೀಸರು ಎಫ್ ಎಸ್ ಎಲ್ ಗೆ ಕಳುಹಿಸಿದ್ದರು. ಎಫ್ ಎಸ್ ಎಲ್ ಪರಿಶೀಲನೆಯಲ್ಲಿ ದರ್ಶನ್ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇವುಗಳು ರೇಣುಕಾಸ್ವಾಮಿಯ ದೇಹದ ರಕ್ತ ಎಂಬುದು ಎಫ್ ಎಸ್ ಎಲ್ ವರದಿಯಲ್ಲಿ ಧೃಡಪಟ್ಟಿದೆ. ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಭಾಗಿಯಾಗಿದ್ದ ಎನ್ನುವುದಕ್ಕೆ ಇದು ಅತ್ಯಂತ ಮಹತ್ವಪೂರ್ಣ ಸಾಕ್ಷ್ಯ ಎನ್ನಲಾಗಿದೆ.
ಉತ್ತರ ಕನ್ನಡ: ಮಧ್ಯರಾತ್ರಿ ಕುಸಿದು ಕಾಳಿ ನದಿ ಪಾಲಾದ 1 ಕಿಮೀ ಉದ್ದದ ಸೇತುವೆ, ಟ್ರಕ್ ಡ್ರೈವರ್ ಬಚಾವ್!