ಡ್ರಗ್ ಪ್ರಕರಣದಲ್ಲಿ ಜೈಲು ಸೇರಿದ್ದ ಸಂಜನಾ, ರಾಗಿಣಿಯಲ್ಲಿ ಇದೀಗ ಸಂಜನಾಗೆ ಬೇಲ್ ಸಿಕ್ಕಿದೆ. ಆದರೆ ರಾಗಿಣಿ ಇನ್ನೂ ಜೈಲಲ್ಲೇ ಇದ್ದು ಅವರ ಪೋಷಕರು ಬೇಲ್‌ಗಾಗಿ ಸಿಕ್ಕಾಪಟ್ಟೆ ಓಡಾಡುತ್ತಿದ್ದಾರೆ.
ಬೆಂಗಳೂರು (ಡಿ.15): ಸಂಜನಾ ಬೇಲ್ ಆದ ಬೆನ್ನಲ್ಲೇ,ಜೈಲಿನಲ್ಲಿ ಇರುವ ರಾಗಿಳಿ ಅಳಲು ತೋಡಿಕೊಂಡಿದ್ದಾರೆ. ರಾಗಿಣಿ ಅಷ್ಟೇ ಅಲ್ಲದೆ ಅವರ ತಂದೆ ತಾಯಿಯೂ ಈ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರನ್ನ ಭೇಟಿ ಮಾಡಲು ರಾಗಿಣಿ ತಂದೆ ತಾಯಿ ತೆರಳಿದ್ದಾರೆ. ರಾಗಿಣಿ ತಂದೆ ರಾಕೇಶ್, ತಾಯಿ ರೋಹಿಣಿ ಆಯುಕ್ತರನ್ನು ಭೇಟಿ ಮಾಡಲು ತೆರಳಿದ್ದು ತನಿಖೆಯ ಮಾಹಿತು ಪಡೆಯಲಿದ್ದಾರೆ.
ಇಸ್ಲಾಂಗೆ ನಟಿ ಸಂಜನಾ ಬಲವಂತದ ಮತಾಂತರ : ಪೊಲೀಸರಿಗೆ ದೂರು
ತನಿಖೆಯಿಂದಾಗಿ ಏನಾದ್ರು ಸಮಸ್ಯೆ ಆಗ್ತಿದ್ಯಾ..? ಸಂಜನಾಗೆ ಹೇಗೆ ಬೇಲ್ ಸಿಕ್ಕಿದೆ ಎಂದು ಈ ಬಗ್ಗೆ ಮಾಹಿತಿ ಪಡೆಯಲು ಪೋಷಕರು ಆಗಮಿಸಿದ್ದಾರೆ.
ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಜೊತೆ ರಾಗಿಣಿ ಪೋಷಕರು ಆಗಮಿಸಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ರಾಗಿಣಿ ಅರ್ಜಿ ಹಾಕಿದ್ದು, NDPS ಕೋರ್ಟ್,ಹೈಕೋರ್ಟ್ ನಲ್ಲಿ ಜಾಮೀನು ಸಿಗದ ಕಾರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸದ್ಯ ತಮ್ಮ ಮಗಳಿಗೂ ಬೇಲ್ ಕೊಡಿಸುವತ್ತ ಪೋಷಕರು ತಯಾರಿ ಮಾಡುತ್ತಿದ್ದಾರೆ.